HEALTH TIPS

17ರಿಂದ ಉದುಮ ಬೇವೂರಿನಲ್ಲಿ ಏಳನೇ ರಾಜ್ಯಮಟ್ಟದ ನಾಟಕೋತ್ಸವ

ಕಾಸರಗೋಡು: ಉದುಮ ಬೇವೂರಿನ 'ಸೌಹೃದ ವಾಚನಾಲಯ ಮತ್ತು ಗ್ರಂಥಾಲಯ' ಸಮಿತಿಯ ವತಿಯಿಂದ ಏಳನೇ ವರ್ಷದ ಕೆ.ಟಿ. ಮುಹಮ್ಮದ್ ಸ್ಮಾರಕ ರಾಜ್ಯಮಟ್ಟದ ವೃತ್ತಿಪರ ನಾಟಕ ಸ್ಪರ್ಧೆ ನವೆಂಬರ್ 17ರಿಂದ 23ರವರೆಗೆ ಬೇವೂರಿನ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ನಾಟಕೋತ್ಸವಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಮಾಜಿ ಶಾಸಕ ಹಾಗೂ ಸಂಘಟನಾ ಸಮಿತಿ ಅಧ್ಯಕ್ಷ ಕೆ.ವಿ. ಕುಞಿರಾಮನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉತ್ಸವದ ಅಂಗವಾಗಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಮತ್ತು ಕಲಾ ಕಾರ್ಯಕ್ರಮಗಳು ಜರುಗಲಿವೆ. ನವೆಂಬರ್ 17ರಂದು ಸಂಜೆ 5 ಗಂಟೆಗೆ ಎಚ್. ಕರುವನ್ ಅವರ ನಿವಾಸದಿಂದ ಆರಂಭವಾಗಲಿರುವ 'ನಾಟಕ ಜ್ಯೋತಿ' ಮೆರವಣಿಗೆಯನ್ನು ಜಿಲ್ಲಾ ಗ್ರಂಥಾಲಯ ಪರಿಷತ್ತಿನ ಅಧ್ಯಕ್ಷ ಪಿ. ದಿಲೀಪ್ ಕುಮಾರ್ ಉದ್ಘಾಟಿಸಲಿದ್ದಾರೆ.

ಸಂಜೆ 6 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ನಾಟಕೋತ್ಸವ ರಾಜ್ಯ ಕಾರ್ಯದರ್ಶಿ ಶೈಲಜಾ ಉದ್ಘಾಟಿಸಲಿದ್ದು, ಸಂಘಟನಾ ಸಮಿತಿ ಅಧ್ಯಕ್ಷ ಕೆ.ವಿ. ಕುಞಿರಾಮನ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ 7.30ಕ್ಕೆ ತಿರುವನಂತಪುರದ 'ಸೌಪರ್ಣಿಕ' ತಂಡದಿಂದ 'ಪಡಯೋಟ್ಟಂ' ನಾಟಕ ಪ್ರದರ್ಶನಗೊಳ್ಳುವುದರೊಂದಿಗೆ ಏಳು ದಿನಗಳ ನಾಟಕೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.

ನವೆಂಬರ್ 23ರಂದು ಸಂಜೆ 6 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭವನ್ನು ಮಾಜಿ ಶಾಸಕ ಪಿ. ಜಯರಾಜನ್ ಉದ್ಘಾಟಿಸಲಿದ್ದು, ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿ ಕಾರ್ಯಾಧ್ಯಕ್ಷ ಪಿ.ವಿ. ರಾಜೇಂದ್ರನ್, ಪ್ರಧಾನ ಸಂಚಾಲಕ ರಚನಾ ಅಬ್ಬಾಸ್, ಮಾಧ್ಯಮ ಸಮಿತಿ ಅಧ್ಯಕ್ಷ ರಾಜೇಶ್ ಮಾಙಾಡ್, ಸಂಚಾಲಕ ಕೆ. ವಿಜಯಕುಮಾರ್, ಪ್ರಚಾರ ಸಮಿತಿ ಸಂಚಾಲಕ ಎಚ್. ವೇಲಾಯುಧನ್ ಹಾಗೂ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಎ. ಅಪ್ಪಕುಞಿ ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries