ಉಪ್ಪಳ: ಶರನ್ನವರಾತ್ರಿಯ ಶುಭ ಸಂದರ್ಭವನ್ನು ಪುರಸ್ಕರಿಸಿ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಅಕ್ಟೋಬರ್ 17ರ ಶನಿವಾರದಂದು(ನಾಳೆ) ವಿದ್ಯಾರ್ಥಿಗಳ ವಿದ್ಯಾಭ್ಯುದಯಕ್ಕಾಗಿ ವಿಶೇಷ ಸರಸ್ವತಿ ಹವನ ಕಾರ್ಯಕ್ರಮ ಆಯೋಜಿಸಲಾಗಿದೆ.
ಶನಿವಾರ ಬೆಳಿಗ್ಗೆ 7:30ಕ್ಕೆ ಶ್ರೀ ಶಾರದಾ ಪ್ರತಿಷ್ಠಾಪನಾ ವಿಧಿವಿಧಾನಗಳು ನೆರವೇರಲಿದ್ದು, ಬಳಿಕ ಬೆಳಿಗ್ಗೆ 9:ರಿಂದ ವಿದ್ಯಾರ್ಥಿಗಳ ಉಜ್ವಲ ಶೈಕ್ಷಣಿಕ ಭವಿಷ್ಯ ಹಾಗೂ ಜ್ಞಾನಾರ್ಜನೆಗಾಗಿ ಸರಸ್ವತಿ ಹವನ ಪ್ರಾರಂಭವಾಗಲಿದೆ. ಮಧ್ಯಾಹ್ನ 12 ಕ್ಕೆ ಮಹಾಪೂರ್ಣಾಹುತಿ ಮತ್ತು ಮಹಾಪೂಜೆ ನೆರವೇರಲಿದ್ದು, ತದನಂತರ ಭಕ್ತಾದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ವಿದ್ಯಾಭ್ಯಾಸದಲ್ಲಿ ಏಕಾಗ್ರತೆ, ಬುದ್ಧಿಶಕ್ತಿ ಹಾಗೂ ಉತ್ತಮ ಯಶಸ್ಸು ಸಾಧಿಸಲು ನೆರವಾಗುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪೆÇೀಷಕರು ಮತ್ತು ಸಾರ್ವಜನಿಕರು ಭಾಗವಹಿಸಿ ಶಾರದಾಂಬೆಯ ಕೃಪೆಗೆ ಪಾತ್ರರಾಗಬೇಕೆಂದು ಮಠದ ಪ್ರಕಟಣೆಯಲ್ಲಿ ಕೋರಲಾಗಿದೆ.

