HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ತೆಂಗಿನ ಕೀಟ ರೋಗ ನಿಯಂತ್ರಣ
                ಸಿಪಿಸಿಆರ್ಐನಲ್ಲಿ  ಜಿಲ್ಲಾ ಮಟ್ಟದ ತರಬೇತಿ ಕಾಯರ್ಾಗಾರ
    ಕಾಸರಗೋಡು: ಕೃಷಿ ಇಲಾಖೆಯ ಸಹಕಾರದೊಂದಿಗೆ ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ (ಸಿಪಿಸಿಆರ್ಐ) ಕಾಸರಗೋಡು ಜಾರಿಗೊಳಿಸಿದ ಸಂಯೋಜಿತ ಕೀಟ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಜ್ಞಾನ ವ್ಯಾಪನ ಯೋಜನೆಯ ಅಂಗವಾಗಿ ಜಿಲ್ಲಾ ಮಟ್ಟದ ಕೃಷಿ ತರಬೇತಿ ಕಾರ್ಯಕ್ರಮವು ಸಿಪಿಸಿಆರ್ಐಯಲ್ಲಿ  ಜರಗಿತು.
  ಜಿಲ್ಲಾ  ಪಂಚಾಯತು ಅಧ್ಯಕ್ಷ  ಎ.ಜಿ.ಸಿ.ಬಶೀರ್ ಸಮಾರಂಭವನ್ನು  ಉದ್ಘಾಟಿಸಿ ಮಾತನಾಡಿದರು. ತೆಂಗು ಕೃಷಿಯ ಬಗ್ಗೆ  ವಿವರಿಸಿದ ಅವರು, ಕೃಷಿಕರು ಈ ಬೆಳೆಯನ್ನು  ಹೆಚ್ಚು  ನೆಚ್ಚಿಕೊಳ್ಳುವಂತೆ ಸಲಹೆಯಿತ್ತರು. ಪ್ರಭಾರ ನಿದರ್ೇಶಕ ಡಾ.ವಿನಾಯಕ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
  ತೆಂಗಿನ ಗಿಡ ಸಂರಕ್ಷಣೆಗೆ ಸಂಬಂಧಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ  ಸಿಪಿಸಿಆರ್ಐಯ ನೇತೃತ್ವದಲ್ಲಿ   ಏರ್ಪಡಿಸಿದ್ದ  ಕಾರ್ಯಕ್ರಮಗಳ ಕುರಿತು ವಿಜ್ಞಾನಿ ಡಾ.ಸಿ.ತಂಬಾನ್ ಮಾಹಿತಿ ನೀಡಿದರು. ಕೀಟ ರೋಗ ಬಾಧೆ ನಿಯಂತ್ರಣ ಯೋಜನೆಯ ಬಗ್ಗೆ  ಕೃಷಿ ಉಪನಿದರ್ೇಶಕ ಎಸ್.ಬಿಮಲ್ ಘೋಷ್ ಮಾತನಾಡಿದರು. ತೆಂಗಿನ ಕೀಟ ರೋಗ ನಿಯಂತ್ರಣದ ಕುರಿತು ಡಾ.ಪಿ.ಎಸ್.ಪ್ರತಿಭಾ ಅವರು ತರಗತಿ ನಡೆಸಿಕೊಟ್ಟರು.
  ಬಳಿಕ ನಡೆದ ಕಾಯರ್ಾಗಾರದಲ್ಲಿ  ಸಿಪಿಸಿಆರ್ಐ ಹಾಗೂ ಕೃಷಿ ಇಲಾಖೆಯ ಸಹಯೋಗದೊಂದಿಗೆ ಈ ಆಥರ್ಿಕ ವರ್ಷದಲ್ಲಿ  ಕೃಷಿ ವಲಯದಲ್ಲಿ  ಹಮ್ಮಿಕೊಳ್ಳುವ ವಿಜ್ಞಾನ ವ್ಯಾಪನ ಕಾರ್ಯಕ್ರಮದ ರೂಪುರೇಷೆಯನ್ನು  ತಯಾರಿಸಲಾಯಿತು. ವಿವಿಧ ಕೇರ (ತೆಂಗು) ಉತ್ಪಾದಕ ಸಂಘಗಳು ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries