HEALTH TIPS

ಇನ್ನು ಗಾಣಿಗ ಜಾತಿ ಪ್ರಮಾಣಪತ್ರ ಪಡೆಯಲು ಪರದಾಟವಿಲ್ಲ-ಓಬಿಸಿ ಪಟ್ಟಿಯಲ್ಲಿ 'ಗಾಣಿಗ' ಎಂದು ತಿದ್ದುಪಡಿ ಮಾಡಿ ಸರ್ಕಾರದ ಅನುಮೋದನೆಗೆ ರಾಜ್ಯಪಾಲರ ಅಂಕಿತ

ಮಂಜೇಶ್ವರ: ಕೇರಳದಲ್ಲಿ ಗಾಣಿಗ ಸಮುದಾಯದವರು ಜಾತಿ ಪ್ರಮಾಣಪತ್ರ ಪಡೆಯಲು ಎದುರಿಸುತ್ತಿದ್ದ ಸಮಸ್ಯೆಗೆ ಕೊನೆಗೂ ಪರಿಹಾರ ದೊರೆತಿದೆ. ರಾಜ್ಯದ ಇತರ ಹಿಂದುಳಿದ ವರ್ಗಗಳ (ಓಬಿಸಿ) ಪಟ್ಟಿಯಲ್ಲಿ ಸಮುದಾಯದ ಹೆಸರನ್ನು ಗಣಿಕ ಎಂಬುದರ ಬದಲಿಗೆ ಗಾಣಿಗ ಎಂದು ತಿದ್ದುಪಡಿ ಮಾಡಲಾಗಿದೆ. 


ಕೇರಳ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನ ಮೇರೆಗೆ ಸರ್ಕಾರವು ಕೈಗೊಂಡ ಕ್ರಮಕ್ಕೆ ರಾಜ್ಯಪಾಲರ ಅಂಕಿತ ಲಭಿಸಿದ್ದು, 2026ರ ಸೆಪ್ಟೆಂಬರ್ 26ರಂದು ಈ ಕುರಿತು ಸರ್ಕಾರಿ ಆದೇಶ ಹೊರಡಿಸಿ ಗಜೆಟ್ ಪ್ರಕಟಣೆ ಮಾಡಲಾಗಿದೆ.

ಓಬಿಸಿ ಪಟ್ಟಿಯ 19ನೇ ಕ್ರಮಸಂಖ್ಯೆಯಲ್ಲಿನ ಸಮುದಾಯದ ಹೆಸರನ್ನು ಗಣಿಕ / ಗಾಣಿಗ ಎಂದು ತಿದ್ದುಪಡಿ ಮಾಡುವಂತೆ ಆಯೋಗವು ಶಿಫಾರಸು ಮಾಡಿತ್ತು. ಈ ಹಿಂದೆ ಗಣಿಕ ಎಂಬ ಹೆಸರಿನ ನಮೂದಿನಿಂದಾಗಿ ಗಾಣಿಗ ಸಮುದಾಯದವರು ಓಬಿಸಿ ವರ್ಗದಡಿ ದೊರೆಯುವ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆ ಪರಿಹಾರಕ್ಕಾಗಿ ಸಮುದಾಯದ ಮುಖಂಡರು ಹಲವು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಲಾಖೆಗಳೊಂದಿಗೆ ಪತ್ರ ವ್ಯವಹಾರ ನಡೆಸಿ ನಿರಂತರ ಪ್ರಯತ್ನ ನಡೆಸಿದ್ದರು ಎಂದು ಗಾಣಿಗ ಸಮಾಜದ ಮುಖಂಡ ಎಂ.ಹರಿಶ್ಚಂದ್ರ ಮಂಜೇಶ್ವರ ತಿಳಿಸಿದ್ದಾರೆ.

ಸಮುದಾಯದ ಮುಖಂಡರು ಹಾಗೂ ರಾಜಕೀಯ ನಾಯಕರ ಸಹಕಾರದೊಂದಿಗೆ ಕಿರ್ತಾಡ್ಸ್ ಸಂಸ್ಥೆಯ ಮೂಲಕ ಗಾಣಿಗ ಸಮುದಾಯದ ಕುರಿತು ಸಂಶೋಧನೆ ನಡೆಸಿ ವರದಿಯನ್ನು ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಇಲಾಖೆಗೆ ಸಲ್ಲಿಸಲಾಗಿತ್ತು. ಹಿಂದಿನ ಪಿಣರಾಯಿ ವಿಜಯನ್ ಸರ್ಕಾರದ ಕೊನೆಯ ಅವಧಿಯ ಸಚಿವ ಸಂಪುಟದಲ್ಲಿ ಪ್ರಸ್ತಾವನೆಗೆ ಅನುಮೋದನೆ ದೊರೆತು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. 

ಪ್ರಸ್ತುತ ಸರ್ಕಾರದ ಆರಂಭಿಕ ಅವಧಿಯಲ್ಲಿ ವಾಣಿಯ ಸಮುದಾಯದ ರಾಜ್ಯಮಟ್ಟದ ಮುಖಂಡ ಜಗದೀಶ್ ರಾಜನ್ ಹಾಗೂ ವಕೀಲ ಪಯ್ಯನ್ನೂರು ಶಾಜಿ ವಾಣಿಯನ್ ಅವರ ಮಧ್ಯಪ್ರವೇಶದಿಂದ ಪ್ರಕ್ರಿಯೆ ಶೀಘ್ರ ಪೂರ್ಣಗೊಂಡಿದೆ ಎಂದು ಹರಿಶ್ಚಂದ್ರ ಮಂಜೇಶ್ವರ ವಿವರಿಸಿದ್ದಾರೆ.

ಈ ಮಹತ್ವದ ಕಾರ್ಯಕ್ಕೆ ಸಹಕರಿಸಿದ ಸಮುದಾಯದ ಮುಖಂಡರು, ಕಿರ್ತಾಡ್ಸ್ ಸಂಸ್ಥೆ, ರಾಜಕೀಯ ನಾಯಕರು, ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರಿಗೆ ಕಾಸರಗೋಡು ಜಿಲ್ಲೆಯ ಗಾಣಿಗ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹರಿಶ್ಚಂದ್ರ ಮಂಜೇಶ್ವರ ಹೇಳಿದ್ದಾರೆ. 

ವಿಶೇಷವಾಗಿ ಜಗದಿï್ಶ ರಾಜನ್ ಮತ್ತು ವಕೀಲ ಪಯ್ಯನ್ನೂರು ಶಾಜಿ ವಾಣಿಯನ್ ಅವರನ್ನು ಅಭಿನಂದಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅಗತ್ಯದ ದಾಖಲೆಗಳೊಂದಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ  ಸಂಬಂಧಪಟ್ಟ ಗ್ರಾಮ ಕಚೇರಿಗಳಿಂದ ಓಬಿಸಿ ವರ್ಗದಡಿ ಗಾಣಿಗ ಜಾತಿ ಪ್ರಮಾಣಪತ್ರ ಪಡೆಯಲು ಸಾಧ್ಯವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ  ಹರಿಶ್ಚಂದ್ರ ಮಂಜೇಶ್ವರ ಅವರು, ಈ ಅವಕಾಶವನ್ನು ಸಮುದಾಯದ ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries