HEALTH TIPS

ದೃಶ್ಯಂ 3 ಚಿತ್ರ ಪ್ರೇರಣೆ: ಚಿನ್ನದ ಚೈನ್‌ಗಾಗಿ ಸಹಪಾಠಿಯನ್ನೇ ಕೊಂದ ಸ್ನೇಹಿತರು!

ಠಾಣೆ: ಗೆಳೆಯನ ಹುಟ್ಟುಹಬ್ಬದ ಪಾರ್ಟಿ ಆಚರಿಸಲು ಮತ್ತು ಹೊಸ ಬೈಕ್ ಖರೀದಿಗಾಗಿ ಸಹಪಾಠಿಯೊಬ್ಬನನ್ನೇ ಕೊಲೆ ಮಾಡಿ ಆತನ ಬಳಿಯಿದ್ದ ₹1 ಲಕ್ಷ ಮೌಲ್ಯದ ಚಿನ್ನದ ಸರ ದೋಚಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಠಾಣೆಯಲ್ಲಿ ಬೆಳಕಿಗೆ ಬಂದಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ನೆರಡನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದೃಶ್ಯಂ 3' ಸಿನಿಮಾ ವೀಕ್ಷಿಸಿದ್ದ ಆರೋಪಿಗಳು, ಅದರಿಂದ (ಸಿನಿಮಾ) ಪ್ರೇರಣೆ ಪಡೆದು ಸಾಕ್ಷ್ಯ ನಾಶಪಡಿಸಲು ಹಾಗೂ ಪೊಲೀಸರ ದಾರಿ ತಪ್ಪಿಸಲು ಯೋಜನೆ ರೂಪಿಸಿದ್ದರು ಎಂಬ ವಿಷಯ ತನಿಖೆಯಲ್ಲಿ ಬಯಲಾಗಿದೆ.

ಘಟನೆ ಹಿನ್ನೆಲೆ

ಸೆಪ್ಟೆಂಬರ್ 24ರ ಸಂಜೆ ಸಹಪಾಠಿಯನ್ನು (ಮೃತ ಬಾಲಕ) ಸಿಗರೇಟ್ ಸೇದುವ ನೆಪದಲ್ಲಿ 'ಬ್ರಹ್ಮಾಂಡ್ ಫೇಸ್ 2' ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿಗಳು, ಚಾಕು ಮತ್ತು ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಕೃತ್ಯದ ನಂತರ ಮೃತದೇಹವನ್ನು ಪೊದೆಯಲ್ಲಿ ಅಡಗಿಸಿ, ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದಾರೆ. ಸಾಕ್ಷ್ಯ ನಾಶಕ್ಕೆ ಬಾಲಕನ ಫೋನ್ ಅನ್ನು ನಾಶಪಡಿಸಿದ್ದಾರೆ.

ಆರಂಭದಲ್ಲಿ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣ ಭೇದಿಸಿದ್ದು ಹೇಗೆ?

ತನಿಖೆ ಕೈಗೆತ್ತಿಕೊಂಡ ಪೊಲೀಸರು ಸುಮಾರು 90 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಸಂಶಯಾಸ್ಪದ ವ್ಯಕ್ತಿಗಳ ಮೊಬೈಲ್ ನೆಟ್‌ವರ್ಕ್ ಮತ್ತು ಕಾಲ್ ಡೇಟಾ ವಿಶ್ಲೇಷಿಸಿದಾಗ ಈ ಇಬ್ಬರು ವಿದ್ಯಾರ್ಥಿಗಳು ಮಾಹಿತಿಯನ್ನು ಮುಚ್ಚಿಡುತ್ತಿರುವುದು ಕಂಡುಬಂದಿದೆ.

ಪೋಲಿಸರು ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದಾಗ ಒಬ್ಬ ಆರೋಪಿ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆತನ ಸುಳಿವಿನ ಮೇರೆಗೆ ಪೊಲೀಸರು ಅರ್ಧ ಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹದ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಹೇಳಿಕೆ

ಬಂಧಿತ ಆರೋಪಿಗಳು ಓದಿನಲ್ಲಿ ಹಿಂದಿದ್ದರೂ, ಸಾಕ್ಷ್ಯ ನಾಶಪಡಿಸುವ ವಿಚಾರದಲ್ಲಿ ಜಾಣತನ ಪ್ರದರ್ಶಿಸಿದ್ದರು. ಇತ್ತೀಚೆಗಷ್ಟೇ 'ದೃಶ್ಯಂ 3' ಸಿನಿಮಾ ನೋಡಿದ್ದ ಇವರು, ಪೊಲೀಸರ ಕಣ್ಣು ತಪ್ಪಿಸಲು ಸಿನಿಮಾದ ತಂತ್ರಗಳನ್ನು ಬಳಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.






 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries