ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಬೆಂಗಳೂರಿನ ತುಳು ಕೂಟದ ಆಶ್ರಯದಲ್ಲಿ ಭಾನುವಾರ ಬೆಂಗಳೂರಿನ ಬಂಟರ ಭವನದಲ್ಲಿ ನಡೆದ ತುಳು ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಮ್ಮೇಳನವಾದ ತುಳುನಾಡು ಉತ್ಸವ-2017 ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲೆಯ ಯುವ ಸಾಹಿತಿ ವಿರಾಜ್ ಅಡೂರು ಭಾಗವಹಿಸಿ ಶಿವಳ್ಳಿ ತುಳು ಭಾಷೆಯಲ್ಲಿ ಕವನ ವಾಚಿಸುತ್ತಿರುವುದು.