ಕಾಸರಗೋಡು: ಆಹಾರಸೇವಿಸಿ ನಿದ್ರೆಗೆ ತೆರಳಿದ್ದ ಗೃಹಿಣಿ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಾಸರಗೋಡು ಹೊಸಬಸ್ ನಿಲ್ದಾಣದಲ್ಲಿ ಮೊಬೈಲು ಅಂಗಡಿ ಹೊಂದಿರುವ ಮನ್ಸೂರ್ ಎಂಬವರ ಪತ್ನಿ ತನ್ನಿಯ ಯಾನೆ ತನ್ನೀರ ಸುಲ್ತಾನ (29) ಮೃತಪಟ್ಟ ಯುವತಿ.
ಶನಿವಾರ ರಾತ್ರಿ ಆಹಾರ ಸೇವಿಸಿ ಮಲಗಿದ್ದ ತನ್ನೀರಸುಲ್ತಾನಾ ಭಾನುವಾರ ಬೆಳಗ್ಗೆ ಬಹಳಹೊತ್ತಿನ ವರೆಗೂ ಏಳದೇ ಇದ್ದ ಹಿನ್ನೆಲೆಯಲ್ಲಿ, ಎಬ್ಬಿಸಲು ಯತ್ನಿಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ವೈದ್ಯರನ್ನು ಕರೆಸಿ ತಪಾಸಣೆ ನಡೆಸಿದಾಗ ಮೃತಪಟ್ಟಿರುವುದು ಖಚಿತಗೊಂಡಿತು.


