HEALTH TIPS

‘ಗಿಳಿವಿಂಡು’ವಿನಲ್ಲಿ ಅಕ್ಷರ ತೋರಣ: ಗ್ರಾಮ್ಯ ಬದುಕು, ಶಿಕ್ಷಣದ ಕುರಿತು ಮನಬಿಚ್ಚಿದ ನಾರಾಯಣ ದೇಲಂಪಾಡಿ

ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಭವನ ‘ಗಿಳಿವಿಂಡು’ವಿನಲ್ಲಿ ‘ಲೇಖಕರೊಂದಿಗೆ ಮಾತುಕತೆ’ ಸರಣಿಗೆ ಶನಿವಾರ ಚಾಲನೆ ನೀಡಲಾಯಿತು. ಮೊದಲ ಕಾರ್ಯಕ್ರಮದಲ್ಲಿ ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಹಾಗೂ ಲೇಖಕ ನಾರಾಯಣ ದೇಲಂಪಾಡಿ ತಮ್ಮ ಬದುಕು, ಬರಹ ಮತ್ತು ಶಿಕ್ಷಣ ಕ್ಷೇತ್ರದ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡರು.

ದೇಲಂಪಾಡಿಯ ಗ್ರಾಮ್ಯ ಪರಿಸರ, ತಂದೆಯವರ ಯಕ್ಷಗಾನ ಪ್ರಾವೀಣ್ಯತೆ ಮತ್ತು ನೆಲಮೂಲದ ಶ್ರಮ ಸಂಸ್ಕೃತಿಯೇ ತಮ್ಮ ಬರವಣಿಗೆಗೆ ಪ್ರೇರಣೆ ಎಂದರು. ಮಲಯಾಳಿ ಮನೆಮಾತಿನವರಾದರೂ ಕನ್ನಡ ಹಾಗೂ ಯಕ್ಷಗಾನದ ಒಲವಿನಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾಗಿ ತಿಳಿಸಿದರು. ಅಧ್ಯಾಪಕ ವೃತ್ತಿಯಲ್ಲಿ ಓದು-ಬರಹದ ಅಭಿರುಚಿ ಅತ್ಯಗತ್ಯ ಎಂದು ಪ್ರತಿಪಾದಿಸಿದ ಅವರು, ತಮ್ಮ 27 ವರ್ಷಗಳ ಶೈಕ್ಷಣಿಕ ಅನುಭವಗಳನ್ನು ಆಧರಿಸಿ ಮುಂದೆ ಕೃತಿ ರಚಿಸುವ ಆಶಯ ವ್ಯಕ್ತಪಡಿಸಿದರು.


ಮಂ. ಗೋ. ಪೈ. ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಡಾ. ಉದಯ ಕುಮಾರ್ ಇರ್ವತ್ತೂರು ಸ್ವಾಗತಿಸಿ, ಗ್ರಾಮ ಜ್ಞಾನ ಸಂರಕ್ಷಣೆಯ ಉದ್ದೇಶದಿಂದ ಈ ಸಂವಾದ ಆಯೋಜಿಸಲಾಗಿದೆ ಎಂದರು. ಪತ್ರಕರ್ತ ಎಂ. ನಾ. ಚಂಬಲ್ತಿಮಾರ್ ಲೇಖಕರನ್ನು ಗೌರವಿಸಿದರು. ಡಾ. ರಾಜಲಕ್ಷ್ಮಿ ಇರ್ವತ್ತೂರು, ಹರೀಶ್ ಕುಡ್ತಡ್ಕ ಸೇರಿದಂತೆ ಹಲವರು ಸಂವಾದದಲ್ಲಿ ಪಾಲ್ಗೊಂಡಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries