HEALTH TIPS

ರಶ್ಯದಲ್ಲಿ ಶಂಕಿತ ಪ್ಲೇಗ್ ಸೋಂಕಿನ ಪ್ರಕರಣ : ಅಮೆರಿಕದಿಂದ ಸೂಕ್ಷ್ಮ ನಿಗಾ; ಡೊನಾಲ್ಡ್‌ ಟ್ರಂಪ್

ಮಾಸ್ಕೊ: ಸೈಬೀರಿಯದ ಪ್ಲೇಗ್ ಸಂಶೋಧನಾ ಕೇಂದ್ರದಲ್ಲಿ ರಶ್ಯದ ಲ್ಯಾಬ್ ತಂತ್ರಜ್ಞರೊಬ್ಬರು ನಿಗೂಢವಾಗಿ ಮೃತಪಟ್ಟ ಪ್ರಕರಣದ ಬಗ್ಗೆ ಅಮೆರಿಕವು ಅತ್ಯಂತ ಸೂಕ್ಷ್ಮ ನಿಗಾವಹಿಸಲಿದೆಯೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ವಾಶಿಂಗ್ಟನ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ತನಕ ತಾನು ಈ ಬಗ್ಗೆ ರಶ್ಯ ಜೊತೆ ಮಾತನಾಡಿಲ್ಲವಾದರೂ, ಇಂತಹ ಸಾರ್ವಜನಿಕ ಆರೋಗ್ಯದ ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ ಯಾವುದೇ ದೇಶಕ್ಕೆ ನೆರವಾಗಲು ಅಮೆರಿಕ ಸಿದ್ಧವಿದೆಯೆಂದು ಹೇಳಿದ್ದಾರೆ.


ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಹೇಳಿಕೆಯೊಂದನ್ನು ನೀಡಿ, ''ಒಂದು ವೇಳೆ ಪ್ರಯೋಗಾಲಯದಿಂದ ರೋಗಾಣು ಹೊರಬಿದ್ದರೆ, ಸೋಂಕು ವೇಗವಾಗಿ ಹರಡುವ ಸಾಧ್ಯತೆಯಿರುವುದರಿಂದ ಪರಿಸ್ಥಿತಿಯನ್ನು ಗಂಭೀರವಾಗಿ ಗಮನಿಸಲಾಗುತ್ತದೆ. ಆದರೆ, ಸದ್ಯಕ್ಕೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ''ಎಂದು ತಿಳಿಸಿದ್ದಾರೆ.

ಮೃತ ಮಹಿಳೆಯ ಜೈವಿಕ ಮಾದರಿಗಳಲ್ಲಿ ಪ್ಲೇಗ್ ರೋಗಕ್ಕೆ ಸಂಬಂಧಿಸಿದ ಯಾವುದೇ ಜೈವಿಕ ಮಾದರಿಗಳು ಪತ್ತೆಯಾಗಿಲ್ಲ. ಆದರೆ ಆಕೆಯ ಸಂಪರ್ಕದಲ್ಲಿದ್ದವರಲ್ಲಿ ಕೋವಿಡ್ 19 ಹಾಗೂ ಸಾಮಾನ್ಯ ಶೀತಕ್ಕೆ ಕಾರಣವಾಗುವ ರೈನೋವೈರಸ್ ಸೋಂಕುಗಳು ಪತ್ತೆಯಾಗಿರುವುದಾಗಿ ವರದಿಗಳು ತಿಳಿಸಿವೆ.

ಮೃತ ಮಹಿಳೆಯ ಸಾವಿಗೆ ಅನಿರ್ದಿಷ್ಟ ಕಾರಣಗಳಿಂದ ಉಂಟಾಗಿರುವ ನ್ಯೂಮೋನಿಯಾ ಕಾರಣವೆಂದು ಇರ್ಕುಟ್‌ಸ್ಕ್‌ನ ಗವರ್ನರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಸಂಶೋಧನೆಯ ಸಂದರ್ಭದಲ್ಲಿ ರೋಗಾಣುವನ್ನು ಹೊಂದಿದ್ದ ಪರೀಕ್ಷಾ ನಳಿಕೆ (ಟೆಸ್ಟ್ ಟ್ಯೂಬ್) ಒಡೆದು ಮಹಿಳೆ ಅಸ್ವಸ್ಥಗೊಂಡಿರಬಹುದು ಅಥವಾ ಕಾಡು ಇಲಿಗಳಿಗೆ ಸಹಜವಾಗಿ ಪ್ಲೇಗ್ ತಗಲುವ ಪ್ರಾಂತಕ್ಕೆ ಅಧ್ಯಯನ ಪ್ರವಾಸ ಕೈಗೊಂಡ ಸಂದರ್ಭ ಆಕೆಗೆ ಸೋಂಕು ತಗಲಿರುವ ಸಾಧ್ಯತೆಯಿದೆಯೆಂದು ಅವರು ಹೇಳಿದ್ದಾರೆ.

ಕಳೆದ ವಾರ ಮೃತ ಮಹಿಳೆಯ ಜೊತೆ ಸಂಪರ್ಕದಲ್ಲಿದ್ದ ಸುಮಾರು 200 ಮಂದಿಯನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ವೈದ್ಯಕೀಯ ನಿಗಾವಣೆಯಲ್ಲಿರಿಸಲಾಗಿದೆಯೆಂದು ರಶ್ಯದ ಮಾಧ್ಯಮ ವರದಿ ತಿಳಿಸಿದೆ.






 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries