ರಂಜಿಸಿದ ರಂಗಸಿರಿ ತಾಳಮದ್ದಳೆ
ಬದಿಯಡ್ಕ: ಬದಿಯಡ್ಕದ ಅಯ್ಯಪ್ಪ ದೀಪೋತ್ಸವ(ತಿರುವಿಳಕ್) ಸಂದರ್ಭದಲ್ಲಿ ರಂಗಸಿರಿ ಸಾಂಸ್ಕೃತಿಕ ವೇದಿಕೆ ಸಂಸ್ಥೆಯ ಸದಸ್ಯರಿಂದ ಸುಧನ್ವಮೋಕ್ಷ ತಾಳಮದ್ದಳೆ ನಡೆಯಿತು. ಪಾಂಡವಾಶ್ವಮೇಧದ ಕುದುರೆ ಪರ್ಯಟನೆಯ ಸಂದರ್ಭದಲ್ಲಿ ಚಂಪಕಾಪುರದ ಶ್ರೀಕೃಷ್ಣನ ದರುಶನಾಕಾಂಕ್ಷಿ ಭಕ್ತ ಸುಧನ್ವ ಸಾಯುಜ್ಯ ಪಡೆದ ಕಥೆಯನ್ನು ಕಲಾವಿದರು ಬಹಳ ಸೊಗಸಾಗಿ ನಿರೂಪಿಸಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ರವಿಶಂಕರ ಚೇನಕೋಡು, ಚೆಂಡೆಯಲ್ಲಿ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು, ಮದ್ದಳೆಯಲ್ಲಿ ಮುರಳೀಮಾಧವ ಮಧೂರು ಸಹಕರಿಸಿದರು. ಪಾತ್ರವರ್ಗದಲ್ಲಿ ಶ್ರೀಕೃಷ್ಣನಾಗಿ ಖ್ಯಾತಪ್ರಸಂಗಕರ್ತ ವೆಂಕಟಕೃಷ್ಣ ಮಧೂರು, ಅಜರ್ುನನಾಗಿ ಶ್ರೀಶ ಪಂಜಿತ್ತಡ್ಕ, ಸುಧನ್ವನಾಗಿ ಬಾಲಕೃಷ್ಣ ಆಚಾರ್ಯ ನೀಚರ್ಾಲು, ಪ್ರಭಾವತಿಯಾಗಿ ಕರಿಂಬಿಲ ಲಕ್ಷ್ಮಣ ಪ್ರಭು, ಪ್ರದ್ಯುಮ್ನನಾಗಿ ಪ್ರಭಾವತಿ ಕೆದಿಲಾಯ ಪುಂಡೂರು, ವೃಷಕೇತುವಾಗಿ ಮನೀಶ್ ರೈ ವಳಮಲೆ ತಮ್ಮ ಪಾತ್ರಗಳಿಗೆ ಜೀವ ತುಂಬಿದರು.