HEALTH TIPS

'ಬ್ರಾಹ್ಮಣ, ಬನಿಯಾ, ಪಟೇಲ್ ಸಮುದಾಯ'ದವರು ಕಸ ಗುಡಿಸಿದರೆ 50,000 ರೂ ನೀಡುತ್ತೇನೆ': ಕ್ಷಮೆ ಯಾಚಿಸಲು ಗುಜರಾತ್‌ನ ಮಾಜಿ ಸಿಎಂ ವಘೇಲಾ ನಕಾರ!

 ಗಾಂಧಿನಗರ: ತಮ್ಮ ರಾಜಕೀಯ ಹೇಳಿಕೆಗಳ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುವ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಶಂಕರ್‌ಸಿನ್ಹ್ ವಘೇಲಾ, ಮೇಲ್ವರ್ಗದ ಸಮುದಾಯಗಳ ಕುರಿತು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. 


ಪಟೇಲ್, ಬನಿಯಾ ಮತ್ತು ಬ್ರಾಹ್ಮಣ ಸಮುದಾಯಗಳ ಕುರಿತು ನೀಡಿರುವ ಹೇಳಿಕೆಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೂ ವಘೇಲಾ, ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ. ತಾನು ಯಾವುದೇ ಸಮುದಾಯದ ವಿರುದ್ಧ ಇಲ್ಲ. ಈ ವಿಷಯದಲ್ಲಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿನ್ನೆ ನೀಡಲಾದ ಹೇಳಿಕೆಯನ್ನು ಯಾವುದೇ ಕಾರಣವಿಲ್ಲದೆ ದೊಡ್ಡ ವಿವಾದ ಮಾಡಲಾಗುತ್ತಿದೆ. ನನ್ನ ಹೇಳಿಕೆಯ ನಿಜವಾದ ಅರ್ಥವನ್ನು ಅರ್ಥಮಾಡಿಕೊಳ್ಳದೆ ಬಿಜೆಪಿಗರು ವಿನಾಕಾರಣ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈಗ ಇರುವ ಬಿಜೆಪಿ ಸರ್ಕಾರಕ್ಕೆ ಮೀಸಲಾತಿ ಪಡೆಯುವ ಸಮುದಾಯಗಳ ಬಗ್ಗೆ ಒಲವಿಲ್ಲ. ವರ್ಷಗಳ ಹಿಂದೆ ತ್ಯಾಜ್ಯ ಸ್ವಚ್ಛಗೊಳಿಸುವ ಅತ್ಯಂತ ಕಠಿಣ ಕೆಲಸವನ್ನು ಮಾಡಿದ ಸಮುದಾಯಕ್ಕೆ ಇಂದು ಮೀಸಲಾತಿ ಸಿಗುತ್ತಿದೆ. ನಿಜವಾದ ಅರ್ಥದಲ್ಲಿ ಅದು ಅವರಿಗೆ ಸಿಗುತ್ತಿರುವ ಪರಿಹಾರವಾಗಿದೆ ಎಂದು ಅವರು ಹೇಳಿದ್ದಾರೆ.

ಏನಿದು ವಿವಾದ? ಕಾಂಗ್ರೆಸ್ ನಾಯಕ ಅಮಿತ್ ಚಾವ್ಡಾ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಘೇಲಾ, ಪಟೇಲ್, ಬನಿಯಾ ಮತ್ತು ಬ್ರಾಹ್ಮಣ ಸಮುದಾಯಗಳಿಗೆ ಸಂಬಂಧಿಸಿದಂತೆ ಬಹಿರಂಗವಾಗಿ ಸವಾಲೊಂದನ್ನು ಹಾಕಿದ್ದರು.

ಪಟೇಲ್, ಬನಿಯಾ ಅಥವಾ ಬ್ರಾಹ್ಮಣ ಸಮುದಾಯದ ಜನರು ಕೊಳಚೆಯನ್ನು ಸ್ವಚ್ಛಗೊಳಿಸಿದರೆ, ನಾನು ಅವರಿಗೆ 50,000 ರೂ ಹಣ ನೀಡುತ್ತೇನೆ ಎಂದು ಅವರು ಹೇಳಿದ್ದರು. ಮೀಸಲಾತಿ ವ್ಯವಸ್ಥೆಯನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಜೊತೆಗೆ ಬುಡಕಟ್ಟು ಸಮುದಾಯದ ದುಃಸ್ಥಿತಿ ಮತ್ತು ಶತಮಾನಗಳಿಂದ ಆ ಸಮುದಾಯ ಎದುರಿಸುತ್ತಿರುವ ಅನ್ಯಾಯದ ಬಗ್ಗೆಯೂ ಮಾತನಾಡಿದರು.

ಬ್ರಾಹ್ಮಣ ಸಮುದಾಯದ ಆಕ್ರೋಶ: ವಘೇಲಾ ಅವರ ಹೇಳಿಕೆಗೆ ಬ್ರಾಹ್ಮಣ ಸಮುದಾಯ ಕಿಡಿಕಾರಿದೆ. ಶಂಕರ್‌ಸಿನ್ಹ್ ವಘೇಲಾ ಅವರ ವ್ಯಕ್ತಿತ್ವ ಯಾವಾಗಲೂ ವಿವಾದಾಸ್ಪದವಾಗಿದೆ. ಇತರರಿಗೆ ಪಾಠ ಮಾಡುವ ಬದಲು, ಶಂಕರ್‌ಸಿನ್ಹ್ ತಮ್ಮ ಸ್ವಂತ ಮನೆಯಿಂದಲೇ ಅದನ್ನು ಆರಂಭಿಸಬೇಕು. "ಶಂಕರ್‌ಸಿನ್ಹ್ ವಘೇಲಾ ನನ್ನ ಮನೆಯಿಂದ ಕಸವನ್ನು ಸಂಗ್ರಹಿಸಲು ಸಿದ್ಧರಿದ್ದರೆ, ನಾನು ಅವರಿಗೆ ಪ್ರತಿ ತಿಂಗಳು 5 ಲಕ್ಷ ರೂಪಾಯಿಗಳನ್ನು ನೀಡುತ್ತೇನೆ ರಾಜ್ಯ ಬ್ರಾಹ್ಮಣ ಸಮುದಾಯದ ಸಂಚಾಲಕರಾದ ಯಜ್ಞೇಶ್ ದವೆ ಪ್ರತಿ ಸವಾಲು ಹಾಕಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries