HEALTH TIPS

ಡಿಎಚ್‌ಎಫ್‌ಎಲ್ ಹಗರಣ | 1 ಕೋಟಿ ರೂ. ಲಂಚ ಪಡೆದ ಆರೋಪ: ಎಸ್‌ಎಫ್‌ಐಒ ಅಧಿಕಾರಿ, ನ್ಯಾಯವಾದಿ ಸಹಿತ ಮೂವರು ಸಿಬಿಐ ಬಲೆಗೆ

ಚೆನ್ನೈ: ಡಿಎಚ್‌ಎಫ್‌ಎಲ್ ಹಗರಣದ ತನಿಖೆಯಲ್ಲಿ ದೂರುದಾರರ ಪರವಾಗಿ ವರ್ತಿಸಲು 1 ಕೋಟಿ ರೂ. ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಚೆನ್ನೈಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಂಭೀರ ವಂಚನೆ ಪ್ರಕರಣಗಳ ತನಿಖಾ ಕಚೇರಿ ( ಎಸ್‌ಎಫ್‌ಐಓ)ಯ ಜಿಲ್ಲಾ ಉಪನಿರ್ದೇಶಕ ಮಟ್ಟದ ಅಧಿಕಾರಿ ಹಾಗೂ ದಿಲ್ಲಿ ಮೂಲದ ನ್ಯಾಯವಾದಿ ಮತ್ತು ಆತನ ಬಂಧುವೊಬ್ಬರನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಬುಧವಾರ ಬಂಧಿಸಿದೆ. 


2017ನೇ ಬ್ಯಾಚ್‌ನ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ ಹಾಗೂ ಪ್ರಸಕ್ತ ಚೆನ್ನೈನ ಎಸ್‌ಎಫ್‌ಐಒ ಕಚೇರಿಯಲ್ಲಿ ಉಪನಿರ್ದೇಶಕರಾಗಿರುವ ಹರೀಶ್ ಕುಮಾರ್ ತನ್ವಾರ್, ಹೊಸದಿಲ್ಲಿಯ ನ್ಯಾಯವಾದಿ ಭರತ್ ಶರ್ಮಾ ಹಾಗೂ ಅವರ ಸಂಬಂಧಿ ಆರ್ಯನ್ ಶರ್ಮಾ ಅವರನ್ನು ಸಿಬಿಐ ಬಲೆ ಬೀಸಿ ಬಂಧಿಸಿದೆ. ಎಸ್‌ಎಫ್‌ಐಒ ಅಧಿಕಾರಿಯವರ ಪರವಾಗಿ ನ್ಯಾಯವಾದಿಯು ದೂರುದಾರರಿಂದ 20 ಲಕ್ಷ ರೂ. ಹಣವನ್ನು ಪಡೆದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಈ ಬಂಧನ ಕಾರ್ಯಾಚರಣೆ ನಡೆದಿದೆ.

ಸಿಬಿಐ ಮಂಗಳವಾರ ಪ್ರಕರಣವನ್ನು ದಾಖಲಿಸುವ ಮುನ್ನ ದೂರನ್ನು ಪರಿಶೀಲಿಸಿದೆ. ತರುವಾಯ ಬಲೆ ಬೀಸಿದ ತನಿಖಾ ಸಂಸ್ಥೆಯು ಎಸ್‌ಎಫ್‌ಐಒ ಅಧಿಕಾರಿ ಪರವಾಗಿ ವಕೀಲನು ದೂರುದಾರನಿಂದ 20 ಲಕ್ಷ ರೂ. ಸ್ವೀಕರಿಸುತ್ತಿದ್ದಾಗ ಈ ಮೂವರು ಆರೋಪಿಗಳನ್ನು ಬಂಧಿಸಿದೆ.

ಎಸ್‌ಎಫ್‌ಐಒ ಅಧಿಕಾರಿ ಹಾಗೂ ವಕೀಲರ ಕಚೇರಿ ಹಾಗೂ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದ ಸಿಬಿಐ, ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಕ್ರಿಮಿನಲ್ ಸಂಚು ಆರೋಪಕ್ಕೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 61 (2) ಹಾಗೂ 1988 ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ಗಳಾದ 7 ಹಾಗೂ 7ಎ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ (ಡಿಎಚ್‌ಎಫ್‌ಎಲ್) ಹಾಗೂ ಅದರ ಪ್ರವರ್ತಕರಾದ ಕಪಿಲ್ ವಾದ್ವಾನ್ ಹಾಗೂ ಧೀರಜ್ ವಾದ್ವಾನ್ ಶಾಮೀಲಾಗಿದ್ದಾರೆನ್ನಲಾದ 34,615 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಹಾಗೂ ಕಪ್ಪುಹಣ ಬಿಳುಪುಗೊಳಿಸಿದ ಬೃಹತ್ ಹಗರಣ ಇದಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದಲ್ಲಿ 17 ಸಾರ್ವಜನಿಕ ಹಾಗೂ ಖಾಸಗಿ ರಂಗದ ಬ್ಯಾಂಕ್‌ಗಳ ಸಮೂಹವು ಡಿಎಚ್‌ಎಫ್‌ಎಲ್‌ಗೆ 42,871.42 ಕೋಟಿ ರೂ.ಸಾಲವನ್ನು ಮಂಜೂರು ಮಾಡಿತ್ತು. ಆದರೆ ಈ ಹಣವನ್ನು ದುರುಪಯೋಪಡಿಸಿಕೊಂಡ ಪರಿಣಾಮ 34,615 ಕೋಟಿ ರೂ. ಭಾರೀ ನಷ್ಟಕ್ಕೆ ಕಾರಣವಾಗಿತ್ತು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries