HEALTH TIPS

ಇಸ್ರೇಲ್ ಸಂಸತ್ತಿನ ಸ್ಪೀಕರ್ ಹುದ್ದೆಗೆ ಮತನ್ ಕಹಾನಾ ಹೆಸರು ಅಂತಿಮ: ಪ್ರಮುಖ ಹುದ್ದೆಗಳ ಹಂಚಿಕೆಗೆ ವಿರೋಧ ಪಕ್ಷಗಳ ನಾಯಕರ ಒಮ್ಮತ

ಟೆಲ್ ಅವೀವ್: ಇಸ್ರೇಲ್‌ ನಲ್ಲಿ ಹೊಸ ಸರಕಾರ ರಚನೆಯ ಕಸರತ್ತು ನಡೆಯುತ್ತಿರುವಂತೆಯೇ, ಸಂಸತ್ತಿನ (ನೆಸೆಟ್) ಪ್ರಮುಖ ಹುದ್ದೆಗಳ ಹಂಚಿಕೆ ಕುರಿತು ವಿರೋಧ ಪಕ್ಷಗಳ ನಾಯಕರು ಒಮ್ಮತಕ್ಕೆ ಬಂದಿದ್ದಾರೆ. ಮಾಜಿ ಸಚಿವ ಹಾಗೂ ನೂತನ ಸಂಸದ ಮತನ್ ಕಹಾನಾ ಅವರನ್ನು ಸಂಸತ್ತಿನ ಸ್ಪೀಕರ್ ಹುದ್ದೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಗಾಡಿ ಐಸೆನ್‌ ಕೋಟ್ ಮಂಗಳವಾರ ಪ್ರಕಟಿಸಿದ್ದಾರೆ.

ನಫ್ತಾಲಿ ಬೆನೆಟ್, ಯಾಯಿರ್ ಗೋಲಾನ್, ಅವಿಗ್ದೋರ್ ಲೈಬರ್‌ಮ್ಯಾನ್ ಮತ್ತು ಯಾಯಿರ್ ಲಾಪಿಡ್ ಅವರೊಂದಿಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ನಾಲ್ವರು ಬದಲಾವಣೆ ಮತ್ತು ಸುಧಾರಣಾ ಪಕ್ಷಗಳ ನಾಯಕರಾಗಿದ್ದಾರೆ ಎಂದು ಐಸೆನ್‌ ಕೋಟ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ತಿಳಿಸಿದ್ದಾರೆ.

ಒಪ್ಪಂದದಂತೆ, ನೂತನ ಸಂಸದ ರಾಯ್ ಫೋಕ್‌ ಮ್ಯಾನ್ ಅವರಿಗೆ ಸದನ ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಮಾಜಿ ರಕ್ಷಣಾ ಸಚಿವ ಹಾಗೂ ಸಂಸದ ಅವಿಗ್ದೋರ್ ಲೈಬರ್‌ಮ್ಯಾನ್ ಅವರು ವಿದೇಶಾಂಗ ವ್ಯವಹಾರಗಳು ಮತ್ತು ರಕ್ಷಣಾ ಸಮಿತಿಯ ಅಧ್ಯಕ್ಷರಾಗಲಿದ್ದಾರೆ. ನೂತನ ಸಂಸದೆ ಲಿರಾನ್ ಅವಿಸಾರ್ ಬೆನ್-ಹೊರಿನ್ ಅವರು ಹಣಕಾಸು ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಮಿತಿಗಳ ರಚನೆಗೆ ಮುಂದಿನ ವಾರ ಅನುಮೋದನೆ

ಸಂಸತ್ತಿನ ವಿವಿಧ ಸಮಿತಿಗಳ ರಚನೆಯ ಕುರಿತು ಈ ವಾರ ಸದನ ಸಮಿತಿಯಲ್ಲಿ ಚರ್ಚೆ ನಡೆಯಲಿದೆ. ಚರ್ಚೆಯ ಬಳಿಕ ಸಮಿತಿಗಳ ರಚನೆಗೆ ಸಂಬಂಧಿಸಿದ ಅಂತಿಮ ನಿರ್ಧಾರ ಕೈಗೊಂಡು, ಮುಂದಿನ ಬುಧವಾರ ನೆಸೆಟ್‌ ನ ಪೂರ್ಣ ಅಧಿವೇಶನದಲ್ಲಿ ಅನುಮೋದನೆಗಾಗಿ ಮಂಡಿಸಲಾಗುವುದು ಎಂದು ಐಸೆನ್‌ ಕೋಟ್ ತಿಳಿಸಿದ್ದಾರೆ.

ಇದರ ಜೊತೆಗೆ, ವಿಶೇಷ ಸಮಿತಿಗಳನ್ನು ರಚಿಸುವ ಬಗ್ಗೆಯೂ ವಿರೋಧ ಪಕ್ಷಗಳ ನಾಯಕರು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಸಮಿತಿಗಳ ವಿವರಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಎಂದು ಅವರು ಎಕ್ಸ್‌ ನಲ್ಲಿನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries