ಕಾಸರಗೋಡು: ಇತಿಹಾಸಪ್ರಸಿದ್ಧ ಕಾಸರಗೋಡು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ಶಿವಲಿಂಗ ಪ್ರತಿಷ್ಠೆ ಮತ್ತು ಬ್ರಹ್ಮಕಲಶ ಮಹೋತ್ಸವವು 2027 ಮೇ 3ರಿಂದ 11ರ ತನಕ ನಡೆಯಲಿದೆ. ಬ್ರಹ್ಮಕಲಶೋತ್ಸವ ಸುಸೂತ್ರವಾಗಿ ನಡೆಸಲು 'ಪುನ:ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ' ಸಮಿತಿ ರಚನಾ ಸಭೆಯು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಅಕ್ಟೋಬರ್ 11ರಂದು ಸಂಜೆ 6.30ಕ್ಕೆ ದೇವಸ್ಥಾನದಲ್ಲಿ ಜರಗಲಿರುವುದು. ಈ ಮಹತ್ವದ ಸಭೆಯಲ್ಲಿ ಊರ ಪರವೂರ ಭಕ್ತಬಾಂಧವರು, ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.

