2023ರ ಏಪ್ರಿಲ್ 10ರಿಂದ ಹೆಚ್ಚುವರಿ ಶುಲ್ಕ ಪಾವತಿಸಿದವರಿಗೆ ಹಣ ವಾಪಸ್ ಪಡೆಯಲು ಅವಕಾಶ ವಿಸ್ತರಣೆ
ತಿರುವನಂತಪುರಂ: ಕೇರಳದಲ್ಲಿ ಕಟ್ಟಡ ನಿರ್ಮಾಣ ಪರವಾನಗಿ ಶುಲ್ಕದ ಮರುಪಾವತಿಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಸರ್ಕಾರ ವಿಸ್ತರಿಸಿದೆ. 2023ರ ಏಪ್ರಿಲ್ 10ರಿಂದ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಲ್ಲಿ ಕಟ್ಟಡ ನಿರ್ಮಾಣ ಪರವಾನಗಿಗಾಗಿ ಹೆಚ್ಚುವರಿ ಶುಲ್ಕ ಪಾವತಿಸಿದವರು, ಮರುಪಾವತಿ ಪಡೆಯಲು 2026ರ ಡಿಸೆಂಬರ್ 31ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಆದೇಶ ಹೊರಡಿಸಿದೆ.
ಕೇರಳ ಪಂಚಾಯತ್ ಮತ್ತು ಪುರಸಭೆ ಕಟ್ಟಡ ನಿರ್ಮಾಣ ನಿಯಮಗಳ ಪ್ರಕಾರ, 2023ರ ಏಪ್ರಿಲ್ 10ರಿಂದ ಜಾರಿಯಲ್ಲಿದ್ದ ದರದಂತೆ ಅರ್ಜಿ ಶುಲ್ಕ, ಕಟ್ಟಡ ಪರವಾನಗಿ ಶುಲ್ಕ ಹಾಗೂ ಲೇಔಟ್ ಅನುಮೋದನೆಗೆ ಸಂಬಂಧಿಸಿದ ಪರಿಶೀಲನಾ ಶುಲ್ಕ (ಸ್ಕ್ರೂಟಿನಿ ಫೀ) ಪಾವತಿಸಿದವರಿಗೆ ಈ ಮರುಪಾವತಿ ಸೌಲಭ್ಯ ಅನ್ವಯವಾಗಲಿದೆ.
2023ರ ಏಪ್ರಿಲ್ 10ರಂದು ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಶುಲ್ಕಗಳನ್ನು ಹೆಚ್ಚಿಸಲಾಗಿತ್ತು. ಬಳಿಕ 2024ರ ಆಗಸ್ಟ್ 1ರಂದು ಹೊರಡಿಸಲಾದ ಸರ್ಕಾರಿ ಆದೇಶದ ಮೂಲಕ ಶುಲ್ಕದ ದರಗಳನ್ನು ಕಡಿಮೆ ಮಾಡಲಾಗಿತ್ತು. ಪರಿಷ್ಕೃತ ದರಕ್ಕಿಂತ ಹೆಚ್ಚುವರಿಯಾಗಿ ವಸೂಲಿ ಮಾಡಲಾದ ಮೊತ್ತವನ್ನು ಹಿಂದಿರುಗಿಸಲು ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.
ಮರುಪಾವತಿಗೆ ಅರ್ಹರಾಗಿರುವ ಅರ್ಜಿದಾರರಿಗೆ ಹಣವನ್ನು ಹಿಂದಿರುಗಿಸುವ ಜವಾಬ್ದಾರಿಯನ್ನು ಸಂಬಂಧಪಟ್ಟ ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳ ಕಾರ್ಯದರ್ಶಿಗಳಿಗೆ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ.
ಅರ್ಹ ಫಲಾನುಭವಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ ಮರುಪಾವತಿ ಸೌಲಭ್ಯವನ್ನು ಪಡೆದುಕೊಳ್ಳಬಹುದು.



