ಭಜನಾ ಸಂಕೀರ್ತನೆ 33ನೇ ದಿನ-ಮಾಣಿಲ ಶ್ರೀಗಳ ಭೇಟಿ-ಸಮಾಲೋಚನೆ
ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯುತ್ತಿರುವ ಭಜನಾ ಸಂಕೀರ್ತನ ಮಂಡಲದ 33 ನೇ ದಿನವಾದ ಗುರುವಾರ ಕಾಸರಗೋಡಿನ ಶ್ರೀ ಪದ್ಮಪ್ರಿಯಾ ಮಹಿಳಾ ಭಜನಾ ಮಂಡಳಿ ಹಾಗೂ ಕುಂಬಳೆ ಶ್ರೀಗೋಪಾಲಕೃಷ್ಣ ಭಜನಾ ಮಂಡಳಿಯವರಿಂದ ಭಜನಾಸಂಕೀರ್ತನಾ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಅವಲೋಕನ ನಡೆಸಿದರು. ಜೊತೆಗೆ ಭಜನಾ ಸಂಕೀರ್ತನಾ ಮ0ಡಲದ ಸಮಾರೋಪದ ಬಗ್ಗೆ ರೂಪುರೇಖೆ ತಯಾರಿಸಲು ಮಾರ್ಗದರ್ಶನ ನೀಡಿದರು. ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜೊತೆಗೆ ಚಿನ್ಮಯ ಮಿಷನ್ನ ಸಾದ್ವಿ ಕಾಶಿಕಾನಂದ ಅವರು ವಿಶೇಷ ಭೇಟಿ ನೀಡಿ ಭಜನಾಸಂಕೀರ್ತನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾರ್ಗದರ್ಶನ ನೀಡಿದರು.
ತಂತ್ರಿವರ್ಯ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಭಾಗ್ಯಸೂಕ್ತ ಮತ್ತು ಐಕ್ಯಮತ್ಯ ಸೂಕ್ತಗಳ ಪುಷ್ಪಾಂಜಲಿ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.