HEALTH TIPS

ಮುಸ್ಲಿಮರ ಮನೆಯಲ್ಲಿ ಕಾಂಗ್ರೆಸ್ಸಿಗರು ಹಂದಿಮಾಂಸದೂಟ ಕೇಳುವರೇ:ರಾಜೀವ್ ಚಂದ್ರಶೇಖರ್

ತಿರುವನಂತಪುರ: ಕೇರಳಂ ಲೋಕಭವನದಲ್ಲಿ ಕಡ್ಡಾಯವಾಗಿ ಸಸ್ಯಾಹಾರಿ ಆಹಾರ ಮಾತ್ರ ತಯಾರಿಸಬೇಕೆಂದು ರಾಜ್ಯಪಾಲ ಓಂ ಪ್ರಕಾಶ್ ಮಾಥೂರ್ ಅವರು ಮಾಡಿರುವ ಆದೇಶವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಸಮರ್ಥಿಸಿಕೊಂಡಿದ್ದಾರೆ.


ಸಾರ್ವಜನಿಕರ ಸಮಸ್ಯೆಗಳ ಚರ್ಚೆಯಿಂದ ಗಮನ ಬೇರೆಡೆ ಸೆಳೆಯಲು ಈ ವಿವಾದ ಹುಟ್ಟುಹಾಕಿದ್ದಾರೆ ಎಂದು ಕಾಂಗ್ರೆಸ್ ಅನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. 

ರಾಜಭವನದಲ್ಲಿ ಯಾವ ರೀತಿಯ ಆಹಾರ ತಯಾರಿಸಬೇಕೆಂಬುದು ರಾಜ್ಯಪಾಲರ ವಿವೇಚನಾಧಿಕಾರವಾಗಿದೆ. ಅವರ ಸಂಸ್ಕೃತಿ ಮತ್ತು ಆದ್ಯತೆಗೆ ಅನುಗುಣವಾಗಿ ಆಹಾರ ನಿರ್ಧರಿಸುತ್ತಾರೆ ಎಂದಿದ್ದಾರೆ.

ಮುಸ್ಲಿಂ ಮಲಯಾಳಿಗಳ ಮನೆಯಲ್ಲಿ ಹಂದಿ ಮಾಂಸದೂಟಕ್ಕೆ ಕಾಂಗ್ರೆಸಿಗರು ಒತ್ತಾಯಿಸುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

'ಕಾಂಗ್ರೆಸ್ ಪಕ್ಷದವರು ಮುಸ್ಲಿಂ ಮಲಯಾಳಿ ವ್ಯಕ್ತಿಯೊಬ್ಬರ ಮನೆಗೆ ಹೋಗಿ ಹಂದಿಮಾಂಸವನ್ನು ಬಡಿಸಲು ಕೇಳಲು ಸಾಧ್ಯವೇ? ಲೋಕಭವನದಲ್ಲಿ ವಾಸಿಸುವ ರಾಜ್ಯಪಾಲರಿಗೆ ತಮ್ಮ ಸಂಸ್ಕೃತಿ ಮತ್ತು ಆದ್ಯತೆಗೆ ಅನುಗುಣವಾಗಿ ಯಾವ ಆಹಾರ ತಯಾರಿಸಬೇಕೆಂದು ನಿರ್ಧರಿಸುವ ಹಕ್ಕಿದೆ'ಎಂದು ಅವರು ಹೇಳಿದ್ದಾರೆ.

ಐದು ಗ್ಯಾರಂಟಿ ಕುರಿತು ಚರ್ಚೆಯಿಂದ ಕಾಂಗ್ರೆಸ್ ತಪ್ಪಿಸಿಕೊಳ್ಳುತ್ತಿದೆ. 'ಪುಥು ಯುಗ ಕೇರಳಂ' ಭರವಸೆ ಈಡೇರಿಸಿಲ್ಲ ಎಂದು ಅವರು ದೂರಿದ್ದಾರೆ.

150 ದಿನಗಳ ವಿ.ಡಿ ಸತೀಶನ್ ಸರ್ಕಾರದಿಂದ ಜನರಿಗೆ ಏನು ಸಿಕ್ಕಿದೆ. ಅಸಂಬದ್ಧ ವಿಷಯಗಳ ಚರ್ಚೆಯಲ್ಲೇ ಕಾಲ ಕಳೆಯುತ್ತಿದದ್ದಾರೆ ಎಂದು ದೂರಿದ್ದಾರೆ.

ಕೇರಳಂನ 29ನೇ ರಾಜ್ಯಪಾಲರಾಗಿ ಶುಕ್ರವಾರ ಮಾಥೂರ್ ಅಧಿಕಾರ ಸ್ವೀಕರಿಸಿದ್ದರು. ಅದರ ಬೆನ್ನಲ್ಲೇ ಅವರು ಲೋಕಭವನದಲ್ಲಿ ಸಸ್ಯಾಹಾರ ಮಾತ್ರ ತಯಾರಿಸುವಂತೆ ಆದೇಶಿಸಿದ್ದಾರೆ ಎಂಬ ವರದಿಯು ವಿವಾದಕ್ಕೆ ಎಡೆಮಾಡಿತ್ತು.

ರಾಜ್ಯಪಾಲರು ಸಂಘ ಪರಿವಾರದ ಅಜೆಂಡಾವನ್ನು ಉತ್ತೇಜಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries