HEALTH TIPS

ಖಾಸಗಿ ಬಸ್ ಮಾಲೀಕರಿಂದ ಸಚಿವಾಲಯಕ್ಕೆ ಮೆರವಣಿಗೆ, ಧರಣಿ

‘ಪ್ರಿಯದರ್ಶಿನಿ’ ಯೋಜನೆಯಿಂದ ಸಂಕಷ್ಟ: ಖಾಸಗಿ ಬಸ್ ಉದ್ಯಮ ರಕ್ಷಣೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಲು ಆಗ್ರಹ

ತಿರುವನಂತಪುರಂ/ಕಾಸರಗೋಡು: ಪ್ರಿಯದರ್ಶಿನಿ ಯೋಜನೆಯಿಂದ ಸಂಕಷ್ಟ ಎದುರಿಸುತ್ತಿರುವ ಖಾಸಗಿ ಬಸ್ ಉದ್ಯಮವನ್ನು ರಕ್ಷಿಸಲು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ಕೇರಳ ಸ್ಟೇಟ್ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಷನ್ ನೇತೃತ್ವದಲ್ಲಿ ಸಚಿವಾಲಯದತ್ತ ಮೆರವಣಿಗೆ ಹಾಗೂ ಧರಣಿ ನಡೆಸಲಾಯಿತು.


ವೈಜ್ಞಾನಿಕ ಆಧಾರವಿಲ್ಲದ ವೇಳಾಪಟ್ಟಿಗಳು, ಕೆಎಸ್‌ಆರ್‌ಟಿಸಿಗೆ ಸರ್ಕಾರ ನೀಡುತ್ತಿರುವ ಹೆಚ್ಚಿನ ಆದ್ಯತೆ ಹಾಗೂ ಸಾರಿಗೆ ರಾಷ್ಟ್ರೀಕರಣದ ಸಂದರ್ಭದಲ್ಲಿ ಖಾಸಗಿ ಬಸ್ ಕ್ಷೇತ್ರವನ್ನು ಕಡೆಗಣಿಸಿರುವುದು ಈ ಉದ್ಯಮದ ಅವನತಿಗೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿರುವುದರಿಂದ ಖಾಸಗಿ ಬಸ್‌ಗಳ ದಿನದ ಆದಾಯ ಅರ್ಧದಷ್ಟು ಕುಸಿದಿದೆ. ಇದರಿಂದ ಸಿಬ್ಬಂದಿಗೆ ಸಂಬಳ ನೀಡಲು ಹಾಗೂ ಬಸ್‌ಗಳಿಗೆ ಡೀಸೆಲ್ ತುಂಬಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಸ್ ಮಾಲೀಕರು ಅಳಲು ತೋಡಿಕೊಂಡರು.

ಸರ್ಕಾರ ನೇಮಿಸಿದ್ದ ಪದ್ಮಕುಮಾರ್ ಐಪಿಎಸ್ ನೇತೃತ್ವದ ತಜ್ಞರ ಸಮಿತಿ ಸಲ್ಲಿಸಿರುವ ಶಿಫಾರಸುಗಳನ್ನು ತಕ್ಷಣ ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಲಾಯಿತು.

ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ರಾಜ್ಯಾಧ್ಯಕ್ಷ ರಾಜು ಅಪ್ಸರ ಧರಣಿಯನ್ನು ಉದ್ಘಾಟಿಸಿದರು.

ಕಾಸರಗೋಡು ಜಿಲ್ಲಾಧ್ಯಕ್ಷ ಕೆ. ಗಿರೀಶ್, ಕಾರ್ಯದರ್ಶಿ ಟಿ. ಲಕ್ಷ್ಮಣನ್, ಖಜಾಂಚಿ ರಾಜೇಶ್ ಯು., ಕೆ.ಎನ್. ಬಾಲಕೃಷ್ಣನ್, ಸಿ.ಎ. ಮೊಹಮ್ಮದ್ ಕುಂಜಿ, ಕಾರ್ತಿಕ್ ರಾಜ್, ಎಂ. ಹಸೈನಾರ್, ಎಸ್.ಕೆ. ಹಮೀದ್, ಸುಬ್ಬಣ್ಣ ಆಳ್ವ, ಎ.ವಿ. ಪ್ರದೀಪ್ ಕುಮಾರ್, ಕೆ.ವಿ. ರವಿ, ರಾಧಾಕೃಷ್ಣ ಎಸ್., ಪಿ.ಎ. ಮೊಹಮ್ಮದ್ ಕುಂಜಿ, ದಿನೇಶ್ವರಿ, ರೇಖಾ ಸೇರಿದಂತೆ ಕಾಸರಗೋಡು ಜಿಲ್ಲೆಯಿಂದ ನೂರಕ್ಕೂ ಹೆಚ್ಚು ಖಾಸಗಿ ಬಸ್ ಮಾಲೀಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries