ಆನೆಕಲ್ಲು ಶಾಲೆಯಲ್ಲಿ ಮಾರ್ಧನಿಗೊಂಡ ಕನ್ನಡ ಸ್ವರ
ಮಂಜೇಶ್ವರ: ಕಾಸರಗೋಡಿನ ಕನ್ನಡ ಸಂಸ್ಕ್ರತಿಯ ಕಾಯ್ದುಕೊಳ್ಳುವಿಕೆಯಲ್ಲಿ ರಂಗಚಿನ್ನಾರಿಯ ಸಮರ್ಥ ಕಾರ್ಯಯೋಜನೆಗಳು ಪ್ರಭವಶಾಲಿಯಾಗಿ ಕಾರ್ಯನಿರ್ವಹಿಸುತ್ತಿವೆ. ಗಡಿನಾಡಿನ ಕನ್ನಡ ಅನನ್ಯತೆ ಮುಂದಿನ ತಲೆಮರಿಗೂ ಮುಂದುವರಿಸುವ ತುಡಿತ ಇದೆಯೆಂದಾದರೆ ಅದು ಈ ಮಣ್ಣಿನ ಧೀಮಂತತೆಯ ಪ್ರತೀಕ ಎಂದು ಆನೆಕಲ್ಲು ಹಿರಿಯ ಪ್ರಾಥಮಿಕ ಶಾಲಾ ಆಡಳಿತ ಸಮಿತಿ ಪ್ರತಿನಿಧಿ ಮುರಳೀಶ್ಯಾಮ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಸಹಕಾರದೊಂದಿಗೆ ಕಾಸರಗೋಡಿನ ಸಾಹಿತ್ತಿಕ, ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಏರ್ಪಡಿಸುವ ಕಾಸರಗೋಡಿನ 2 ಸಾವಿರ ಕನ್ನಡ ವಿದ್ಯಾಥರ್ಿಗಳಿಗೆ ರಾಷ್ಟ್ರ ಕವಿ ಕುವೆಂಪು ರವರ ಜಯ ಭಾರತ ಜನನಿಯ ಹಾಗೂ ಗೋವಿಂದ ಪೈ ರಚಿಸಿದ "ತಾಯೆ ಬಾರ ಮೊಗವ ತೋರ " ಗೀತೆಗಳನ್ನು ಕಲಿಸುವ ಗೀತಾ ಗಾಯನ ಕಾಯರ್ಾಗಾರ ಕನ್ನಡ ಸ್ವರದ ಮೂರನೇ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆ, ಸಂಸ್ಕೃತಿಗಳ ಬೆಳವಣಿಗೆಗಳಿಗೆ ಸಾಹಿತ್ಯ ಪ್ರಕಾರಗಳ ಕೊಡುಗೆ ಅಪೂರ್ವವಾಗಿದ್ದು, ಜನರ ಅಂತರ್ಕರಣವನ್ನು ತೆರೆಸುವ, ಸತ್ಯ ಶೋಧಿಸುವ ಶಕ್ತಿ ಸಾಹಿತ್ಯಗಳಿಗಿವೆ. ಜನರನ್ನು ಬಡಿದೆಬ್ಬಿಸಿ ಕರ್ತವ್ಯದೆಡೆಗೆ ಹಚ್ಚುವ ಶಕ್ತಿಯಿರುವ ಸಾಹಿತ್ಯ ಗೀತೆಗಳ ಗಾಯನ ಕಾಯರ್ಾಗಾರ ಕಾಸರಗೋಡಿಗೆ ಹೆಚ್ಚು ಪ್ರಸ್ತುತ ಎಂದು ಅವರು ತಿಳಿಸಿದರು.
ಮುಖ್ಯೋಪಾಧ್ಯಾಯ ಸತ್ಯನಾರಾಯಣ ಭಟ್ ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾಥರ್ಿಗಳ ಭಾಷಾ ಪ್ರೇಮ ಬೆಳೆಸುವಲ್ಲಿ ಹಮ್ಮಿಕೊಂಡ ಕಾಯರ್ಾಗಾರ ಪ್ರೇರಣದಾಯಿಯಾಗಿ ಯಸಸ್ವಿಯಾಗಲಿ ಎಂದು ಹಾರ್ಯಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಉಪಸ್ಥಿತರಿದ್ದು ಶುಭಹಾರೈಸಿದರು. ರಂಗ ಚಿನ್ನಾರಿ ಸಂಚಾಲಕ ಸತ್ಯನಾರಾಯಣ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಖ್ಯಾತ ಯುವ ಗಾಯಕ ಕಿಶೋರ್ ಪೆರ್ಲ ರವರು ಮಕ್ಕಳಿಗೆ ಹಾಡುಗಳನ್ನು ಕಲಿಸಿ ಕಾರ್ಯಗಾರವನ್ನು ಸಂಪನ್ನ ಗೊಳಿಸಿದರು.ನಾರಾಯಣ ರಾಜ್ ರವರು ಸ್ವಾಗತಿಸಿ,ಅಧ್ಯಾಪಕ ಜೀವನ ಕುಮಾರ್ ನಿರೂಪಿಸಿದರು.