ನವದೆಹಲಿ: ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಭಾರತೀಯ ವಾಯುಪಡೆಯ 29ನೇ ಮುಖ್ಯಸ್ಥರಾಗಿ ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ವಾಯುಪಡೆಯಲ್ಲಿ 43 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಏರ್ ಚೀಫ್ ಮಾರ್ಷಲ್ ಎ. ಪಿ. ಸಿಂಗ್ ಅವರ ಉತ್ತರಾಧಿಕಾರಿಯಾಗಿ ದೀಕ್ಷಿತ್ ಅವರು ಈ ಹುದ್ದೆಯನ್ನು ಅಲಂಕರಿಸಿದ್ದಾರೆ.
2028ರ ಡಿಸೆಂಬರ್‌ವರೆಗೆ ಇವರ ಅಧಿಕಾರಾವಧಿ ಇರಲಿದೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೀಕ್ಷಿತ್ ಅವರು 3,500 ಗಂಟೆಗಳ ಅವಧಿಗೆ ವಿವಿಧ ಯುದ್ಧ ವಿಮಾನಗಳನ್ನು ಹಾರಿಸಿರುವ ಪರಿಣತರಾಗಿದ್ದು, 1986ರ ಡಿಸೆಂಬರ್‌ನಲ್ಲಿಯೇ ಯುದ್ಧ ವಿಮಾನಗಳ ಪಡೆಗೆ ಸೇರ್ಪಡೆಗೊಂಡಿದ್ದರು. ಮಿರಾಜ್-2000, ಎಂಐಜಿ ಕಿರಣ್, ಜಾಗ್ವಾರ್, ಐಎಲ್-78, ಹಾಕ್ ಹಾಗೂ ದೇಶಿ ಯುದ್ಧವಿಮಾನ ತೇಜಸ್‌ನಲ್ಲೂ ಹಾರಾಟ ನಡೆಸಿದ ಅನುಭವವನ್ನು ಹೊಂದಿದ್ದಾರೆ.
4 ದಶಕಗಳ ಸೇವಾ ಅವಧಿಯಲ್ಲಿ ಆಪರೇಷನ್ ಸಫೇದ್ ಸಾಗರ್, ಆಪರೇಷನ್ ರಕ್ಷಕ್, ಆಪರೇಷನ್ ಸಿಂಧೂರ ಸೇರಿದಂತೆ ವಿವಿಧ ಕಾರ್ಯಾಚರಣೆಗಳಲ್ಲಿ ದೀಕ್ಷಿತ್ ಸಕ್ರಿಯರಾಗಿದ್ದರು.

