HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಕನ್ನಡಿಗರು ಒಗ್ಗಟ್ಟಾದರೆ ಸಾಧನೆಯ ಮೈಲುಗಲ್ಲು ದಾಟಬಹುದು : ಕೋಳಾರು
   ಕಾಸರಗೋಡು: ಅಪ್ಪಟ ಕನ್ನಡ ಪ್ರದೇಶವಾದ ಕಾಸರಗೋಡಿನ ಕನ್ನಡಿಗರ ಮೇಲೆ ಕೇರಳ ಸರಕಾರ ಕಡ್ಡಾಯ ಮಲಯಾಳ ಹೇರುತ್ತಿದೆ. ಈ ಮೂಲಕ ಕನ್ನಡ ಭಾಷೆ, ಸಂಸ್ಕೃತಿಗೆ ಅಪಾಯದ ಭೀತಿ ಎದುರಾಗಿದೆ. ಕನ್ನಡಿಗರೆಲ್ಲರೂ ಒಗ್ಗಟ್ಟಾದರೆ ಸಾಧನೆಯ ಮೈಲುಗಲ್ಲು ದಾಟಬಹುದು ಎಂದು ಕ್ಯಾಂಪ್ಕೋ ನಿದರ್ೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಅಭಿಪ್ರಾಯಪಟ್ಟರು. 
    ಅವರು ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಆಯೋಜಿಸಿದ ತಿಂಗಳ ಹಬ್ಬದ ಎಂಟನೇ ತಿಂಗಳ ಕಾರ್ಯಕ್ರಮ ಭರತನಾಟ್ಯ - ಜಾದೂ ನೃತ್ಯ' ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
   ಕನ್ನಡಿಗರು ಮಲಯಾಳ ಭಾಷಾ ದ್ವೇಷಿಗಳಲ್ಲ. ಕನ್ನಡಿಗರು ಎಲ್ಲಾ ಭಾಷೆಗಳನ್ನು ಗೌರವಿಸುತ್ತಾರೆ. ಆದರೆ ಕೇರಳ ಸರಕಾರ ಕನ್ನಡಿಗರ ಮೇಲೆ ಮಲಯಾಳ ಕಡ್ಡಾಯ ಹೇರುತ್ತಿದೆ. ಇದರ ವಿರುದ್ಧ ಪ್ರತಿಭಟನೆ ನಿರಂತರವಾಗಿ ನಡೆಯಬೇಕು. ಈ ಕಾರಣದಿಂದ ಕಾಸರಗೋಡಿನ ಕನ್ನಡಿಗರು ನಿರಂತರವಾಗಿ ಕನರ್ಾಟಕಕ್ಕೆ ವಲಸೆ ಹೋಗುತ್ತಿದ್ದಾರೆ. ಆದರೂ ಇಲ್ಲಿ ಉಳಿದು ಕೊಂಡಿರುವ ಕನ್ನಡಿಗರು ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಲು ಪಣತೊಟ್ಟಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಹ ಸಂಸ್ಥೆಗಳಲ್ಲಿ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯೂ ಒಂದಾಗಿದೆ. ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಕನ್ನಡ ಭಾಷೆ, ಸಾಹಿತ್ಯ, ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಪ್ರಯತ್ನ ಶ್ಲಾಘನೀಯ ಎಂದರು.
   ಆಧುನಿಕ ಮಾಧ್ಯಮಗಳಿಂದಾಗಿ ಸಂಸ್ಕೃತಿ, ಪರಂಪರೆಯನ್ನು ಮರೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಿಂದ ಪಾರು ಮಾಡಬೇಕಾದರೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಯುವ ಜನಾಂಗಕ್ಕೆ ತಿಳಿಸಿಕೊಡುವ ಪ್ರಯತ್ನವಾಗಬೇಕು. ಆ ಮೂಲಕ ಇಂತಹ ಮೌಲ್ಯಗಳನ್ನು ಉಳಿಸಿ ಬೆಳೆಸಲು ಸಾಧ್ಯ ಎಂದರು.
   ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕೇಳು ಮಾಸ್ಟರ್ ಅಗಲ್ಪಾಡಿ ಅವರು `ಅಯ್ಯಪ್ಪ ಸ್ವಾಮಿಯ ವ್ರತ ಮತ್ತು ಶಬರಿಮಲೆ ತೀಥರ್ಾಟನೆ' ಕುರಿತಾಗಿ ಉಪನ್ಯಾಸ ನೀಡಿದರು.
    ಮಂಗಳೂರು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ವಸಂತ ಕುಮಾರ್ ಪೆರ್ಲ ಮತ್ತು ಇಂದ್ರಜಾಲ ಕಲಾವಿದ ಕಡೆಂಕೋಡಿ ಬಾಲಸುಬ್ರಹ್ಮಣ್ಯ ಭಟ್ ಮೊದಲಾದವರು ಉಪಸ್ಥಿತರಿದ್ದರು.
  ಈ ಸಂದರ್ಭದಲ್ಲಿ ಮಾಚರ್್ ತಿಂಗಳಲ್ಲಿ ನಡೆಯಲಿರುವ ರಾಮ ತಾರಕ ಯಜ್ಞ  ಪ್ರಚಾರಾರ್ಥ ಬ್ಯಾನರ್ ಹಾಗು ಹುಂಡಿಯನ್ನು ಬಿಡುಗಡೆಗೊಳಿಸಲಾಯಿತು.
    ತಿಂಗಳ ಹಬ್ಬ ಕಾರ್ಯಕ್ರಮದಲ್ಲಿ ದೂರದರ್ಶನ ಕಲಾವಿದೆ ವಿದುಷಿ ಅಯನಾ ಪೆರ್ಲ ಅವರಿಂದ `ಶಂಭೋನಟನಂ' ಭರತನಾಟ್ಯ ಪ್ರದರ್ಶನ ಮತ್ತು ಪ್ರತಿಷ್ಠಿತ ಪ್ರಶಸ್ತಿ ಪುರಸ್ಕೃತ ಜಾದೂಗಾತರ್ಿ ತೇಜಸ್ವಿನಿ ಕಡೆಂಕೋಡಿ ಅವರಿಂದ ಜಾದೂ ನೃತ್ಯ ಜನಮನಸೂರೆಗೊಂಡಿತು.
    ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ  ಸತ್ಯನಾರಾಯಣ ಕಾಸರಗೋಡು ಸ್ವಾಗತಿಸಿ, ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕವಾಗಿ ಮಾತನಾಡಿ ತಿಂಗಳ ಹಬ್ಬದ ಲಕ್ಷ್ಯದ ಬಗ್ಗೆ ಮಾಹಿತಿ ನೀಡಿದರು. ಲತಾ ಪ್ರಕಾಶ್, ಹಿರಿಯ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries