HEALTH TIPS

ಭಾರತದಲ್ಲಿ ತೀವ್ರ ಬಡತನ ಪ್ರಮಾಣ ಶೇ 2.6ಕ್ಕೆ ಇಳಿಕೆ-ವಿಶ್ವಬ್ಯಾಂಕ್‌ ವರದಿ


ನವದೆಹಲಿ: ಭಾರತದಲ್ಲಿ 2011ರಲ್ಲಿ ಶೇ 27.1ರಷ್ಟಿದ್ದ ತೀವ್ರ ಬಡತನದ ಪ್ರಮಾಣವು 2023ರ ವೇಳೆಗೆ ಶೇ 2.6ಕ್ಕೆ ತೀವ್ರವಾಗಿ ಇಳಿಕೆಯಾಗಿದೆ. ಈ ಅವಧಿಯಲ್ಲಿ ದೇಶವು ಅಂದಾಜು 49.6 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದೆ ಎಂದು ವಿಶ್ವಬ್ಯಾಂಕ್‌ ವರದಿ ತಿಳಿಸಿದೆ.

'ಭಾರತದಲ್ಲಿ ಬಡತನದ ರೇಖೆಯನ್ನು ನಿರ್ಧರಿಸಲು ಕೆಳ-ಮಧ್ಯಮ ಆದಾಯದ ದೇಶಗಳ ಮಾನದಂಡವಾದ ದಿನಕ್ಕೆ 4.20 ಡಾಲರ್‌ (ಸುಮಾರು ₹398) ಮತ್ತು ತೀವ್ರ ಬಡತನದ ಮಾನದಂಡವಾದ ದಿನಕ್ಕೆ 3 ಡಾಲರ್‌ (ಸುಮಾರು ₹284) ಆದಾಯವನ್ನು 2021ರ ಕೊಳ್ಳುವ ಶಕ್ತಿ ಸಮಾನತೆ ಆಧಾರದ ಮೇಲೆ ಪರಿಗಣಿಸಲಾಗಿದೆ ಎಂದು ವಿಶ್ವಬ್ಯಾಂಕ್‌ನ 'ಭಾರತದ ಬಡತನ ಮತ್ತು ಸಮಾನತೆಯ ಸಂಕ್ಷಿಪ್ತ ವರದಿ: ಅಕ್ಟೋಬರ್ 2026' ಎಂಬ ವರದಿ ತಿಳಿಸಿದೆ.

'ಕಳೆದ ದಶಕದಲ್ಲಿ, ಭಾರತವು ಹಣಕಾಸಿನ ಮತ್ತು ಹಣಕಾಸೇತರ ಎರಡೂ ಆಯಾಮಗಳಲ್ಲಿ ಬಡತನವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಇದು ಜಗತ್ತಿನಲ್ಲೇ ಅತಿ ವೇಗವಾಗಿ ಬಡತನ ಇಳಿಕೆಯಾದ ದೇಶಗಳಲ್ಲಿ ಒಂದು ಎಂದು ದಾಖಲಿಸಿದೆ' ಎಂದು ಹೇಳಿದೆ.

'2011 ಮತ್ತು 2023ರ ನಡುವೆ ಭಾರತದಲ್ಲಿ ಅಂದಾಜು 49.6 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಕೆಳ-ಮಧ್ಯಮ ಆದಾಯದ ರೇಖೆಗಿಂತ ಕೆಳಗಿದ್ದ ಜನರ ಪ್ರಮಾಣವು ಶೇ 57.7ರಿಂದ ಶೇ 16.1ಕ್ಕೆ ಇಳಿದಿದೆ. ತೀವ್ರ ಬಡತನ ರೇಖೆಗಿಂತ ಕೆಳಗಿದ್ದವರ ಪ್ರಮಾಣವು ಶೇ 27.1ರಿಂದ ಶೇ 2.6ಕ್ಕೆ ಕುಸಿದಿದೆ' ಎಂದು ತಿಳಿಸಿದೆ.

'ಬಡತನ ಪ್ರಮಾಣವು ಇನ್ನಷ್ಟು ನಿಧಾನವಾಗಿಯಾದರೂ ಇಳಿಮುಖವಾಗುತ್ತಲೇ ಇರುತ್ತದೆ ಎಂದು ಅಂದಾಜಿಸಲಾಗಿದೆ. ಕೆಳ-ಮಧ್ಯಮ ಆದಾಯದ ರೇಖೆಗಿಂತ ಕೆಳಗಿನ ಬಡತನದ ಪ್ರಮಾಣವು 2026ರಲ್ಲಿ ಶೇ 14.2ರಷ್ಟಿದ್ದು, ಅದು 2028ರ ವೇಳೆಗೆ ಶೇ 12.1ಕ್ಕೆ ಕುಸಿಯುವ ನಿರೀಕ್ಷೆಯಿದೆ' ಎಂದು ವಿವರಿಸಿದೆ.

'ಸರ್ಕಾರದ ನೀತಿಯಿಂದ ಈ ಫಲಿತಾಂಶ'

'ಖರ್ಚು ಮಾಡುವ ಸಾಮರ್ಥ್ಯ ಹೆಚ್ಚಳ ಹೆಚ್ಚುತ್ತಿರುವ ಉದ್ಯೋಗಾವಕಾಶಗಳು- ವಿಶೇಷವಾಗಿ ಮಹಿಳೆಯರಲ್ಲಿ ಮತ್ತು ಆಹಾರ ಸಬ್ಸಿಡಿಗಳು ಸೇರಿದಂತೆ ವಿಸ್ತೃತ ಸಾಮಾಜಿಕ ಸಹಾಯಧನಗಳು ಮುಖ್ಯ ಪ್ರೇರಕ ಶಕ್ತಿಗಳೆಂದು ವಿಶ್ವ ಬ್ಯಾಂಕ್‌ ಗುರುತಿಸಿದೆ' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 'ಎಕ್ಸ್‌' ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. 'ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರದ ನಿರಂತರ ನೀತಿ ನಿರ್ಧಾರಗಳು ಸ್ಪಷ್ಟ ಫಲಿತಾಂಶಗಳನ್ನು ನೀಡುತ್ತಿವೆ. ಇವು ಒಳಗೊಳ್ಳುವಿಕೆಯ ಬೆಳವಣಿಗೆ ಮತ್ತು ಹೆಚ್ಚಿನ ಆರ್ಥಿಕ ಅವಕಾಶಗಳಿಗಾಗಿ ಅಡಿಪಾಯವನ್ನು ಬಲಪಡಿಸುತ್ತಿವೆ' ಎಂದು ಹೇಳಿದ್ದಾರೆ. 'ಎನ್‌ಡಿಎ ಸರ್ಕಾರವು ಜನರ ವಿಶ್ವಾಸವನ್ನು ಮತ್ತು ಜನಾದೇಶವನ್ನು ಪಡೆಯಲು ಇದೇ ಕಾರಣವಾಗಿದೆ. ನಮ್ಮ ಜನರ ಆಕಾಂಕ್ಷೆಗಳು ಈಡೇರುವಂತೆ ಮಾಡಲು ಉತ್ಪಾದಕ ಉದ್ಯೋಗಗಳು ಬಲವಾದ ಕುಟುಂಬ ಆದಾಯಗಳು ಮತ್ತು ಸಾರ್ವಜನಿಕ ಸೇವೆಗಳ ಪರಿಣಾಮಕಾರಿ ವಿತರಣೆಯ ಮೂಲಕ ಈ ಪ್ರಗತಿಯನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ' ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries