HEALTH TIPS

No title

              ಸಾಮಾನ್ಯರಿಗೆ ಅರ್ಥವಾಗುವ, ಪ್ರೇರಣೆ ನೀಡುವ ನಾಟಕಗಳನ್ನು ಪ್ರದಶಿಸಬೇಕು-ಎಡನೀರು ಶ್ರೀಗಳು
                    ಕಾಸರಗೊಡಲ್ಲಿ ಗಡಿನಾಡ ನಾಟಕೋತ್ಸವ ಉದ್ಘಾಟನೆ
     :: ಕನ್ನಡ ಭಾಷೆ, ಸಂಸ್ಕ್ರತಿಯ ಸಂವರ್ಧನೆಗೆ ಪ್ರೇರಣೆ ನೀಡುವ ಸಾಂಸ್ಕೃತಿಕ ಚಟುವಟಿಕೆಗಳು ಪೂರಕ ವಾತಾವರಣ ಕಲ್ಪಿಸುತ್ತದೆ. ನಾಟಕ, ಯಕ್ಷಗಾನ ಸಹಿತ ವಿವಿಧ ಕಲಾ ಪ್ರಕಾರಗಳು ಆಯಾ ಭಾಷೆಯಲ್ಲಿ ಬೆಳೆದು ಬರುವುದು ಭಾಷೆಯ ಸೃಜನಾತ್ಮಕತೆಗೆ ಬಲ ನೀಡುತ್ತದೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀವರ್ಾದ ಪೂರ್ವಕ ಅನುಗ್ರಹ ಭಾಷಣ ಮಾಡಿದರು.
   ಕನರ್ಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ಕಾಸರಗೋಡಿನ ಅಪೂರ್ವ ಕಲಾವಿದರು ಜಂಟಿ ಆಶ್ರಯದಲ್ಲಿ ಕಾಸರಗೋಡು ಕೊರಕ್ಕೋಡು ನಾಗರಕಟ್ಟೆಯ ಶ್ರೀಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಿರುವ ಮೂರು ದಿನಗಳ "ಗಡಿನಾಟ ನಾಟಕೋತ್ಸ"ವಕ್ಕೆ ಗುರುವಾರ ಸಂಜೆ ದೀಪ ಬೆಳಗಿಸಿ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.
   ಮನಸ್ಸುಗಳಿಗೆ ಸತ್ ಚಿಂತನೆ, ಸದಾಶಯಗಳು ನಾಟುವಂತೆ ಪ್ರೇರಣೆ ನೀಡುವ, ಪ್ರೇಕ್ಷಕ ಸುಲಭವಾಗಿ ಅಥರ್ೈಸುವ ಮಟ್ಟದ ನಾಟಕಗಳನ್ನು ಪ್ರದಶರ್ಿಸಿದರೆ ಅದು ಯಶಸ್ವಿಯಾಗುತ್ತದೆ.ಕ್ಲಿಷ್ಟ ಭಾಷೆ, ಸಂವೇದನಾ ರಹಿತ ಮಾತುಗಳು, ಕಥಾ ನಿರೂಪಣೆಯ ಸೋಲು ನಾಟಕದ ಮೂಲ ಕಲ್ಪನೆಗೆ ಮಾರಕವಾಗುತ್ತದೆ ಎಂದು ತಿಳಿಸಿದ ಅವರು, ಯಶಸ್ವಿ ರಂಗಪ್ರಯೋಗ ಸಮಾಜ ಪರಿವರ್ತನೆಗೆ ನಾಂದಿ ಹಾಡುತ್ತದೆ ಎಂದು ತಿಳಿಸಿದರು.
