ಉಪ್ಪಳ: ಉಪ್ಪಳ ಕೈಕಂಬ-ಬಾಯಾರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ನಿಲ್ಲಿಸಿ ಬೆಂಕಿ ಶಂನಗೊಳಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ದುರಂತ ತಪ್ಪಿದೆ. ಕೈಕಂಬ-ಬಾಯಾರು ರಸ್ತೆಯಲ್ಲಿ ಸೋಂಕಾಲು ಮಸೀದಿ ಬಳಿ ಕನ್ನಟಿ ಪಾರೆ ನಿವಾಸಿ ಜಾಸಿಂ ಎಂಬವರ ಕಾರು ಬೆಂಕಿಗಾಹುತಿಯಾಗಿದೆ.
ಜಾಸಿಂ ಅವರು ಉಪ್ಪಳಕ್ಕೆ ತೆರಳುತ್ತಿದ್ದ ಸಂದರ್ಭ ಸೋಂಕಾಲು ಮಸೀದಿ ಬಳಿ ತಲುಪಿದಾಗ ಕಾರಿನ ಇಂಜಿನ್ ಭಾಗದಿಂದ ಹೊಗೆ ಕಾಣಿಸಿಕೊಂಡಿದೆ. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ವಯ ಕಾರುನಿಲ್ಲಿಸಿ ತಪಾಸಣೆ ನಡೆಸಿದಾಗ ಯಂತ್ರದೊಳಗಿಂದ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಉಪ್ಪಳದಿಂದ ತಲುಪಿದ ಅಗ್ನಿಶಾಮಕ ದಳ ಬೆಂಕಿ ಶಮನಗೊಳಿಸಿದೆ. ಈ ಸಂದರ್ಭ ಕಾರಿನ ಯಂತ್ರ ಬಹುತೇಕ ಹಾನಿಗೀಡಾಗಿದೆ.


