ದುಬೈ : ವಿಮಾನ ನಿಲ್ದಾಣಗಳ ಮೇಲೆ ಯೆಮನ್ನ ಹೂಥಿ ಬಂಡುಕೋರು ಇತ್ತೀಚೆಗೆ ನಡೆಸಿದ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಸೌದಿ ಅರೇಬಿಯಾ ತಿಳಿಸಿದೆ.
ದೇಶದ ಎರಡು ವಿಮಾನ ನಿಲ್ದಾಣಗಳ ಮೇಲೆ ಕ್ಷಿಪಣಿ, ಡ್ರೋನ್ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದೆ.
ಈ ಮಧ್ಯೆ ಪ್ಯಾಲೆಸ್ಟೀನಿಯನ್ ಅಧಿಕಾರಿಗಳು, 'ಗಾಜಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ' ಎಂದು ತಿಳಿಸಿದ್ದಾರೆ.
ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರು 2023ರಲ್ಲಿ ದಾಳಿ ನಡೆಸಿದ ನಂತರದಲ್ಲಿ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಮುಂದುವರಿದಿದೆ. ಇರಾನ್, ಲೆಬನಾನ್, ಸಿರಿಯಾ ಮತ್ತು ಯೆಮನ್ ಸೇರಿದಂತೆ ಹಲವು ಪ್ರದೇಶಗಳಿಗೆ ವ್ಯಾಪಿಸಿದೆ.