   ಗಡಿನಾಡು ಕಾಸರಗೋಡು ಕನ್ನಡಿಗರ ಪ್ರದೇಶವಾಗಿದ್ದರೂ ಬೇರೆಬೇರೆ ಮಾತೃಭಾಷೆಗಳ ಜನರು ಕನ್ನಡವನ್ನು ಕಟ್ಟಿ ಬೆಳೆಸಿದ ಶ್ರಮ ಅಪಾರವಾದುದು ಎಂದು ತಿಳಿಸಿದ ಅವರು, ನಾಟಕ, ಯಕ್ಷಗಾನದ ಹಿರಿಮೆಯನ್ನು ಸಾರುವಲ್ಲಿ ಇಲ್ಲಿಯ ಕನ್ನಡ ಪ್ರೇಮಿಗಳ ಕೊಡುಗೆ ಮಹತ್ತರ ಎಂದು ತಿಳಿಸಿದರು. ಯುವ ಸಮೂಹ ಸಾಂಸ್ಕೃತಿಕ ಬೇರುಗಳನ್ನು ಮರೆಯುವ ಭೀತಿ ಇದ್ದು, ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮತ್ತೆ ಮೂಲ ಪರಂಪರೆಯನ್ನು ದಾಟಿಸುವ ಯತ್ನ ನಡೆಯಬೇಕು ಎಂದು ಅವರು ಆಶೀರ್ವಚನವಿತ್ತರು.
   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನರ್ಾಟಕ ನಾಟಕ ಅಕಾಡೆಮಿಯ ಸದಸ್ಯ ಬಾಸುಮ ಕೊಡಗು ಮಾತನಾಡಿ, ಆಧುನಿಕ ಯುವ ಮನಸ್ಸು ಸಜ್ಜನರಾಗಿ ಆರೋಗ್ಯಪೂರ್ಣ ಸಮಾಜ ನಿಮರ್ಾಣಕ್ಕೆ ಕಲೆ ನೆರವಾಗುತ್ತದೆ. ಸಾಂಸ್ಕೃತಿಕ ಚಲನಶೀಲ ಸಮಾಜ ಚಿಕಿತ್ಸಕ ದೃಷ್ಟಿಯಲ್ಲಿ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
   ಅಕಾಡೆಮಿಯ ನೂತನ ಸಮಿತಿ ಅಸ್ತಿತ್ವಕ್ಕೆ ಬಂದು ಕೆಲವೇ ತಿಂಗಳುಗಳೊಳಗೆ ಗಡಿನಾಡ ನಾಟಕೋತ್ಸವವನ್ನು ಕಾಸರಗೊಡು ಮತ್ತು ಬೆಳಗಾವಿಯಲ್ಲಿ ಆಯೋಜಿಸುತ್ತಿರುವುದು ಅಕಾಡೆಮಿಯ ಕ್ರಿಯಾತ್ಮಕತೆಯ ಸೂಚಕ ಎಂದು ತಿಳಿಸಿದರು. ತಿಂಗಳ ನಾಟಕ,ನೇಪಥ್ಯ ಶಿಬಿರ, ನಾಟಕ ಬರವಣಿಗೆ ಸ್ಪಧರ್ೆ ಮೊದಲಾದವುಗಳನ್ನು ಅಕಾಡೆಮಿ ಹಮ್ಮಿಕೊಂಡು ಜನಮನ್ನಣೆ ಗಳಿಸಿದೆ ಎಂದು ತಿಳಿಸಿದರು.
   ಮುಖ್ಯ ಅತಿಥಿಗಳಾಗಿ ಕನರ್ಾಟಕ ಕೊಂಕಣಿ ಅಕಾಡೆಮಿ ಸದಸ್ಯ ಲಕ್ಷ್ಮಣ ಪ್ರಭು ಕುಂಬಳೆ ಉಪಸ್ಥಿತರಿದ್ದು ಮಾತನಾಡಿದರು. ನಗರಸಭಾ ಸದಸ್ಯ ಜಯಪ್ರಕಾಶ್, ಹಿರಿಯ ಸಂಕೀರ್ತನಕಾರ ಜಯಾನಂದ ಕುಮಾರ್ ಹೊಸದುರ್ಗ ಉಪಸ್ಥಿತರಿದ್ದರು. ಅಪೂರ್ವ ಕಲಾವಿದರು ಸಂಸ್ಥೆಯ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೊಡು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ದಿನೇಶ್ ಕೆ.ನಾಗರಕಟ್ಟೆ ವಂದಿಸಿದರು. ವೇಣುಗೋಪಾಲ ಶೇಣಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಪ್ರತಿಭೆಗಳಾದ ಝೀ ಟ.ವಿ.ಡ್ರಾಮಾ ಜ್ಯೂನಿಯರ್ಸ್ ಸೆಮಿ ಫೈನಲ್ ಹಂತದಲಲಿರುವ ಅನೂಪ್ ರಮಣ ಶಮರ್ಾ ಮುಳ್ಳೇರಿಯ ಹಾಗೂ ಪ್ರತಿಭಾವಂತ ವಿದ್ಯಾಥರ್ಿ, ನಾಟಕ ಸ್ಪಧರ್ೆಯಲ್ಲಿ ಸತತ ಮೂರು ವರ್ಷಗಳಿಂದ ಪ್ರಥಮ ಬಹುಮಾನಿತೆಯಾಗಿರುವ ಸುಶ್ಮಿತಾ ಕೆ ಯವರನ್ನು ಅಭಿನಂದಿಸಲಾಯಿತು.
   ಬಳಿಕ ಮಂಗಳೂರಿನ ರಂಗಸಂಗಾತಿ ತಂಡದವರು ಶಶಿರಾಜ್ ಕಾವೂರು ರಚಿಸಿರುವ, ಮೋಹನಚಂದ್ರ ಯು. ನಿದರ್ೇಶನದ "ನೆಮ್ಮದಿ ಅಪಾಟರ್್ಮೆಂಟ್-ಪ್ಲಾಟ್ ನಂಬ್ರ 252" ನಾಟಕವನ್ನು ಪ್ರದಶರ್ಿಸಿದರು. ಹಿರಿಯ ಕಲಾವಿದರಾದ ನವೀನ್ ಡಿ.ಪಡೀಲ್, ಗೋಪಿನಾಥ್ ಭಟ್, ಚಂದ್ರಹಾಸ ಉಳ್ಳಾಲ್, ಲಕ್ಷ್ಮಣಕುಮಾರ್ ಮಲ್ಲೂರ್, ಸುಧಾಕರ ಸಾಲ್ಯಾನ್, ಸಂತೋಷ್ ಶೆಟ್ಟಿ, ಮಂಜುಳ ಜನಾರ್ಧನ್ ಮೊದಲಾದವರು ಪಾತ್ರಗಳಿಗೆ ಜೀವತುಂಬಿದರು.
   ಶುಕ್ರವಾರ ಎಚ್.ಎಸ್ ಶಿವಪ್ರಕಾಶ್ ರಚಿಸಿರುವ, ಮಂಟೆಸ್ವಾಮಿ ಕಥಾಪ್ರಸಂಗ ನಾಟಕವನ್ನು ಯುವ ನಿದರ್ೇಸಕ ಉದಯ ಸಾರಂಗ್ರ ನೇತೃತ್ವದಲ್ಲಿ ಕಲಾಸಂಗಮ ಕಾಸರಗೊಡು ತಮಡ ಯಶಸ್ವಿಯಾಗಿ ಪ್ರದಶರ್ಿಸಿತು.
   ಇಂದು ಸಂಜೆ 7 ರಿಂದ ನಟಸಾರ್ವಭೌಮ ಗುಬ್ಬಿ ವೀರಣ್ಣನವರ 125ನೇ ವಷರ್ಾಚರಣೆಯ ಅಂಗವಾಗಿ ಹವ್ಯಾಸಿ ಶೈಲಿಯ ಪೌರಾಣಿಕ ನಾಟಕ ಡಾ.ಸಾಸ್ವೆಹಳ್ಳಿ ಸತೀಶ್ ರಚನೆ, ವಿನ್ಯಾಸದ ವೀರ ಉತ್ತರಕುಮಾರ ನಾಟಕವನ್ನು ಖ್ಯಾತ ಕಲಾವಿದರು ಪ್ರದಶರ್ಿಸುವರು. ಸಂಜೆ  6.30ಕ್ಕೆ ನಡೆಯುವ ಸಮರೋಪ ಸಮಾರಂಭದಲ್ಲಿ ಸಾಸ್ವೆಹಳ್ಳಿ ಸತೀಶ್ ಸಮಾರೋಪ ಭಾಷಣ ಮಾಡುವರು. ಕ.ಸಾ.ಪ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ರಾಘವನ್ ನಾಗರಕಟ್ಟೆ, ಸಂತೋಷ್ ಕುಮಾರ್ ಕಾಸರಗೋಡು ಉಪಸ್ಥಿತರಿರುವರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries