HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಫೆ.24 : ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಾಷರ್ಿಕೋತ್ಸವ
   ಪೆರ್ಲ: ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 13 ನೇ ವಾಷರ್ಿಕೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮಕ್ಕಳ ಯಕ್ಷಗಾನ ಬಯಲಾಟ ಫೆ.24 ರಂದು ನಡೆಯಲಿದೆ. 
  ಬೆಳಗ್ಗೆ 9.30 ರಿಂದ ಶ್ರೀ ಗಣಪತಿ ಹೋಮ, 10.30 ರಿಂದ ಶ್ರೀ ಸತ್ಯನಾರಾಯಣ ಪೂಜೆ, 11 ರಿಂದ ಕೇಂದ್ರದ ವಿದ್ಯಾಥರ್ಿಗಳಿಂದ ಭಜನೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ನಡೆಯಲಿದೆ.
  ಅಪರಾಹ್ನ 3.30 ರಿಂದ ಕೇಂದ್ರದ ವಿದ್ಯಾಥರ್ಿಗಳಿಂದ ಪೂರ್ವರಂಗ, ಸಂಜೆ 4.30 ರಿಂದ ರಂಗಪ್ರವೇಶದ ವಿದ್ಯಾಥರ್ಿಗಳಿಂದ `ಸೀತಾ ಕಲ್ಯಾಣ' ಯಕ್ಷಗಾನ ಬಯಲಾಟ, 5.45 ಕ್ಕೆ `ಕಾಲನೇಮಿ ಕಾಳಗ', ರಾತ್ರಿ 7 ರಿಂದ ಸಭಾ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ ನಡೆಯುವುದು. ಕಾರ್ಯಕ್ರಮದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ. ಅಧ್ಯಕ್ಷತೆ ವಹಿಸುವರು. ಖ್ಯಾತ ಯಕ್ಷಗಾನ ಕಲಾವಿದ ಎಸ್.ರಾಮ ಭಟ್ ಕೋಟೆ ಉದ್ಘಾಟಿಸುವರು. ಮುಖ್ಯ ಅಭ್ಯಾಗತರಾಗಿ ಪ್ರೊ.ಶ್ರೀಕೃಷ್ಣ ಕಾರಂತ, ಶಿವಕುಮಾರ್, ರಾಜಾರಾಮ ಪೆರ್ಲ, ಸಿ.ಎಚ್.ಸುಬ್ರಹ್ಮಣ್ಯ ಭಟ್ ಚಣಿಲ, ದಿನೇಶ ಮಾಮೇಶ್ವರ, ಡಾ.ಎಸ್.ಎನ್.ಭಟ್, ಬೈಚೋಸ್ ಚಲಂಗ ಭಾಗವಹಿಸುವರು. ಹರಿನಾರಾಯಣ ಬೈಪಡಿತ್ತಾಯ ಅವರಿಗೆ ಪಡ್ರೆ ಚಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಲೀಲಾವತಿ ಬೈಪಡಿತ್ತಾಯ ಅವರಿಗೆ ಅಡ್ಕಸ್ಥಳ ಪ್ರಶಸ್ತಿ, ಯಕ್ಷಗಾನ ದ್ರೋಣಾಚಾರ್ಯ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಅವರಿಗೆ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಗುವುದು.
   ರಾತ್ರಿ 8.30 ರಿಂದ ಕೇರಳ ಶಾಲಾ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಬದಿಯಡ್ಕ ನವಜೀವನ ಶಾಲಾ ವಿದ್ಯಾಥರ್ಿಗಳಿಂದ ಬಭ್ರುವಾಹನ ಕಾಳಗ ಯಕ್ಷಗಾನ ಬಯಲಾಟ ಜರಗಲಿದೆ. ರಾತ್ರಿ 9.30 ರಿಂದ ಕೇಂದ್ರದ ವಿದ್ಯಾಥರ್ಿಗಳಿಂದ `ಶ್ರೀಕೃಷ್ಣ ಲೀಲಾಮೃತ ಚಕ್ರವ್ಯೂಹ' ಯಕ್ಷಗಾನ ಬಯಲಾಟ ಜರಗುವುದು.
       

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries