HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಪೆರಡಾಲ ಶಾಲಾ ವಿಜ್ಞಾನೋತ್ಸವ
    ಬದಿಯಡ್ಕ: ಬಾಲ್ಯದಲ್ಲಿ ವಿಜ್ಞಾನದ ಆಶಯಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ನಮ್ಮ ಎಲ್ಲಾ ಕ್ರಿಯೆಯ ಹಿಂದಿರುವ ತತ್ವ ಅರಿತಾಗ ಆಶ್ಚರ್ಯ ಮೂಡಿಸುವುದು. ಹಳ್ಳಿಯ ಮಗುವೊಂದು ಶ್ರೇಷ್ಠ ವಿಜ್ಞಾನಿ ಆಗಬಹುದು ಎಂಬುದಕ್ಕೆ ಕಲಾಂ ಅವರು ನಿದರ್ಶನ ಎಂದು ಪೆರಡಾಲ ಸರಕಾರಿ ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ ಅವರು ಹೇಳಿದರು.
 ಅವರು ಪೆರಡಾಲ ಶಾಲಾ ವಿಜ್ಞಾನೋತ್ಸವವನ್ನು ಶೂನ್ಯದಲ್ಲಿ ಬೆಂಕಿ ಸೃಷ್ಟಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
  ಮುಖ್ಯ ಶಿಕ್ಷಕ ರಾಜಗೋಪಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಶಿಕ್ಷಕ ಶ್ರೀಧರನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನೀರು, ಬೆಳಕು, ಉಷ್ಣತೆ, ಕಾಂತೀಯ ಗುಣಗಳು, ಚಲನೆ, ಸೂಕ್ಷ್ಮದರ್ಶಕ ಇತ್ಯಾದಿ ವಿಷಯಗಳ ಬಗ್ಗೆ ವಿಜ್ಞಾನ ಕ್ಲಬ್ ಪ್ರಯೋಗಗಳನ್ನು ಏರ್ಪಡಿಸಿತ್ತು. ಶಾಲಾ ಸಂಪನ್ಮೂಲ ಸಂಘ ಸಂಚಾಲಕ ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.
 ಸಮಾರೋಪ ಸಮಾರಂಭದಲ್ಲಿ ಮಕ್ಕಳು ಪ್ರಯೋಗ ವರದಿ ಮಂಡಿಸಿದರು.ಹಿರಿಯ ಶಿಕ್ಷಕಿ ಶಾಂತಾಮಣಿ, ಶಿಕ್ಷಕರಾದ ಕೃಷ್ಣನ್ ನಂಬೂದಿರಿ, ಪ್ರಮೋದ್ ಕುಮಾರ್, ಶ್ರೀದೇವಿ, ಅಸ್ಮಾ, ಸಿಜಿ ಥೋಮಸ್, ಫ್ರೀಧಾ, ಮಹೇಶ, ಲೀನಾ, ಬಿನು, ಬಿನೋಯ್, ಶ್ರೀಕೃಷ್ಣ ಭಟ್ ಶಿಬಿರದ ನೇತೃತ್ವ ವಹಿಸಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries