HEALTH TIPS

ಕಾಸರಗೋಡು ದಸರಾ ಸಾಂಸ್ಕøತಿಕೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ನಗರದ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ಸಾಂಸ್ಕøತಿಕ ಘಟಕ ವತಿಯಿಂದ ಅ. 11ರಿಂದ 20ರ ವರೆಗೆ ನಡೆಯಲಿರುವ  ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2026ರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನಿಡುಗಡೆ ಸಮಾರಂಭ ಶ್ರೀ ಎಡನೀರು ಮಠದಲ್ಲಿ ಜರುಗಿತು. ಎಡನೀರುಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ,  ನವರಾತ್ರಿ ಮಹೋತ್ಸವ ನಮ್ಮ ಸಂಸ್ಕøತಿಯ ಪ್ರತೀಕವಾಗಿದ್ದು,  ದೇವಸ್ಥಾನ, ಮಂದಿರ, ತರವಾಡು ಮನೆ, ಮಠಗಳ ಮೂಲಕ ನವರಾತ್ರಿಮಹೋತ್ಸವ ಆಚರಿಸುವಂತಾಗಬೇಕು. ಈ ಮೂಲಕ ಕಾಸರಗೋಡು ಕನ್ನಡದ ಅಪ್ಪಟ ನೆಲೆವೀಡು ಎಂಬುದನ್ನುಸಾಬೀತುಗೊಳಿಸಬೇಕು. ಈ ಮೂಲಕ ನಮ್ಮ ಸಂಸ್ಕøತಿಯೂ ಉಳಿಯುತ್ತದೆ ಎಂದು ತಿಳಿಸಿದರು. 


ಅಕ್ಟೋಬರ್ 11ಕ್ಕೆ ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಆರಂಭಗೊಳ್ಳಲಿರುವ ದಸರಾ ಕಾರ್ಯಕ್ರಮಗಳನ್ನು ಎಡನೀರು ಶ್ರೀಗಳು ಉದ್ಘಾಟಿಸಿ ಆಶೀರ್ವಚನ ನೀಡುವರು. ಇದೇ ರೀತಿ ಕಾಸರಗೋಡು ದಸರಾ ಸಂಕೀರ್ತನ ದಶಾಹ ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಭಜನಾ ಪರಿಷತ್ ತಾಲೂಕು ಅಧ್ಯಕ್ಷ ಡಾ. ಕೆ. ಏನ್. ವೆಂಕಟ್ರಮಣ ಹೊಳ್ಳ ಉದ್ಘಾಟಿಸುವರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಕವಿಸಮ್ಮೇಳನ, ಕಾಸರಗೋಡು ದಸರಾ ಕವಿಗೋಷ್ಠಿ ನಡೆಯಲಿದೆ. ಸುಮಾರು 60 ಮಂದಿ ಕವಿಗಳು ಭಾಗವಹಿಸಲಿದ್ದಾರೆ. ಮೈಸೂರು ರಾಜ ವಂಶದ ಪ್ರಮುಖರಾದ ಡಾ. ಬಿ. ಶ್ರೀನಿವಾಸ ಬಹದೂರ್ ಸರ್ವಾಧ್ಯಕ್ಷತೆಯಲ್ಲಿ ಡಾ. ಎಮ್. ಜಿ. ಆರ್ ಅರಸ್ ಮೈಸೂರು ಕವಿಗೋಷ್ಠಿ ಉದ್ಘಾಟಿಸುವರು. ಮೈಸೂರಿನ ಖ್ಯಾತ ಕವಿ ಸಾಹಿತಿ ಜಯಪ್ಪ ಹೊನ್ನಾಳಿ ಅಧ್ಯಕ್ಷತೆ ವಹಿಸುವರು.  ಗುರುರಾಜ್ ಕಾಸರಗೋಡು ನೇತೃತ್ವದಲ್ಲಿ ಕಲಾಮೇಳ ನಡೆಯಲಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries