HEALTH TIPS

'ನನ್ನ ಲವರ್ ಜೊತೆನೇ ಹೋಗ್ತೀನಿ'; ಕೋರ್ಟ್ ನಲ್ಲಿ ಮಗಳ ಹೇಳಿಕೆಗೆ ಆಕ್ರೋಶ, ಯುವಕನ ತಂದೆಗೆ ಹಿಗ್ಗಾಮುಗ್ಗ ಜಾಡಿಸಿದ ತಾಯಿ!-Video

 ಹಮೀರ್‌ಪುರ: ಮಗಳು ತನ್ನ ಪ್ರಿಯಕರನ ಜೊತೆ ಇರಲು ಬಯಸುವುದಾಗಿ ಕೋರ್ಟ್‌ನಲ್ಲಿ ಹೇಳಿದ್ದಕ್ಕೆ ಸಿಟ್ಟಿಗೆದ್ದ ತಾಯಿ, ಕೋರ್ಟ್‌ ಹೊರಗೆ ಯುವಕನ ತಂದೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದಿದೆ.


ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಮೀರ್‌ಪುರದ ಬಿವಾಂರ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಗ್ರಾಮವೊಂದಕ್ಕೆ ಈ ಘಟನೆ ಸಂಬಂಧಿಸಿದೆ. ಯುವತಿ ಸೆಪ್ಟೆಂಬರ್‌ 20ರಂದು ಕಾನ್ಪುರದ ಬಿಠೂರ್‌ ಪ್ರದೇಶದ ಯುವಕನೊಂದಿಗೆ ಮನೆ ಬಿಟ್ಟು ಓಡಿ ಹೋಗಿದ್ದಳು.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಯುವತಿಯನ್ನು ಪತ್ತೆಹಚ್ಚಿ ಬುಧವಾರ ವಶಕ್ಕೆ ಪಡೆದಿದ್ದರು.

ಬಳಿಕ ಗುರುವಾರ ಯುವತಿಯನ್ನು ಕೋರ್ಟ್‌ಗೆ ಹಾಜರುಪಡಿಸಿ ಆಕೆಯ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಈ ವೇಳೆ ಯುವತಿ ತಾನು ತನ್ನ ಪ್ರಿಯಕರನ ಜೊತೆ ಇರಲು ಬಯಸುವುದಾಗಿ ನ್ಯಾಯಾಲಯದಲ್ಲಿ ಹೇಳಿದ್ದಾಳೆ ಎಂದು ವರದಿಯಾಗಿದೆ.

ಯುವಕನ ತಂದೆಗೆ ಕಪಾಳಮೋಕ್ಷ, ಕಾಲಲ್ಲಿ ಒದ್ದು ತಾಯಿ ಆಕ್ರೋಶ

ಇನ್ನು ಮಗಳ ಈ ಹೇಳಿಕೆ ತಾಯಿಯ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಕೋರ್ಟ್‌ನಿಂದ ಹೊರಬಂದ ಬಳಿಕ ಆಕೆ ಯುವಕನ ತಂದೆಯನ್ನು ಎದುರುಗೊಂಡು ಜಗಳ ತೆಗೆದಿದ್ದಾಳೆ.

ಬಳಿಕ ಆತನಿಗೆ ಕಪಾಳಮೋಕ್ಷ ಮಾಡಿ, ಕಾಲಿನಿಂದ ಒದ್ದು, ಚಪ್ಪಲಿಯಿಂದ ಹೊಡೆದಿದ್ದಾಳೆ ಎಂದು ಆರೋಪಿಸಲಾಗಿದೆ.

ಘಟನೆಯ ದೃಶ್ಯಗಳನ್ನು ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಡಿಯೋದಲ್ಲಿ ಮಹಿಳೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ.

ಹಲ್ಲೆಯ ಬಳಿಕ ಮಹಿಳೆ ಬೊಲೆರೋ ವಾಹನದಲ್ಲಿ ಸ್ಥಳದಿಂದ ತೆರಳಿದ್ದಾಳೆ. ಮಗಳ ಪ್ರೇಮ ಸಂಬಂಧದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಉಂಟಾದ ಸಂಘರ್ಷವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.

ದೂರು ದಾಖಲಾಗಿಲ್ಲ

ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹಮೀರ್‌ಪುರ ಸದರ್‌ ವೃತ್ತಾಧಿಕಾರಿ ಯಶಪಾಲ್‌ ಸಿಂಗ್‌ ಮಾತನಾಡಿ, ಘಟನೆ ಕುರಿತು ಪೊಲೀಸರಿಗೆ ಯಾವುದೇ ಮಾಹಿತಿ ಅಥವಾ ಲಿಖಿತ ದೂರು ಬಂದಿಲ್ಲ. ಎರಡೂ ಪಕ್ಷಗಳ ಪೈಕಿ ಯಾರಾದರೂ ದೂರು ನೀಡಿದರೆ, ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries