HEALTH TIPS

ಇಸ್ಲಾಂ ಮೂಲಭೂತವಾದದ ಪ್ರಭಾವಕ್ಕೆ ಒಳಗಾಗಿದ್ದ ಸಹ ಪೈಲಟ್: ನೆತನ್ಯಾಹು

ಜೆರುಸಲೇಂ (AP): 'ದುಬೈನಿಂದ ಇಸ್ರೇಲ್‌ಗೆ ಸಂಚರಿಸುತ್ತಿದ್ದ ವಿಮಾನವನ್ನು ಪತನಗೊಳಿಸಲು ಪ್ರಯತ್ನಿಸಿದ ಸಹ ಪೈಲಟ್, ಇಸ್ಲಾಂ ಮೂಲಭೂತವಾದದ ಪ್ರಭಾವಕ್ಕೆ ಒಳಗಾಗಿದ್ದನು' ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಗುರುವಾರ ಹೇಳಿದ್ದಾರೆ.


'ಶಂಕಿತ ವ್ಯಕ್ತಿಯ ವೈಯಕ್ತಿಕ ಮಾಹಿತಿ ಕಲೆಹಾಕುವಾಗ ತನಿಖಾಧಿಕಾರಿಗಳು ಈ ವಿಷಯ ತಿಳಿದುಕೊಂಡಿದ್ದಾರೆ' ಎಂದಷ್ಟೇ ಹೇಳಿದ ಅವರು ಹೆಚ್ಚಿನ ವಿವರಗಳನ್ನು ನೀಡಲಿಲ್ಲ. 

ಆ ವ್ಯಕ್ತಿಯನ್ನು ಮೂಲಭೂತವಾದಿಯನ್ನಾಗಿ ಮಾಡಿದ್ದು ಯಾರು ಎಂಬ ಪ್ರಶ್ನೆಗೆ, 'ಅದು ನನಗೆ ತಿಳಿದಿಲ್ಲ. ಘಟನೆ ಬಗ್ಗೆ ಯುಎಇ ಅಧಿಕಾರಿಗಳು ನಡೆಸುತ್ತಿರುವ ತನಿಖೆಗೆ ಇಸ್ರೇಲ್‌ ಸಹಕರಿಸುತ್ತಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.

'ದಾಳಿಕೋರನ ಮೂಲ ಹಾಗೂ ಆತನಿಗೆ ಬೇರೆ ಯಾರಾದರೂ ನೆರವು ನೀಡಿದ್ದರೇ ಎಂಬುದನ್ನು ಪತ್ತೆ ಹಚ್ಚುತ್ತೇವೆ' ಎಂದು 'ಫಾಕ್ಸ್‌ ನ್ಯೂಸ್‌'ಗೆ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಯುಎಇಯ ಅಧಿಕಾರಿಗಳು ವಿವಿಧ ಆಯಾಮಗಳಿಂದ ತನಿಖೆ ಆರಂಭಿಸಿದ್ದಾರೆ. ಸಹ ಪೈಲಟ್‌ ಒಬ್ಬರೇ ಈ ಕೃತ್ಯ ಎಸಗಿದ್ದಾರೆಯೇ, ಅವರ ಉದ್ದೇಶ ಏನು, ವಿಮಾನವನ್ನು ಪತನಗೊಳಿಸುವುದು ಗುರಿಯಾಗಿತ್ತೇ ಅಥವಾ ಅದನ್ನು ಅಪಹರಿಸಿ ಬೇರೊಂದು ದೇಶದಲ್ಲಿ ಇಳಿಸುವುದು ಉದ್ದೇಶವಾಗಿತ್ತೇ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.

ದುಬೈನಿಂದ ಟೆಲ್ ಅವೀವ್‌ಗೆ ಸಂಚರಿಸುತ್ತಿದ್ದ ಫ್ಲೈ ದುಬೈ ಸಂಸ್ಥೆಯ ವಿಮಾನವನ್ನು ಪತನಗೊಳಿಸುವ ಪ್ರಯತ್ನ ಬುಧವಾರ ನಡೆದಿತ್ತು. ಭಾರತ ಮೂಲದ ಪೈಲಟ್‌ ಸ್ಮಿತ್‌ ಮಚ್ಚರ್‌ ಅವರು ವಿಮಾನದ ಸಿಬ್ಬಂದಿ ಹಾಗೂ ಕೆಲವು ಪ್ರಯಾಣಿಕರ ನೆರವಿನಿಂದ ದುರಂತವನ್ನು ತಪ್ಪಿಸಿದ್ದರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries