HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ರೋಹಿಂಗ್ಯಾ ವಲಸಿಗರು ಭಾರತದಲ್ಲಿ ಹೆಚ್ಚು ದಿನ ಉಳಿಯಲು ಅವಕಾಶ ನೀಡುವುದಿಲ್ಲ- ರಿಜಿಜು
      ನವದೆಹಲಿ:ಅಕ್ರಮವಾಗಿ ವಲಸೆ ಬಂದಿರುವ ರೊಹಿಂಗ್ಯಾ ವಲಸಿಗರು ದೇಶದಲ್ಲಿ ಹೆಚ್ಚು ದಿನ ಉಳಿಯಲು ಅವಕಾಶ ನೀಡುವುದಿಲ್ಲ ಎಂದು  ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
     ಕಾನೂನುಬಾಹಿರವಾಗಿ ವಲಸೆ ಬಂದಿರುವ ರೊಹಿಂಗ್ಯಾ ಸಮುದಾಯ ದೇಶದಲ್ಲಿ ಧೀರ್ಘ ಕಾಲ ವಾಸಿಸಲು ಅವಕಾಶ ನೀಡುವುದಿಲ್ಲ. ಈ ವಿಚಾರದಲ್ಲಿ   ಸಕರ್ಾರ ಸ್ಪಷ್ಟ ನಿಲುವು ತಾಳಿದೆ ಎಂದು ಅವರು ತಿಳಿಸಿದ್ದಾರೆ.
     ಈ ಮಧ್ಯೆ   ದೇಶವಾಸಿಗಳಿಗೆ ನೀಡಿರುವ ದಾಖಲೆಗಳು ರೊಹಿಂಗ್ಯಾ ಸಮುದಾಯಕ್ಕೆ ಲಭ್ಯವಾಗದಂತೆ ನೋಡಿಕೊಳ್ಳುವಂತೆ ಎಲ್ಲಾ ರಾಜ್ಯಸಕರ್ಾರಗಳಿಗೆ ನಿದರ್ೇಶನ ನೀಡಲಾಗಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
    ಈ ಸಂಬಂಧ ಮ್ಯಾನ್ ಮಾರ್  ಸಕರ್ಾರ ಹಾಗೂ ಅಲ್ಲಿನ ವಿದೇಶಾಂಗ ಸಚಿವರೊಂದಿಗೆ    ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮಾತುಕತೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
    ಮ್ಯಾನ್ಮಾರ್ ನಿಂದ ರೊಹಿಂಗ್ಯಾ ಮುಸ್ಲಿ ವಲಸಿಗರು ಅಕ್ರಮವಾಗಿ ದೇಶಕ್ಕೆ ಬರದಂತೆ  ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಮ್ಮು-ಕಾಶ್ಮೀರ ಸೇರಿದಂತೆ ಎಲ್ಲಾ ರಾಜ್ಯಸಕರ್ಾರಗಳಿಗೆ  ಕೇಂದ್ರಸಕರ್ಾರ ಕಳೆದ ತಿಂಗಳು ಪತ್ರ ಬರೆದಿದೆ ಎಂದು ಅವರು ಹೇಳಿದ್ದಾರೆ.
   ಇತ್ತೀಚಿಗೆ ಭಾರತಕ್ಕೆ ಭೇಟಿ ನೀಡಿದ್ದ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ  ರೊಹಿಂಗ್ಯಾ ಸಮಸ್ಯೆ ಕುರಿತಂತೆ ಚಚರ್ೆ ನಡೆಸಿದ್ದು, ರೊಹಿಂಗ್ಯಾ ಸಮುದಾಯ ಬಾಂಗ್ಲಾದೇಶಕ್ಕೆ ಮರಳುವಲ್ಲಿ ದೆಹಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ.
   ಕಳೆದ ವರ್ಷ ಆಗಸ್ಟ್  ತಿಂಗಳು ಭಾರತದ ಕಡೆಗೆ ವಲಸೆ ಬಂದ  ರೊಹಿಂಗ್ಯಾ ಸಮುದಾಯದ ಜನರು  ಜಮ್ಮು-ಕಾಶ್ಮೀರ, ಹೈದ್ರಾಬಾದ್, ಹಯರ್ಾಣ, ಉತ್ತರ ಪ್ರದೇಶ, ದೆಹಲಿ , ರಾಜಸ್ತಾನ ಮತ್ತಿತರ ಕಡೆಗಳಲ್ಲಿ ವಾಸಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries