HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಮಂಜೇಶ್ವರ: ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ ಉರೂಸ್ ಹಾಗೂ ಮತ ಪ್ರವಚನ 
    ಮಂಜೇಶ್ವರ: ಬಂಗ್ರ ಮಂಜೇಶ್ವರ ಮುಹಿಯ್ಯುದ್ದೀನ್ ಜುಮಾ ಮಸೀದಿ ಮುಸೋಡಿ ಅಧೀಕ ಹಝ್ರತ್ ಬಾಬಾ ಪಕ್ರುದ್ದೀನ್ ವಲಿಯುಲ್ಲಾಹಿ ಯವರ ಹೆಸರಿನಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಮಖಾಂ ಉರೂಸ್ ಹಾಗೂ ಮತ ಪ್ರವಚನ  ಫೆ.22 ರಿಂದ ಮಾಚರ್್ 3 ರ ತನಕ ನಡೆಯಲಿದ್ದು, ಮಾಚರ್್ 4 ರಂದು ಹಗಲು ಉರೂಸ್ ಹಾಗೂ ಅನ್ನದಾನ ನಡೆಯಲಿರುವುದಾಗಿ ಸಂಬಂಧಪಟ್ಟವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
   ಫೆ.22 ರಂದು ಗುರುವಾರ ಬೆಳಿಗ್ಗೆ 7 ಕ್ಕೆ ಅತ್ತಾವುಲ್ಲ ತಂಙಳ್ ಧ್ವಜಾರೋಹಣಗೈಯುವುದರೊಂದಿಗೆ ಉರೂಸ್ಗೆ ಚಾಲನೆ ದೊರಕಲಿದೆ. ಬಳಿಕ ಸಂಜೆ ಮಗರಿಬ್ ನಮಾಜಿನ ಬಳಿಕ ಅಬ್ದುಲ್ ಹಮೀದ್ ಹಾಜಿಯವರ ಅಧ್ಯಕ್ಷತೆಯಲ್ಲಿ ಎಂ ಟಿ ಅಬ್ದುಲ್ಲ ಮುಸ್ಲಿಯಾರ್ ಪ್ರಾರ್ಥನೆ ನಡೆಸಿದ ಬಳಿಕ ಝುಹೈರ್ ಅಝ್ ಹರಿ ಮುಖ್ಯ ಮತ ಪ್ರವಚನ ನಡೆಸುವರು.
  ಮುಂದಿನ ದಿನಗಳಲ್ಲಿ ನಡೆಯಲಿರುವ ಮತ ಪ್ರವಚನದಲ್ಲಿ ಗಣ್ಯ ಪಂಡಿತ ಶಿರೋಮಣಿಗಳು ಭಾಗವಹಿಸುವರು. ಸಮಾರೋಪದಂದು ಅಬ್ದುಲ್ ಅಝೀಝ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿರುವರು. ಸುದ್ದಿ ಗೋಷ್ಠಿಯಲ್ಲಿ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ, ಅಬ್ದುಲ್ಲ್ ಕಡವು, ಹಮೀದ್ ಹಾಜಿ, ಎಂ ಎ ಉಸ್ಮಾನ್ ಹಾಗೂ ಮೊಹಮ್ಮದ್ ಅಲಿ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries