ಕಠ್ಮಂಡು: ನೇಪಾಳದ ಗೋರ್ಖಾ ಜಿಲ್ಲೆಯ ಬುಢೀಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದು, ಸುಮಾರು 50 ಜನರನ್ನು ಭಾನುವಾರ ರಕ್ಷಿಸಲಾಗಿದೆ.
ಪ್ರವಾಹದಲ್ಲಿ ಕನಿಷ್ಠ 10 ಜನರು ನಾಪತ್ತೆಯಾಗಿದ್ದಾರೆ. ಆದಾಗ್ಯೂ, ಈವರೆಗೆ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.
ಪ್ರವಾಹಪೀಡಿತ ಸ್ಥಳಗಳ ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಒತ್ತಾಯಿಸಿದ್ದಾರೆ.
ಪ್ರವಾಹದಿಂದ ಸುಮಾರು 12 ಮನೆಗಳು, ಸೇತುವೆಗಳು ಕೊಚ್ಚಿಹೋಗಿದ್ದು, ಎರಡು ಜಲವಿದ್ಯುತ್ ಯೋಜನೆಗಳು ಹಾನಿಗೊಳಗಾಗಿವೆ ಎಂದು ಅವರು ಹೇಳಿದ್ದಾರೆ.
ಹಠಾತ್ ಪ್ರವಾಹಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಬುಢೀಗಂಡಕಿ ನದಿಯ ಉಪ ನದಿಯಾದ ಸಿಯಾರ್ ಹೊಳೆ ಮುಚ್ಚಿಹೋಗಿದ್ದೇ ಇದಕ್ಕೆ ಕಾರಣ ಇರಬಹುದು ಎಂದು ನಿವಾಸಿಗಳು ಶಂಕಿಸಿದ್ದಾರೆ.
ಜಿಲ್ಲೆಯ ಚುಮ್ನುಬ್ರಿಯಲ್ಲಿ ಒಂದು ಕಿ.ಮೀ. ಉದ್ದದ ಭೂಕುಸಿತ ಸಂಭವಿಸಿದ್ದು, ಐದು ಹಸುಗಳ ಕೊಟ್ಟಿಗೆಗಳು ಕೊಚ್ಚಿಹೋಗಿವೆ ಎಂದು ಗೋರ್ಖಾ ಜಿಲ್ಲಾಡಳಿತ ಹೇಳಿದೆ.
ನೇಪಾಳ-ಚೀನಾ ಗಡಿಯಲ್ಲಿ ಆಗಸ್ಟ್ ವೇಳೆ ಸಂಭವಿಸಿದ ಪ್ರವಾಹದಿಂದ 1,400ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದರು.



