ಕುಂಬಳೆ ಉಪಜಿಲ್ಲಾ ಸೃಜನೋತ್ಸವ ಮುಕ್ತಾಯ
ಕುಂಬಳೆ: ವಿದ್ಯಾರಂಗ ಸಾಹಿತ್ಯ ವೇದಿಕೆಯ ಕುಂಬಳೆ ಉಪಜಿಲ್ಲಾ ಘಟಕದ ಆಶ್ರಯದಲ್ಲಿ ಕುಂಬಳೆಯ ಜಿಎಸ್ಬಿಎಸ್ ಶಾಲೆಯಲ್ಲಿ ಗುರುವಾರ ಸೃಜನೋತ್ಸವ ಕಾರ್ಯಕ್ರಮ ನಡೆಯಿತು. ಕನ್ನಡ ಹಾಗೂ ಮಲಯಾಳ ವಿಭಾಗದಲ್ಲಿ ಸಾಹಿತ್ಯ ಪ್ರಕಾರಗಳಾದ ಕಥಾರಚನೆ, ಪುಸ್ತಕ ಆಸ್ವಾದನೆ ಮತ್ತು ಪತ್ರಿಕಾ ವರದಿ ರಚನೆ, ಕವನ ರಚನೆ, ಕಂಠಪಾಠ, ಜಾನಪದ ಗಾಯನ, ಚಿತ್ರ ರಚನೆ ಸಹಿತ ವಿವಿಧ ಸ್ಪಧರ್ೆಗಳನ್ನು ಏರ್ಪಡಿಸಲಾಗಿತ್ತು.
ಕುಂಬಳೆ ಉಪಜಿಲ್ಲಾ ವ್ಯಾಪ್ತಿಯ ವಿವಿಧ ಶಾಲೆಗಳ ಅನೇಕ ಮಂದಿ ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉತ್ಸವದ ಕನ್ನಡ ವಿಭಾಗದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ (ಕವನ ರಚನೆ), ಸಾಹಿತಿ ಕೃಷ್ಣವೇಣಿ ಕಿದೂರು (ಕಥಾ ರಚನೆ), ಹಿರಿಯ ಶಿಕ್ಷಕಿ ವಾಣಿ ಪಿ ಎಸ್ (ಕಂಠಪಾಠ), ರಂಗ ಕಲಾವಿದ, ಶಿಕ್ಷಕ ಉದಯ ಸಾರಂಗ್(ಅಭಿನಯ), ಚುಟುಕು ಸಾಹಿತಿ, ಪತ್ರಕರ್ತ ವಿರಾಜ್ ಅಡೂರು (ಪುಸ್ತಕ ಆಸ್ವಾದನೆ ಮತ್ತು ಪತ್ರಿಕಾ ವರದಿ ರಚನೆ), ಜಾನಪದ ಸಾಹಿತಿ ಲಕ್ಷ್ಮಣ ಪೊನಾರಂ ಅಡೂರು (ಜಾನಪದ) ಸಹಕರಿಸಿದರು. ಸ್ಪಧರ್ೆಗಳು ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ನಡೆದಿತ್ತು. ಸೃಜನೋತ್ಸವ ಕಾರ್ಯಕ್ರಮದ ನೇತೃತ್ವವನ್ನು ಕುಂಬಳೆ ಉಪಜಿಲ್ಲಾ ವಿದ್ಯಾರಂಗ ಸಂಯೋಜಕ ಅನೀಶ್ ರಾಜ್ ಪಾಯಂ, ಶಿಕ್ಷಕ ಶ್ರೀಧರ ನಾಯಕ್ ಕುಕ್ಕಿಲ, ಶಿಕ್ಷಕಿ ಪ್ರಭಾವತಿ ಕೆದಿಲಾಯ ಪುಂಡೂರು ವಹಿಸಿದ್ದದ್ದರು.