HEALTH TIPS

ವಿವಾಹಿತ ಮಹಿಳೆಯರಿಗೆ 500 ಗ್ರಾಂ ಚಿನ್ನದ ವಿನಾಯಿತಿ ಇದ್ದರೂ ಮೂಲ ತೋರಿಸುವುದು ಕಡ್ಡಾಯ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ!

ನವದೆಹಲಿ: ಅಕ್ರಮ ಆಸ್ತಿಗಳಿಸುವಿಕೆ ಪ್ರಕರಣಗಳಲ್ಲಿ ಮದುವೆಯಾದ ಮಹಿಳೆಯು ಹೊಂದಿರುವ 500 ಗ್ರಾಂ ವರೆಗಿನ ಚಿನ್ನಕ್ಕೆ ಆದಾಯ ಮೂಲದ ವಿವರಣೆ ನೀಡುವ ಅಗತ್ಯವಿಲ್ಲ ಎಂಬ ಕಲ್ಪನೆಯನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಳ್ಳಿಹಾಕಿದೆ. 500 ಗ್ರಾಂ ವರೆಗಿನ ಚಿನ್ನವನ್ನು ಕೇವಲ ಜಪ್ತಿ ಮಾಡದಂತೆ ರಕ್ಷಣೆ ಪಡೆಯಬಹುದೇ ಹೊರತು, ಅಕ್ರಮ ಆಸ್ತಿ ಪ್ರಕರಣ ಎದುರಿಸುತ್ತಿರುವಾಗ ಆ ಚಿನ್ನವನ್ನು ಪಡೆದ ಮೂಲ ಅಥವಾ ಆರ್ಥಿಕ ಆದಾಯವನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ಸಿಗುವುದಿಲ್ಲ ಎಂದು ದೇಶದ ಅತ್ಯುನ್ನತ ನ್ಯಾಯಾಲಯ ಮಹತ್ವದ ಸ್ಪಷ್ಟನೆ ನೀಡಿದೆ.
'ಫುಲ್ಪಾರಿ ಕುಮಾರಿ ವಿರುದ್ಧ ಬಿಹಾರ ಸರ್ಕಾರ'ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಮತ್ತು ನ್ಯಾಯಮೂರ್ತಿ ಅರುಣ್ ಪಲ್ಲಿ ಅವರಿದ್ದ ಪೀಠವು ಪಾಟ್ನಾ ಹೈಕೋರ್ಟ್ ನೀಡಿದ್ದ ಆದೇಶವನ್ನು ವಜಾಗೊಳಿಸಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅಕ್ರಮ ಆಸ್ತಿಗಳಿಕೆ ಆರೋಪ ಎದುರಿಸುತ್ತಿರುವ ಸರ್ಕಾರಿ ನೌಕರರು ಅಥವಾ ಸಂಬಂಧಪಟ್ಟವರು ತಾವು ಹೊಂದಿರುವ ಆಸ್ತಿ ಮತ್ತು ಚಿನ್ನಕ್ಕೆ ನಿಖರವಾದ ಲೇಖಾಜೋಖಾ ಹಾಗೂ ಆದಾಯ ಮೂಲವನ್ನು ಸಾಬೀತುಪಡಿಸಬೇಕಾಗುತ್ತದೆ. ಕೇವಲ ಹಣಕಾಸು ಸಚಿವಾಲಯದ ಹಳೆಯ ಸುತ್ತೋಲೆ ಅಥವಾ ಪತ್ರಿಕಾ ಪ್ರಕಟಣೆಯನ್ನು ತೋರಿಸಿ ಚಿನ್ನದ ಮೂಲವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
2016 ರ ಡಿಸೆಂಬರ್ 1 ರ ಹಣಕಾಸು ಸಚಿವಾಲಯದ ಮಾರ್ಗಸೂಚಿಯ ಪ್ರಕಾರ, ಆದಾಯ ತೆರಿಗೆ ದಾಳಿಯ ಸಮಯದಲ್ಲಿ ಮದುವೆಯಾದ ಮಹಿಳೆಗೆ 500 ಗ್ರಾಂ, ಮದುವೆಯಾಗದ ಮಹಿಳೆಗೆ 250 ಗ್ರಾಂ ಹಾಗೂ ಪುರುಷರಿಗೆ 100 ಗ್ರಾಂ ವರೆಗಿನ ಚಿನ್ನಾಭರಣಗಳನ್ನು ಜಪ್ತಿ ಮಾಡಬಾರದು ಎಂಬ ನಿಯಮವಿದೆ. ಆದರೆ ಈ ಜಪ್ತಿ ವಿನಾಯಿತಿ ನಿಯಮವು ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳ ಅಪರಾಧ ತನಿಖೆಯ ವೇಳೆ ಚಿನ್ನದ ಮೂಲವನ್ನು ಸಮರ್ಥಿಸಿಕೊಳ್ಳಲು ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries