HEALTH TIPS

NFL ಪಂದ್ಯದ ವೇಳೆ ಫೆಲೆಸ್ತೀನ್ ಬಾಲಕಿ ʼಹಿಂದ್ ರಾಜಬ್ʼ ಹೆಸರಿನ ಪಟ್ಟಿ ಧರಿಸಿದ್ದಕ್ಕೆ ಆಟಗಾರನಿಗೆ 11,492 ಡಾಲರ್ ದಂಡ

ವಾಷಿಂಗ್ಟನ್ NFL ಪಂದ್ಯದಲ್ಲಿ ಫೆಲೆಸ್ತೀನ್ ಬಾಲಕಿ ಹಿಂದ್ ರಾಜಬ್ ಅವರ ಹೆಸರನ್ನು ಬರೆದಿದ್ದ ಕಪ್ಪು ಪಟ್ಟಿಯನ್ನು ಮೂಗಿನ ಮೇಲೆ ಧರಿಸಿದ್ದ ಕಾರಣಕ್ಕೆ ಹ್ಯೂಸ್ಟನ್ ಟೆಕ್ಸನ್ಸ್ ತಂಡದ ಲೈನ್‌ ಬ್ಯಾಕರ್‌ ಅಝೀಝ್ ಅಲ್-ಶಾಈರ್‌ಗೆ NFL 11,492 ಡಾಲರ್ ದಂಡವನ್ನು ವಿಧಿಸಿದೆ. 


ಈ ದಂಡವನ್ನು ಡಲ್ಲಾಸ್ ಮ್ಯಾವೆರಿಕ್ಸ್ ತಂಡದ ತಾರೆ ಕೈರಿ ಇರ್ವಿಂಗ್ ತಾವೇ ಪಾವತಿಸುವುದಾಗಿ ಹೇಳಿದ್ದಾರೆ.

ಅಝೀಝ್ ಅಲ್-ಶಾಈರ್‌ ಅವರ ದಂಡವನ್ನು ನಾನು ಪಾವತಿಸುತ್ತೇನೆ ಎಂದು ಇರ್ವಿಂಗ್ ಹೇಳಿದ್ದಾರೆ. ರವಿವಾರ ಬಫಲೋ ಬಿಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಈ ಸಂದೇಶವನ್ನು ಪ್ರದರ್ಶಿಸಿದ್ದಕ್ಕಾಗಿ ಅಲ್-ಶಾಈರ್‌ಗೆ 11,492 ಡಾಲರ್ ದಂಡ ವಿಧಿಸಲಾಗಿದೆ ಎಂದು ವರದಿಯಾದ ಬಳಿಕ, ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಇರ್ವಿಂಗ್ ಈ ಪ್ರತಿಕ್ರಿಯೆ ನೀಡಿದ್ದಾರೆ.

'ಹಿಂದ್ ರಜಬ್' 2024ರಲ್ಲಿ ಗಾಝಾದಲ್ಲಿ ಇಸ್ರೇಲ್‌ ಸೇನೆ ನಡೆಸಿದ ದಾಳಿಯಲ್ಲಿ ಮೃತಪಟ್ಟ 5 ವರ್ಷದ ಫೆಲೆಸ್ತೀನ್ ಬಾಲಕಿ. ಯುದ್ಧಪೀಡಿತ ಗಾಝಾದಿಂದ ತನ್ನ ಕುಟುಂಬಸ್ಥರೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾಗ ಇಸ್ರೇಲ್ ಪಡೆಗಳು ಕಾರಿನ ಮೇಲೆ ನಡೆಸಿದ ದಾಳಿಯಲ್ಲಿ ಹಿಂದ್ ರಜಬ್‌ ಹೊರತುಪಡಿಸಿ ಕಾರಿನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದರು. ಈ ವೇಳೆ ಬಾಲಕಿ ಗಾಝಾದ ಫೆಲೆಸ್ತೀನ್ ರೆಡ್ ಕ್ರೆಸೆಂಟ್ ಸೊಸೈಟಿಗೆ ಅಳುತ್ತಾ ಕರೆ ಮಾಡಿ ಸಹಾಯಕ್ಕಾಗಿ ಬೇಡಿಕೊಂಡರು. ತನಗೆ ಸಹಾಯ ಮಾಡುವಂತೆ ಆ ಮಗು ಆಡಿದ ಮಾತು ಜಗತ್ತನ್ನೇ ದಿಗ್ಭ್ರಮಗೊಳಿಸಿತ್ತು.

ಗಾಝಾದ ರೆಡ್ ಕ್ರೆಸೆಂಟ್ ಸೊಸೈಟಿಯ ಆಂಬುಲೆನ್ಸ್ ನ ಸಿಬ್ಬಂದಿ ಬಾಲಕಿ ʼಹಿಂದ್ ರಜಬ್' ಳನ್ನು ಕಾರಿನಿಂದ ಸುರಕ್ಷಿತವಾಗಿ ಹೊರಗೆ ತಂದಿದ್ದರು. ಆದರೆ ಈ ಆಂಬುಲೆನ್ಸ್ ನ ಮೇಲೆಯೂ ಇಸ್ರೇಲ್ ಪಡೆ ಗುಂಡಿನ ದಾಳಿ ನಡೆಸಿತ್ತು. ಇದರಲ್ಲಿ ಹಿಂದ್ ರಜಬ್ ಮತ್ತು ಸ್ವಯಂಸೇವಕರು ಮೃತಪಟ್ಟಿದ್ದರು. ಆಕೆಯ ನೆನಪಿನಲ್ಲಿ ಅಲ್-ಶಾಈರ್ ಈ ಹೆಸರನ್ನು ಬರೆದಿದ್ದರು.

NFL ವೈಯಕ್ತಿಕ ಸಂದೇಶಗಳನ್ನು ಪ್ರದರ್ಶಿಸುವುದರ ವಿರುದ್ಧ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದೆ. ಲೀಗ್‌ನ ನಿಯಮಾವಳಿ ಪ್ರಕಾರ, "ಲೀಗ್ ಕಚೇರಿಯಿಂದ ಮುಂಚಿತವಾಗಿ ಅನುಮೋದನೆ ಪಡೆಯದ ಹೊರತು, ಆಟಗಾರರು ಬರಹ ಅಥವಾ ಚಿತ್ರಗಳ ರೂಪದಲ್ಲಿ ವೈಯಕ್ತಿಕ ಸಂದೇಶಗಳನ್ನು ಹೊಂದಿರುವ ಪಟ್ಟಿಗಳನ್ನು ಧರಿಸುವುದು, ಪ್ರದರ್ಶಿಸುವುದು ಅಥವಾ ಇತರ ಯಾವುದೇ ರೀತಿಯಲ್ಲಿ ವ್ಯಕ್ತಪಡಿಸುವುದನ್ನು ನಿಷೇಧಿಸಲಾಗಿದೆ."

ಅಲ್-ಶಾಈರ್ ವಿರುದ್ಧ ದಂಡ ವಿಧಿಸಿರುವ ಕುರಿತ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಇರ್ವಿಂಗ್, "ಅವರ ದಂಡವನ್ನು ನಾನು ಪಾವತಿಸುತ್ತೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಅಲ್-ಶಾಈರ್ ಈ ಹಿಂದೆ ಕೂಡ ಗಾಝಾ ಮೇಲಿನ ಯುದ್ಧವನ್ನು ವಿರೋಧಿಸಿ ಕಪ್ಪು ಪಟ್ಟಿಯನ್ನು ಬಳಸಿದ್ದರು. ಪಿಟ್ಸ್ಬರ್ಗ್ ಸ್ಟೀಲರ್ಸ್ ವಿರುದ್ಧ ನಡೆದ ಪ್ಲೇಆಫ್ ಪಂದ್ಯದಲ್ಲಿ "Stop The Genocide" ಎಂಬ ಸಂದೇಶವನ್ನು ಪ್ರದರ್ಶಿಸಿದ್ದಕ್ಕಾಗಿ ಅವರಿಗೆ ಜನವರಿಯಲ್ಲಿ 11,593 ಡಾಲರ್ ದಂಡ ವಿಧಿಸಲಾಗಿತ್ತು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries