HEALTH TIPS

ಜಿ-20 ವಿದೇಶಾಂಗ ಸಚಿವರ ಸಭೆಯಲ್ಲಿ ಒಮ್ಮತವಿಲ್ಲ; ಜಂಟಿ ಹೇಳಿಕೆಗೆ ಹಿನ್ನಡೆ, ಗ್ರೂಪ್ ಫೋಟೋ ರದ್ದು

ಅಟ್ಲಾಂಟಾ: ಜಿ-20 ವಿದೇಶಾಂಗ ಸಚಿವರ ಸಭೆಯು ಪ್ರಮುಖ ವಿಷಯಗಳಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗದೆ ಮುಕ್ತಾಯಗೊಂಡಿದೆ. ಪ್ರತಿ ಬಾರಿಯ ಸಭೆಯ ನಂತರ ಬಿಡುಗಡೆ ಮಾಡಲಾಗುತ್ತಿದ್ದ ಜಂಟಿ ಪ್ರಕಟಣೆ ಈ ಬಾರಿ ಹೊರಬಿದ್ದಿಲ್ಲ. ಬದಲಾಗಿ, ಅಮೆರಿಕದ ಅಧ್ಯಕ್ಷತೆಯಲ್ಲಿ ಕೇವಲ 'ಅಧ್ಯಕ್ಷರ ಹೇಳಿಕೆ'ಗೆ (ಚೇರ್ಮನ್ಸ್ ಸ್ಟೇಟ್‌ಮೆಂಟ್) ಸಭೆಯನ್ನು ಸೀಮಿತಗೊಳಿಸಲಾಯಿತು. ಜತೆಗೆ ಶೃಂಗಸಭೆಯ ಭಾಗವಾಗಿ ನಡೆಯುತ್ತಿದ್ದ ಸಾಂಪ್ರದಾಯಿಕ ಗ್ರೂಪ್ ಫೋಟೋ ಸೆಷನ್ ಅನ್ನೂ ಕೈಬಿಡಲಾಗಿದೆ. 


ಜಂಟಿ ಪ್ರಕಟಣೆಯನ್ನು ಬಿಡುಗಡೆ ಮಾಡದಿರುವ ತೀರ್ಮಾನವೂ ರುಬಿಯೊ ಅವರ ನೇತೃತ್ವದಲ್ಲೇ ನಡೆದಿದೆ. ಬದಲಾಗಿ, ಸಭೆಯ ಅಧ್ಯಕ್ಷರಾಗಿ ಅವರು ಪ್ರತ್ಯೇಕ ಹೇಳಿಕೆ ನೀಡಲು ಕ್ರಮ ಕೈಗೊಂಡರು.

ರಷ್ಯಾ-ಉಕ್ರೇನ್ ಯುದ್ಧ, ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಗಳು, ಅಮೆರಿಕದ ಆಮದು ಸುಂಕಗಳು ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹಿತಾಸಕ್ತಿಗಳಂತಹ ವಿಷಯಗಳು ಸದಸ್ಯ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾದವು. ಅಮೆರಿಕದ ನಿರ್ಧಾರದಂತೆ ಜಿ-20 ಸದಸ್ಯ ರಾಷ್ಟ್ರವಾದ ದಕ್ಷಿಣ ಆಫ್ರಿಕಾವನ್ನು ಸಭೆಗೆ ಆಹ್ವಾನಿಸದಿರುವುದು ಇತರ ಸದಸ್ಯ ರಾಷ್ಟ್ರಗಳ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು.

ಡಿಸೆಂಬರ್‌ನಲ್ಲಿ ಫ್ಲೋರಿಡಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆತಿಥ್ಯದಲ್ಲಿ ನಡೆಯಲಿರುವ ಜಿ-20 ನಾಯಕರ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗವಹಿಸುವ ಬಗ್ಗೆಯೂ ಯಾವುದೇ ಸ್ಪಷ್ಟತೆ ಇಲ್ಲ. ಜಿ-20 ಒಕ್ಕೂಟದ ಸಾಮೂಹಿಕ ನಿರ್ಧಾರಗಳ ಬದಲು ಅಮೆರಿಕ ತನ್ನ ನಿಲುವುಗಳನ್ನು ಹೇರಲು ಯತ್ನಿಸುತ್ತಿದೆಯೇ ಎಂಬ ಚರ್ಚೆಯೂ ಸಭೆಯಲ್ಲಿ ವ್ಯಕ್ತವಾಯಿತು.

ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗಳು ಮತ್ತೆ ತೀವ್ರಗೊಳ್ಳುವ ಸಾಧ್ಯತೆ ಸದಸ್ಯ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ. ಅಮೆರಿಕದ ಮಧ್ಯಂತರ ಚುನಾವಣೆಯ ನಂತರದ ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತೂ ಸಭೆಯಲ್ಲಿ ಚರ್ಚೆಗಳು ನಡೆದವು.

ವಿಶ್ವದ ಪ್ರಮುಖ 19 ದೇಶಗಳು, ಯುರೋಪಿಯನ್ ಯೂನಿಯನ್ ಮತ್ತು ಆಫ್ರಿಕನ್ ಯೂನಿಯನ್ ಒಳಗೊಂಡಿರುವ ಜಿ-20 ಒಕ್ಕೂಟದಲ್ಲಿ, ಪರಸ್ಪರ ಹಿತಾಸಕ್ತಿ ಹಾಗೂ ಅಂತರರಾಷ್ಟ್ರೀಯ ವಿಷಯಗಳಲ್ಲಿ ತೀವ್ರ ಭಿನ್ನಾಭಿಪ್ರಾಯಗಳಿದ್ದರೂ ಹಿಂದಿನ ಶೃಂಗಸಭೆಗಳಲ್ಲಿ ಒಮ್ಮತಕ್ಕೆ ಬಂದು ಜಂಟಿ ಹೇಳಿಕೆ ಬಿಡುಗಡೆ ಮಾಡಲು ಸಾಧ್ಯವಾಗಿತ್ತು. ವಿದೇಶಾಂಗ ಸಚಿವರ ಸಭೆಯಲ್ಲಿ ಪ್ರಮುಖ ಅಂತರರಾಷ್ಟ್ರೀಯ ವಿಚಾರಗಳಲ್ಲಿ ಮೂಡುವ ಒಮ್ಮತವೇ ರಾಷ್ಟ್ರ ಮುಖ್ಯಸ್ಥರು ಭಾಗವಹಿಸುವ ನಾಯಕರ ಶೃಂಗಸಭೆಗೆ ವೇದಿಕೆ ಕಲ್ಪಿಸುತ್ತದೆ. ಆದರೆ, ಅಟ್ಲಾಂಟಾದ ಸಭೆಯಲ್ಲಿ ಒಮ್ಮತ ಮೂಡದಿರುವುದು ಜಿ-20 ಒಕ್ಕೂಟದ ಒಳಗಿನ ಭಿನ್ನಾಭಿಪ್ರಾಯಗಳನ್ನು ಮತ್ತಷ್ಟು ಬಹಿರಂಗಪಡಿಸಿದೆ. 




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries