ಪಾಲಕ್ಕಾಡ್: ಪಾಲಕ್ಕಾಡ್‍ನ ಮುತ್ತಲಮಾಡದಲ್ಲಿ ಕೆಎಸ್‍ಇಬಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಅಧಿಕಾರಿಗಳು ಕೆಎಸ್‍ಇಬಿ ಕಚೇರಿಗೆ ಬೀಗ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ದೂರು ನೀಡಲು ಕರೆ ಮಾಡಿದಾಗ ಅಥವಾ ಖುದ್ದಾಗಿ ಬಂದಾಗ ಕಚೇರಿಯಲ್ಲಿ ಯಾರೂ ಇಲ್ಲ ಎಂಬ ಆರೋಪವೂ ಇದೆ.
ಕಚೇರಿಗೆ ಜನರ ಗುಂಪೆÇಂದು ಪಂಜಿನೊಂದಿಗೆ ಪ್ರತಿಭಟನೆ ನಡೆಸಿತು. ಪ್ರತಿಭಟನಾಕಾರರು ಬಂದ ಬಳಿಕ, ಅಧಿಕಾರಿಗಳು ಬಂದು ಗೇಟ್ ತೆರೆದರು. ಕೆಎಸ್‍ಇಬಿ ಕಚೇರಿ ಕಟ್ಟಡ ಮತ್ತು ಮುತ್ತಲಮಾಡ ಸೇವಾ ಸಹಕಾರಿ ಬ್ಯಾಂಕ್ ಒಂದೇ ಆವರಣದಲ್ಲಿವೆ.
ಬ್ಯಾಂಕ್ ನೌಕರರು ಗೇಟ್‍ಗೆ ಬೀಗ ಹಾಕಿದ್ದಾರೆ ಎಂದು ಕೆಎಸ್‍ಇಬಿ ಅಧಿಕಾರಿಗಳು ವಿವರಿಸಿದರು. ಐಎಸ್‍ಜೆಡಿ ಕಾರ್ಯಕರ್ತರು ಪಂಜು ಹಚ್ಚಿ ಪ್ರತಿಭಟನೆ ನಡೆಸಿದರು. ರಾತ್ರಿ 9 ಗಂಟೆಯ ನಂತರ ಪ್ರತಿಭಟನೆ ನಡೆಯಿತು.

