HEALTH TIPS

ವೈಯಕ್ತಿಕ ಕ್ಯಾನ್ಸರ್ ಲಸಿಕೆ ಅಭಿವೃದ್ಧಿಪಡಿಸಿದ ಹೈದರಾಬಾದ್‌ನ ಸ್ಟಾರ್ಟ್‌ಅಪ್ 'ಪಾಪ್‌ವ್ಯಾಕ್ಸ್'

 ಪ್ರಾಯೋಗಿಕ ಚಿಕಿತ್ಸೆಗೆ ಬರೋಬ್ಬರಿ ₹2.5 ಕೋಟಿ ವೆಚ್ಚ: ಸಿಇಒ ಸೋಹಂ ಶಂಕರನ್ ಮಾಹಿತಿ

ಹೈದರಾಬಾದ್: ಕ್ಯಾನ್ಸರ್ ಚಿಕಿತ್ಸಾ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಉದ್ದೇಶದೊಂದಿಗೆ ಹೈದರಾಬಾದ್ ಮೂಲದ ಬಯೋಟೆಕ್ನಾಲಜಿ ಸ್ಟಾರ್ಟ್‌ಅಪ್ 'ಪಾಪ್‌ವ್ಯಾಕ್ಸ್' (PopVax), ರೋಗಿಗಳಿಗೆ ಅನುಗುಣವಾಗಿ ಪ್ರತ್ಯೇಕವಾಗಿ ತಯಾರಿಸುವ ವೈಯಕ್ತಿಕ mRNA (Personalized mRNA) ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. 


ಪ್ರತಿಯೊಬ್ಬ ಕ್ಯಾನ್ಸರ್ ರೋಗಿಯ ಗಡ್ಡೆಯ (ಟ್ಯೂಮರ್) ನಿರ್ದಿಷ್ಟ ಆನುವಂಶಿಕ ಬದಲಾವಣೆಗಳನ್ನು (ಜೆನೆಟಿಕ್ ಮ್ಯುಟೇಶನ್) ಪತ್ತೆಹಚ್ಚಿ, ಅವರ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಅತ್ಯಾಧುನಿಕ ಲಸಿಕೆಗಳನ್ನು ಸಂಸ್ಥೆ ರೂಪಿಸುತ್ತಿದೆ. ಹೈದರಾಬಾದ್‌ನಲ್ಲಿರುವ ತನ್ನ ಆರ್‌ಎನ್‌ಎ ಫೌಂಡ್ರಿಯ ಮೂಲಕ ಲಸಿಕೆ ವಿನ್ಯಾಸ, mRNA ಉತ್ಪಾದನೆ, ಲಿಪಿಡ್ ನ್ಯಾನೊಪಾರ್ಟಿಕಲ್ ಸಂಯೋಜನೆ ಮತ್ತು ಗುಣಮಟ್ಟ ಪರೀಕ್ಷೆ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯನ್ನು ಒಂದೇ ಸೂರಿನಡಿ ನಿರ್ವಹಿಸಲಾಗುತ್ತಿದೆ.

ಕೇವಲ ೮ ರಿಂದ ೧೦ ವಾರಗಳ ಅಲ್ಪಾವಧಿಯಲ್ಲೇ ಲಸಿಕೆಯ ವಿನ್ಯಾಸದಿಂದ ಅಂತಿಮ ಉತ್ಪನ್ನ ಸಿದ್ಧಪಡಿಸುವುದು ಈ ತಂತ್ರಜ್ಞಾನದ ವೈಶಿಷ್ಟ್ಯ. ಕೋವಿಡ್ ಲಸಿಕೆಗಳಿಗಿಂತ ಭಿನ್ನವಾಗಿ, ಸಾಮಾನ್ಯ ರೆಫ್ರಿಜರೇಟರ್ ತಾಪಮಾನದಲ್ಲೇ ಸಂಗ್ರಹಿಸಿಡಬಹುದಾದ ವಿಶೇಷ ಲಿಪಿಡ್ ನ್ಯಾನೊಪಾರ್ಟಿಕಲ್ ತಂತ್ರಜ್ಞಾನವನ್ನು ಕಂಪನಿ ಅಭಿವೃದ್ಧಿಪಡಿಸಿದೆ. ಲಸಿಕೆಗಳ ವಿನ್ಯಾಸಕ್ಕಾಗಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಪರಿಕರಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಪ್ರಸ್ತುತ ಇದು ಸಂಪೂರ್ಣವಾಗಿ ಪ್ರಾಯೋಗಿಕ ಚಿಕಿತ್ಸೆಯಾಗಿದ್ದು, ನಿಯಮಬದ್ಧ ಅನುಮೋದನೆ ಪಡೆದ ಅಧಿಕೃತ ಔಷಧವಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಈ ಅತ್ಯಾಧುನಿಕ ಚಿಕಿತ್ಸೆಗೆ ಅಂದಾಜು ೩,೦೦,೦೦೦ ಡಾಲರ್ (ಸುಮಾರು ₹೨.೫ ಕೋಟಿ) ವೆಚ್ಚವಾಗುವುದರಿಂದ ಸದ್ಯಕ್ಕೆ ಕೆಲವೇ ರೋಗಿಗಳಿಗೆ ಮಾತ್ರ ಇದು ಲಭ್ಯವಾಗಲಿದೆ. ರೊಬೊಟಿಕ್ಸ್ ರಂಗದ ಎಂಜಿನಿಯರ್ ಆಗಿರುವ ಸೋಹಂ ಶಂಕರನ್ ಅವರು ಪಾಪ್‌ವ್ಯಾಕ್ಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries