HEALTH TIPS

ಗ್ರಾನೈಟ್ ಉದ್ಯಮಿ, ಜೆಮ್ ಗ್ರೂಪ್‌ ಅಧ್ಯಕ್ಷ ವೀರಮಣಿ ಸೆಕ್ಸ್ ಹಗರಣ: ಮತಷ್ಟು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ಲೋಕಲ್ 'Epstein files' ಎಂದ ನೆಟ್ಟಿಗರು!

 ಚೆನ್ನೈ: ಹಲವು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಚೆನ್ನೈ ಮೂಲದ ಗ್ರಾನೈಟ್ಸ್‌ ಉದ್ಯಮಿ ಹಾಗೂ ಜೆಮ್ ಗ್ರೂಪ್‌ನ ಅಧ್ಯಕ್ಷ ಆರ್. ವೀರಮಣಿಯನ್ನು ಪೋಕ್ಸೊ(POCSO) ಪ್ರಕರಣದಲ್ಲಿ ಬಂಧಿಸಲಾಗಿದ್ದು, ಇದೀಗ ಮತ್ತಷ್ಟು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಸಿಐಡಿ ತನಿಖೆಯಿಂದ ಬಯಲಾಗಿದೆ.


ವೀರಮಣಿ 2003 ಅಥವಾ ಅದಕ್ಕೂ ಮುಂಚೆಯೇ ಇನ್ನೂ ಅನೇಕ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಕೇಂದ್ರ ಅಪರಾಧ ವಿಭಾಗ(CCB)ದ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಮದ್ರಾಸ್ ಹೈಕೋರ್ಟ್ ವ್ಯಾಪ್ತಿಯ ಪೋಕ್ಸೊ ಪ್ರಕರಣಗಳ ವಿಶೇಷ ನ್ಯಾಯಾಲಯದ ಮುಂದೆ ಮತ್ತಷ್ಟು ಸಂತ್ರಸ್ತರ ಬಾಲಕಿಯರ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆಚ್ಚುವರಿ ಸಂತ್ರಸ್ತರ ಸಂಖ್ಯೆಯನ್ನು ಬಹಿರಂಗಪಡಿಸಲು ನಿರಾಕರಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಬಡತನದ ಹಿನ್ನೆಲೆಯ ಬಾಲಕಿಯರ ಮೇಲೆ ವ್ಯವಸ್ಥಿತವಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಲೈಂಗಿಕ ದೌರ್ಜನ್ಯ ನಡೆದಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ತನಿಖೆಯ ಕುರಿತು ಪ್ರಮುಖ ಮಾಹಿತಿಯನ್ನು ನೀಡಿದ ಆ ಅಧಿಕಾರಿ, ಸಹ-ಆರೋಪಿಯೊಬ್ಬರು ವೀರಮಣಿಗೆ ಕಳುಹಿಸಿದ್ದ ಪಠ್ಯ ಸಂದೇಶವೊಂದು(text message) 2003ರ ಘಟನೆಯನ್ನು ನೇರವಾಗಿ ಉಲ್ಲೇಖಿಸಿದೆ ಎಂದು ತಿಳಿಸಿದರು. ಆ ಘಟನೆಯು ವೀರಮಣಿಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಆರೋಪವಿದ್ದ, ಅಪ್ರಾಪ್ತ ಬಾಲಕಿಯೊಬ್ಬಳ ಆತ್ಮಹತ್ಯೆಗೆ ಸಂಬಂಧಿಸಿದ್ದಾಗಿದೆ.

"ಈ ಸಾಕ್ಷ್ಯವು, ಲೈಂಗಿಕ ದೌರ್ಜನ್ಯವು ಎರಡು ದಶಕ ಕಾಲ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ನಡೆದಿದೆ ಎಂದು ಶಂಕಿಸಲು ತನಿಖಾ ತಂಡಕ್ಕೆ ಕಾರಣವಾಯಿತು" ಎಂದು ಅವರು ಹೇಳಿದರು.

ಪ್ರಕರಣದ ತನಿಖೆಯಲ್ಲಿ ಹಲವು ಸಂತ್ರಸ್ತರನ್ನು ಪೊಲೀಸರು ಗುರುತಿಸಿರುವ ಹಿನ್ನೆಲೆಯಲ್ಲಿ, ಇದು ಕೇವಲ ಒಂದು ಘಟನೆಯ ಪ್ರಕರಣವಲ್ಲ, ಹಲವು ವರ್ಷಗಳಿಂದ ನಡೆದಿರಬಹುದಾದ ಸರಣಿ ಲೈಂಗಿಕ ದೌರ್ಜನ್ಯಗಳು ಎಂಬ ಆರೋಪಗಳು ಕೇಳಿ ಬಂದಿವೆ.

ತನಿಖಾಧಿಕಾರಿಗಳು ಟೇಯ್ನಾಂಪೇಟ್ ಮನೆ ಮಾತ್ರವಲ್ಲದೆ ವೀರಮಣಿಯ ನಿವಾಸ, ಕಚೇರಿ ಹಾಗೂ ಚೆನ್ನೈ ಹೊರವಲಯದಲ್ಲಿರುವ ಅತಿಥಿಗೃಹ ಸೇರಿದಂತೆ ಇತರ ಸ್ಥಳಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ತನಿಖೆಯಲ್ಲಿ ಗುರುತಿಸಲ್ಪಟ್ಟ ಸಂತ್ರಸ್ತೆಯೊಬ್ಬರು ಪರಿಶಿಷ್ಟ ಜಾತಿಗೆ ಸೇರಿದವರು ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಕರಣಕ್ಕೆ SC/ST (Prevention of Atrocities) Act, 1989ರ ಸಂಬಂಧಿತ ವಿಧಿಗಳನ್ನು ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೋಕಲ್ ‘Epstein filesʼ ಎಂದ ಜನ!

ಅಮೆರಿಕದ ಜೆಫ್ರಿ ಎಪ್ಸ್ಟೀನ್ ಪ್ರಕರಣದೊಂದಿಗೆ ವೀರಮಣಿ ಪ್ರಕರಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹೋಲಿಸುತ್ತಿದ್ದು, ಇದು ಲೋಕಲ್ ‘Epstein filesʼ ಎಂದು ಟೀಕಿಸಿದ್ದಾರೆ. ವೀರಮಣಿ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದ್ದು, ಇತರ ವ್ಯಕ್ತಿಗಳ ಪಾತ್ರ ಅಥವಾ ಆರೋಪಿತ ಕೃತ್ಯಗಳ ಸಂಪೂರ್ಣ ವ್ಯಾಪ್ತಿಯ ಕುರಿತು ಪೊಲೀಸರು ಅಂತಿಮ ನಿರ್ಧಾರಕ್ಕೆ ಬಂದಿಲ್ಲ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries