HEALTH TIPS

'ದೇಶದ ಶತ್ರುಗಳ' ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಪ್ರಧಾನಿ ಮೋದಿ ಕರೆ

ನವದೆಹಲಿ: ದೇಶದ ಗೌರವ, ಸಾಮಾಜಿಕ ಸಾಮರಸ್ಯ ಮತ್ತು ಸಾಂಸ್ಕೃತಿಕ ಪರಂಪರೆಗೆ ಧಕ್ಕೆ ತರುವ ಶಕ್ತಿಗಳ ವಿರುದ್ಧ ಜನರು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ದೆಹಲಿಯ ಐಪಿ ಎಕ್ಸ್‌ಟೆನ್ಷನ್‌ನ ಡಿಡಿಎ ಉತ್ಸವ ಮೈದಾನದಲ್ಲಿ ವಿಜಯದಶಮಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜವನ್ನು ವಿಭಜಿಸುವ ಮತ್ತು ಭಾರತೀಯ ಸಂಸ್ಕೃತಿಯನ್ನು ದ್ವೇಷಿಸುವ ಶಕ್ತಿಗಳು ದೇಶದ ಶತ್ರುಗಳು ಎಂದು ಹೇಳಿದರು.

ದೇಶದ ಹಿತಾಸಕ್ತಿಗಾಗಿ ರಾಜಕೀಯ ಪಕ್ಷಗಳು ಮತ್ತು ರಾಷ್ಟ್ರೀಯ ಸಂಸ್ಥೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ದೇಶಕ್ಕೆ ಹಾನಿ ಮಾಡುವ, ಸಮಾಜವನ್ನು ವಿಭಜಿಸುವ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ವಿರೋಧಿಸುವ ಶಕ್ತಿಗಳ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಶತಮಾನಗಳ ಹಿಂದೆ ವಿದೇಶಗಳಿಗೆ ಕೊಂಡೊಯ್ಯಲಾದ ಐತಿಹಾಸಿಕ ಕಲಾಕೃತಿಗಳನ್ನು ಮರಳಿ ತರಲು ಕೈಗೊಳ್ಳುತ್ತಿರುವ ಪ್ರಯತ್ನಗಳ ಬಗ್ಗೆಯೂ ಪ್ರಧಾನಿ ಮಾತನಾಡಿದರು.

'ಒಂದು ರಾಷ್ಟ್ರವು ಸ್ವಾಭಿಮಾನವನ್ನು ಹೊಂದಿದ್ದಾಗ ಮಾತ್ರ ಪ್ರಗತಿ ಸಾಧಿಸುತ್ತದೆ. ಸ್ವಾಭಿಮಾನವನ್ನು ರೂಪಿಸುವಲ್ಲಿ ಪರಂಪರೆಯು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ, ದೇಶವು ತನ್ನ ಪರಂಪರೆ ಮತ್ತು ಅಸ್ಮಿತೆಯನ್ನು ಸಂರಕ್ಷಿಸಲು ಶ್ರಮಿಸುತ್ತಿದೆ. ಶತಮಾನಗಳಿಂದ ಲೂಟಿ ಮಾಡಿ ವಿದೇಶಗಳಿಗೆ ಕೊಂಡೊಯ್ಯಲಾದ ಅಮೂಲ್ಯ ಸಂಪತ್ತನ್ನು ಇಂದು ಮರಳಿ ತರಲಾಗುತ್ತಿದೆ' ಎಂದು ಹೇಳಿದರು.

'ಶತ್ರು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಸತ್ಯ ಮತ್ತು ಮಾನವೀಯತೆಯ ಪರವಾಗಿ ನಿಂತಾಗ ಅಂತಿಮವಾಗಿ ಜಯ ನಮ್ಮದೇ ಆಗಿರುತ್ತದೆ ಎಂಬ ಧೈರ್ಯವನ್ನು ವಿಜಯದಶಮಿ ಹಬ್ಬ ನೀಡುತ್ತದೆ' ಎಂದು ಪ್ರಧಾನಿ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries