HEALTH TIPS

ಪನಾಮಾದಲ್ಲಿ 7.7 ತೀವ್ರತೆಯ ಭೂಕಂಪ; ಕಟ್ಟಡ, ರಸ್ತೆಗಳಿಗೆ ಹಾನಿ

ಪನಾಮಾ: ಶುಕ್ರವಾರ ಪನಾಮಾದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ದೇಶದ ಮಧ್ಯಭಾಗದಲ್ಲಿ ಕಟ್ಟಡಗಳು ಮತ್ತು ರಸ್ತೆಗಳು ಧ್ವಂಸಗೊಂಡಿವೆ. ಆದರೆ, ಈ ಘಟನೆಯಲ್ಲಿ ತಕ್ಷಣಕ್ಕೆ ಯಾವುದೇ ಸಾವು ನೋವು ಸಂಭವಿಸಿರುವ ವರದಿಯಾಗಿಲ್ಲ.


ಸುಮಾರು 4.5 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಕೇಂದ್ರ ಅಮೆರಿಕ ದೇಶವಾದ ಪನಾಮಾದಾದ್ಯಂತ ಭೂಕಂಪನದ ಅನುಭವವಾಗಿದೆ ಎಂದು ನ್ಯಾಷನಲ್ ಸಿವಿಲ್ ಪ್ರೊಟೆಕ್ಷನ್ ಸಿಸ್ಟಮ್ ತಿಳಿಸಿದೆ.  ಸುಮಾರು ಒಂದು ನಿಮಿಷದ ನಂತರ ಭೂಕಂಪನ ನಿಂತಿದೆ.

ಈ ಕುರಿತು ಪ್ರತಿಕ್ರಿಯಿಸಿದ 46 ವರ್ಷದ ಸಾಲೊಮನ್ ಆಯಂಡಿಯನ್, "ಭೂಕಂಪನ ತುಂಬಾ ಪ್ರಬಲ ಮತ್ತು ಸುದೀರ್ಘವಾಗಿದ್ದುದರಿಂದ ನಾನು ಗಾಬರಿಗೊಳಗಾದೆ. ಭಾರಿ ವಸ್ತುಗಳಾದ ಡ್ರೆಸ್ಸರ್ ಗಳು, ಹಾಸಿಗೆ ಹಾಗೂ ಅಡುಗೆ ಕೋಣೆಯ ಎಲ್ಲ ವಸ್ತುಗಳೂ ಅಲುಗಾಡುತ್ತಿದ್ದವು" ಎಂದು ಹೇಳಿದ್ದಾರೆ.

ಸುಮಾರು 20 ಅಂತಸ್ತಿನ ಎತ್ತರದ ಕಟ್ಟಡದ ಮೇಲ್ಚಾವಣಿ ಮೇಲಿನ ಈಜುಕೊಳದಿಂದ ನೀರು ಕೆಳಗೆ ಬೀಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಪನಾಮಾ ನಾಲೆ ಮೇಲಿನ ಸೇತುವೆಯೊಂದು ತೀವ್ರವಾಗಿ ಅಲುಗಾಡುತ್ತಿರುವುದೂ ಮತ್ತೊಂದು ವಿಡಿಯೊದಲ್ಲಿ ಕಂಡು ಬಂದಿದೆ. ಆದರೆ, ಆ ಸೇತುವೆಯ ಮೇಲೆ ವಾಹನಗಳು ಚಲಿಸುತ್ತಿರುವುದರಿಂದ, ಅದು ಸ್ಥಿರವಾಗಿ ನಿಂತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಅಮೆರಿಕ ಭೌಗೋಳಿಕ ಸಮೀಕ್ಷಾ ಸಂಸ್ಥೆಯು ಆರಂಭದಲ್ಲಿ 8.0 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಅಂದಾಜಿಸಿತ್ತು. ಆದರೆ, ಬಳಿಕ ಅದನ್ನು 7.7 ತೀವ್ರತೆಯ ಭೂಕಂಪನ ಎಂದು ಪರಿಷ್ಕರಿಸಿದೆ.

ಪನಾಮಾದಲ್ಲಿ ಸಂಭವಿಸಿದ ಭೂಕಂಪನದ ಹಿನ್ನೆಲೆಯಲ್ಲಿ ಪೂರ್ವ ಪೆಸಿಫಿಕ್ ನಲ್ಲಿ ಸುನಾಮಿಯ ಎಚ್ಚರಿಕೆ ನೀಡಲಾಗಿತ್ತು. ಆದರೆ, ಆ ಎಚ್ಚರಿಕೆಯನ್ನು ಬಳಿಕ ಹಿಂಪಡೆಯಲಾಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries