HEALTH TIPS

ದೆಹಲಿ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿರುವ ಭಗವಾನ್ ಬುದ್ಧನ ಪವಿತ್ರ ಅವಶೇಷಗಳು ಇಂದಿನಿಂದ ಅರುಣಾಚಲ ಪ್ರದೇಶದಲ್ಲಿ ಪ್ರದರ್ಶನ; ವಾಯುಪಡೆಯ ವಿಶೇಷ ವಿಮಾನಗಳಲ್ಲಿ ರವಾನೆ

ನವೆಂಬರ್ 21 ರವರೆಗೆ ನಡೆಯಲಿರುವ ಈ ಪ್ರದರ್ಶನವು ಭಕ್ತರಿಗೆ ಬುದ್ಧನ ಪವಿತ್ರ ಅವಶೇಷಗಳನ್ನು ದರ್ಶಿಸಲು ಅಪರೂಪದ ಅವಕಾಶವನ್ನು ಒದಗಿಸಲಿದೆ.

ಇಟಾನಗರ: ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿರುವ ಭಗವಾನ್ ಬುದ್ಧನ ಪವಿತ್ರ ಅವಶೇಷಗಳನ್ನು ಇಂದಿನಿಂದ ಒಂದು ತಿಂಗಳ ಕಾಲ ಅರುಣಾಚಲ ಪ್ರದೇಶದ ಮೂರು ಪ್ರಮುಖ ಬೌದ್ಧ ಕೇಂದ್ರಗಳಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಪ್ರದರ್ಶಿಸಲಾಗುತ್ತದೆ. 


ನವೆಂಬರ್ 21 ರವರೆಗೆ ನಡೆಯಲಿರುವ ಈ ಪ್ರದರ್ಶನವು ಭಕ್ತರಿಗೆ ಬುದ್ಧನ ಅವಶೇಷಗಳನ್ನು ಕಣ್ತುಂಬಿಕೊಳ್ಳಲು ಸುವರ್ಣಾವಕಾಶ ಕಲ್ಪಿಸಲಿದೆ. ತವಾಂಗ್ ಮಠದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಭಾಗವಹಿಸಲಿದ್ದಾರೆ. ತವಾಂಗ್ ಮಾತ್ರವಲ್ಲದೆ ಬೊಮ್ಡಿಲಾ ಮತ್ತು ನಾಮ್ಸಾಯಿಯಲ್ಲೂ ಈ ಅವಶೇಷಗಳನ್ನು ಪ್ರದರ್ಶಿಸಲಾಗುವುದು.

ಭಾರತೀಯ ವಾಯುಪಡೆಯ ವಿಶೇಷ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಮೂಲಕ ಈ ಅವಶೇಷಗಳನ್ನು ಅರುಣಾಚಲ ಪ್ರದೇಶಕ್ಕೆ ತಲುಪಿಸಲಾಗಿದೆ. ಪ್ರಾಚೀನ ಕಪಿಲವಸ್ತುವಿಗೆ ಸಂಬಂಧಿಸಿದ ಉತ್ತರ ಪ್ರದೇಶದ ಪಿಪ್ರಾಹ್ವಾದಿಂದ ಇವುಗಳನ್ನು ಪತ್ತೆಹಚ್ಚಿದ್ದರಿಂದ ಇವುಗಳನ್ನು 'ಪಿಪ್ರಾಹ್ವಾ ಅವಶೇಷಗಳು' ಎಂದೂ ಕರೆಯಲಾಗುತ್ತದೆ.

ಟಿಬೆಟಿಯನ್ ಬೌದ್ಧರ ಪ್ರಮುಖ ಹಬ್ಬವಾದ 'ಲ್ಹಾಬಾಬ್ ದುಚೆನ್' ಆಚರಣೆಯ ಅಂಗವಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ, ಅರುಣಾಚಲ ಪ್ರದೇಶ ಸರ್ಕಾರ, ಇಂಟರ್ನ್ಯಾಷನಲ್ ಬುದ್ಧಿಸ್ಟ್ ಕಾನ್ಫೆಡರೇಶನ್ (ಐಬಿಸಿ) ಮತ್ತು ರಾಷ್ಟ್ರೀಯ ವಸ್ತುಸಂಗ್ರಹಾಲಯಗಳು ಜಂಟಿಯಾಗಿ ಈ ಪ್ರದರ್ಶನವನ್ನು ಆಯೋಜಿಸಿವೆ. ಇದರ ಜೊತೆಗೆ, ಈ ಅವಶೇಷಗಳ ಇತಿಹಾಸ ಮತ್ತು ಅವುಗಳನ್ನು ಪತ್ತೆಹಚ್ಚಿದ ಘಟನಾವಳಿಗಳನ್ನು ವಿವರಿಸುವ ವಿಶೇಷ ವಸ್ತುಪ್ರದರ್ಶನವನ್ನು ಸಹ ಐಬಿಸಿ ಆಯೋಜಿಸಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries