HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           40ನೇ ಸಂಸ್ಕೃತ ಅಧ್ಯಾಪಕ ಫೆಡರೇಶನ್ ಸಮ್ಮೇಳನ ನಾಳೆಯಿಂದ 
   ಕಾಸರಗೋಡು: ಕೇರಳ ಸಂಸ್ಕೃತ ಅಧ್ಯಾಪಕ ಫೆಡರೇಶನ್(ಕೆಎಸ್ಟಿಎಫ್) 40ನೇ ರಾಜ್ಯ ಸಮ್ಮೇಳನ ಇಂದಿನಿಂದ ಫೆ. 24ರ ವರೆಗೆ ಕಾಸರಗೊಡು ನಗರಸಭಾ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
   ಕಾರ್ಯಕ್ರಮದ ಅಂಗವಾಗಿ ಫೆ.22(ಇಂದು) ಬೆಳಿಗ್ಗೆ 7.30ಕ್ಕೆ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲು ಪರಿಸರದಿಂದ ಸಮ್ಮೇಳನ ನಗರಕ್ಕೆ ಸಮ್ಮೇಳನ ಜ್ಯೋತಿ (ದೀಪಶಿಖಾ) ಮೆರವಣಿಗೆ ಹೊರಡುವುದು. 9ಕ್ಕೆ ಸಮ್ಮೇಳನ ನಡೆಯುವ ನಗರಸಭಾ ಸಭಾಂಗಣ ಸಮ್ಮೇಳನ ಸಮಿತಿ ಅಧ್ಯಕ್ಷ ನ್ಯಾಯವಾದಿ ಐ.ವಿ.ಭಟ್ ಸಮ್ಮೇಳನ ಜ್ಯೋತಿಯನ್ನು ಸ್ವೀಕರಿಸುವರು. ಸಂಘಟನೆಯ ರಾಜ್ಯಾಧ್ಯಕ್ಷ ವೇಣು ಚೆವ್ವಲ್ಲೂರು ಧ್ವಜಾರೋಹಣಗೈಯ್ಯುವರು.ಬಳಿಕ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕಾಸರಗೋಡು ನಗರಸಭಾಧ್ಯಕ್ಷೆ ಫಾತಿಮಾ ಇಬ್ರಾಹಿಂ ಅಧ್ಯಕ್ಷತೆ ವಹಿಸುವರು. ಉದುಮ ಶಾಸಕ ಕೆ.ಕುಂಞಿರಾಮನ್ ಉದ್ಘಾಟಿಸುವರು. ಕಾಲಡಿ ವಿವಿಯ ಪಯ್ಯನ್ನೂರು ವಿಭಾಗೀಯ ಘಟಕದ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ಇ.ಶ್ರೀಧರನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಗಣ್ಯರು ಉಪಸ್ಥಿತರಿರುವರು. ಬಳಿಕ ಪ್ರತಿನಿಧಿ ಸಮ್ಮೇಳನವು ವಿ.ಪದ್ಮನಾಭನ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮಾಜೀ ರಾಜ್ಯಾಧ್ಯಕ್ಷ ಪ್ರದೀಪ್ ಕುಮಾರ್ ಕೆ. ಉದ್ಘಾಟಿಸುವರು. ನ್ಯಾಯವಾದಿ ಸುರೇಂದ್ರನ್ ಕಡಯಕೋಟೆ, ವಿ.ವಿಜಯನ್ ಮಟ್ಟನ್ನೂರ್, ಮಧುಸೂದನನ್ ವಿ.ಎಲ್, ಟಿ.ಕೆ.ಸಂತೋಷ್ ಕುಮಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಬಳಿಕ ವಿವಿಧ ಚಚರ್ೆಗಳು, ಗೋಷ್ಠಿಗಳು ನಡೆಯಲಿದ್ದು, ಸಂಸ್ಕೃತ ಶಿಕ್ಷಕರ ಸಾಧನೆ-ಸವಾಲುಗಳ ಬಗ್ಗೆ ವಿಷಯ ಮಂಡನೆ ನಡೆಯಲಿದೆ. ಸಂಜೆ 5.30 ಕ್ಕೆ ನಡೆಯಲಿರುವ ಸಾಂಸ್ಕೃತಿಕ ಸಮ್ಮೇಳನದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ವಾಗ್ಮಿ ಆರ್.ಸಿ. ಕರಿಪ್ಪತ್ ಮುಖ್ಯ ಭಾಷಣ ಮಾಡುವರು. ನ್ಯಾಯವಾದಿ ಕೆ.ಕರುಣಾಕರನ್ ನಂಬ್ಯಾರ್, ರಾಜಗೋಪಾಲ್, ರಮೇಶ್ ನಂಬೀಶನ್, ಟಿ.ಕೆ.ಕೃಷ್ಣಕುಮಾರ್, ಸದಾಶಿವ ಭಟ್, ಸಜೀವನ್ ವೆಂಞಡ್ ಮೊದಲಾದವರು ಉಪಸ್ಥಿತರಿರುವರು. ಬಳಿಕ ಜಿಲ್ಲೆಯ ವಿವಿಧ ಶಾಲೆಗಳ ಸಂಸ್ಕೃತ ವಿದ್ಯಾಥರ್ಿಗಳು ಮತ್ತು ಶಿಕ್ಷಕರಿಂದ ಸಂಸ್ಕೃತ ಯಕ್ಷಗಾನ ಸಹಿತ ವಿವಿಧ ಸಾಂಸ್ಕೃತಿಕ ಕಲಾ ಪ್ರದರ್ಶನ ನಡೆಯಲಿದೆ.
  ಫೆ.23 ರಂದು ಬೆಳಿಗ್ಗೆ 9 ಕ್ಕೆ ಸಂಸ್ಕೃತ ಶಿಕ್ಷಕಿಯರಿಂದ ಬೃಹತ್ ತಿರುವಾದಿರ ನೃತ್ಯ, 10ಕ್ಕೆ ವಿದ್ಯಾಭ್ಯಾಸ ಗೋಷ್ಠಿ ನಡೆಯಲಿದ್ದು, ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು. ನಿವೃತ್ತ ಕೇಂದ್ರ ಸರಕಾರಿ ಕಾರ್ಯದಶರ್ಿ ವಿ.ವಿ.ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಈ ಸಂದರ್ಭ ಸಮ್ಮೇಳನ ಲಾಂಛನ ರಚಿಸಿದ ಧರ್ಮತ್ತಡ್ಕ ಶಾಲಾ ಶಿಕ್ಷಕ ಶಿವಪ್ರಸಾದ್ ರವರನ್ನು ಗೌರವಿಸಲಾಗುವುದು. 11.30 ರಿಂದ ನಡೆಯುವ ಸಂಸ್ಕೃತ ಸಮ್ಮೇಳನವನ್ನು ಕಾಲಡಿ ಶ್ರೀಶಂಕರಾಚಾರ್ಯ ವಿವಿಯ ಉಪಕುಲಪತಿ ಡಾ.ಧರ್ಮರಾಜ್ ಅಟಾಟ್ಟ್ ಉದ್ಘಾಟಿಸುವರು. ಚೆನ್ನೈ ಸಂಸ್ಕೃತ ಕಾಲೇಜು ಪ್ರಾಂಶುಪಾಲ ಟಿ.ವಿ.ಆರ್. ನಂಬೂದಿರಿ ಅಧ್ಯಕ್ಷತೆ ವಹಿಸುವರು. ಚಲನಚಿತ್ರ ನಿದರ್ೇಶಕ ಡಾ.ಜಿ. ಪ್ರಭ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಅಪರಾಹ್ನ ರಾಜ್ಯ ಸಮ್ಮೇಳನದ ಸಮಾರೋಪ ನಡೆಯಲಿದ್ದು, ಜಿ.ಪಂ. ಅಧ್ಯಕ್ಷ ಎಜಿಸಿ ಬಶೀರ್ ಅಧ್ಯಕ್ಷತೆ ವಹಿಸುವರು. ಶಾಸಕ ಎಂ.ರಾಜಗೋಪಾಲ್ ಉದ್ಘಾಟಿಸುವರು. ಈ ಸಂದರ್ಭ ನಿವೃತ್ತರಾಗುವ ಶಿಕ್ಷಕರನ್ನು ಬೀಳ್ಕೊಡಲಾಗುವುದು.
   ಫೆ.24 ರಂದು ಬೆಳಿಗ್ಗೆ 9.30 ರಿಂದ ರಾಜ್ಯ ಘಟಕದ ಸಭೆ, ಅವಲೋಕನ, ಮುಂದಿನ ಕಾರ್ಯಯೋಜನೆಗಳ ಯೋಜನಾ ತಯಾರಿಯೊಂದಿಗೆ ಸಮ್ಮೇಳನ ಮುಕ್ತಾಯಗೊಳ್ಳುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries