ಕಾಸರಗೋಡು: ದಂಪತಿ ಸೇರಿದಂತೆ ಮೂವರಿಗೆ ಇರಿದು ಗಾಯಗೊಳಿಸಿದ ಪ್ರಕರಣದ ಆರೋಪಿಯ ಮನೆಗೆ ಕಿಚ್ಚಿರಿಸಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಅಂಬಲತ್ತರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಬೇಕೂರ ಆಟ್ಟಂಗಾನದ ವೆಳ್ಳಮುಂಡ ನಿವಾಸಿಗಳಾದ ವಿ. ಸುನಿಲ್ (48) ಮತ್ತು ಕೆ. ಸುಭಾಷ್ (37) ಬಂಧಿತರು. ನ್ಯಾಯಾಲಯದ ನಿರ್ದೇಶ ಪ್ರಕಾರ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸೆಪ್ಟೆಂಬರ್ 28ರಂದು ಆಟ್ಟಂಗಾನದ ಶರತ್ ಎಂಬಾತನ ತಾಯಿ ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದ ವೇಳೆ ಈ ಮನೆಗೆ ಬೆಂಕಿಹಚ್ಚಿದ ಪರಿಣಾಮ ಪೀಠೋಪಕರಂ, ಇಲೆಕಟ್ರಾಣಿಕ್ ಸಾಮಗ್ರಿ ಹಾನಿಗೀಡಾಗಿದ್ದು, 80000 ರೂ. ನಷ್ಟ ಉಂಟುಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಈ ಇಬ್ಬರು ಆರೋಪಿಗಳನ್ನು ಪೆÇಲೀಸರು ಬಂಧಿಸಿದ್ದಾರೆ. ಇದಕ್ಕೂಮೊದಲು ಸೆ. 26ರಂದು ವೆಳ್ಳಾಮುಂಡ ರಾಘವನ್ ನಾಯರ್, ಇವರ ಪತ್ನಿ ಇಂದಿರಾ, ನೆರೆಮನೆ ನಿವಾಸಿ ಯದುಚಂದ್ರನ್ ಎಂಬವರನ್ನು ಶರತ್ ಇರಿದು ಗಾಯಗೊಳಿಸಿದ್ದನು. ಇದೇ ದ್ವೇಷದಿಂದ ಶರತ್‍ನ ಮನೆಗೆ ಈ ಇಬ್ಬರು ಆರೋಪಿಗಳು ಬೆಂಕಿಹಚ್ಚಿದ್ದಾರೆನ್ನಲಾಗಿದೆ. ರಾಜಾಪುರಂ ಠಾಣೆ ಪೆÇಲೀಸ್ ಇನ್‍ಸ್ಪೆಕ್ಟರ್ ಸಂತೋಷ್ ಕುಮಾರ್ ನೀಡಿದ ನಿರ್ದೇಶನ ಪ್ರಕಾರ ಚೀಮೇನಿ ಪ್ರಿನ್ಸಿಪಲ್ ಎಸ್‍ಐ ಎಂ. ಸದಾನಂದ, ಎಸ್‍ಐ ಎಂ.ವಿ. ಪ್ರಕಾಶನ್ ಎಂಬವರ ನೇತೃತ್ವದ ಪೆÇಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


