HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಸಂಸದರಿಂದ ಶಾಸಕ ಸ್ಥಾನಕ್ಕೆ ಸ್ಪಧರ್ೆ ಸಾಧ್ಯತೆ
           ಮಂಜೇಶ್ವರ ಉಪಚುನಾವಣೆಯಲ್ಲಿ ಸಿಪಿಎಂ ಅಭ್ಯಥರ್ಿಯಾಗಿ ಪಿ.ಕರುಣಾಕರನ್
   ಕಾಸರಗೋಡು: ಜನಪರ ಶಾಸಕ ಪಿ.ಬಿ ಅಬ್ದುಲ್ ರಜಾಕ್ ನಿಧನದ ಬಳಿಕ ತೆರವುಗೊಂಡ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಂಸದ ಪಿ.ಕರುಣಾಕರನ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ನಿಚ್ಚಳವಾಗಿದೆ. ಮುಂದೆ ನಡೆಯಲಿರುವ ಉಪಚುನಾವಣೆಯಲ್ಲಿ ಸಿಪಿಐ(ಎಂ) ಪಕ್ಷದ ಅಭ್ಯಥರ್ಿ ಎಂದು ಪಿ.ಕರುಣಾಕರನ್ ಅವರನ್ನು ಬಿಂಬಿಸಿ ಹೆಚ್ಚಿನ ಮತಗಳನ್ನು ಬಾಚಿಕೊಂಡು ಜಯ ಸಾಧಿಸಬಹುದು ಎಂಬ ಯೋಜನೆ ರೂಪಿಸಲಾಗಿದೆ.
    ಉಪಚುನಾವಣೆಯು ನಾಲ್ಕು ತಿಂಗಳ ಒಳಗಾಗಿ ನಡೆಯುವ ಸಾಧ್ಯತೆಗಳಿದ್ದು, ಗೆದ್ದು ಶಾಸಕರಾದಲ್ಲಿ ಮಂಜೇಶ್ವರಕ್ಕೆ ಸಚಿವಸ್ಥಾನವನ್ನು ನೀಡಲಾಗುವುದು ಎಂದು ಪಕ್ಷದ ರಾಜ್ಯ ಘಟಕದ ಮೂಲಗಳು ಅಭಿಪ್ರಾಯಪಟ್ಟಿವೆ. ರಾಜ್ಯದ ಒಟ್ಟು ಮೂರು ವಿಧಾನಸಭಾ ಕ್ಷೇತ್ರಗಳು ಶಾಸಕರಿಲ್ಲದೆ ತೆರವುಗೊಂಡಿದ್ದು ಮೂರರಲ್ಲೂ ಜಯಭೇರಿ ಸಾಧಿಸುವ ಲಕ್ಷ್ಯವನ್ನು ಎಡರಂಗ ಹೊಂದಿದೆ. ಮಂಜೇಶ್ವರದಲ್ಲಿ ವರ್ಷಗಳಿಂದ ಕುಂಟಿತಗೊಂಡ ಸಿಪಿಎಂ ಪ್ರಭಾವವನ್ನು ಮರುಸ್ಥಾಪಿಸಿ ಓಟ್ ಬ್ಯಾಂಕ್ ಆಗಿ ಪರಿವತರ್ಿಸುವ ಲಕ್ಷ್ಯವನ್ನು ಇರಿಸಲಾಗಿದೆ. ಗೆದ್ದಲ್ಲಿ ಸಚಿವ ಸ್ಥಾನ ನಿಚ್ಚಳವಾಗಲಿದ್ದು, ವರ್ಷಗಳ ಹಿಂದೆ ಆರಂಭಗೊಂಡ ಪ್ರಭಾವಿ ಯೋಜನೆಗಳನ್ನು ಮರು ಆರಂಭಿಸಿ ಪೂರ್ಣಗೊಳಿಸುವ ಸಾಧ್ಯತೆಗಳಿವೆ. ಸಂಸದರಾಗಿ ಮೂರು ಬಾರಿ ಜಯಿಸಿರುವ ಪಿ.ಕರುಣಾಕರನ್ ಮುಂದಿನ ಲೋಕಸಭಾ ಚುನಾವಣೆಗೆ ಸ್ಪಧರ್ಿಸುವ ಅವಕಾಶ ಪಕ್ಷದಲ್ಲಿ ಇರದ ಕಾರಣ, ಕಣ್ಣೂರು ಜಿಲ್ಲೆಯ ಪ್ರಭಾವಿ ಸಿಪಿಎಂ ನಾಯಕ ಪಿ.ಜಯರಾಜನ್ ಅವರನ್ನು ಕಾಸರಗೋಡಿನಿಂದ ಸ್ಪಧರ್ೆಗಿಳಿಸುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಕೆ.ಪಿ ಸತೀಶ್ಚಂದ್ರನ್ ಹೆಸರು ಈ ಹಿಂದೆ ಕೇಳಿ ಬಂದಿದ್ದು ಲೋಕಸಭಾ ಅಭ್ಯಥರ್ಿಯಾಗಿ ಕಣಕ್ಕಿಳಿಯುವ ಸಾಧ್ಯತೆಯು ಇದೆ. ಐಕ್ಯರಂಗದ ಘಟಕ ಪಕ್ಷ ಮುಸ್ಲಿಂ ಲೀಗಿನ ಪ್ರಭಾವಿ ಕ್ಷೇತ್ರವಾಗಿರುವ ಮಂಜೇಶ್ವರದಲ್ಲಿ, ಹಿಂದೂ ಓಟ್ ಬ್ಯಾಂಕ್ ಸೃಷ್ಠಿಯಾಗಿದ್ದು ಬಿಜೆಪಿಯು ಪ್ರಭಲ ಪ್ರತಿಸ್ಪಧರ್ಿಯಾಗಿದೆ. 2016 ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದಿಂದ ಸಿಪಿಎಂ ಅಭ್ಯಥರ್ಿಯಾಗಿ ಸ್ಪಧರ್ಿಸಿದ್ದ ಮಾಜಿ ಶಾಸಕ ಸಿ.ಎಚ್ ಕುಞಂಬು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ. ಹಲವು ದಶಕಗಳ ಕಾಲ ಎಡರಂಗದ ಭದ್ರಕೋಟೆ ಎನಿಸಿದ್ದ ಮಂಜೇಶ್ವರ ಕ್ಷೇತ್ರದಲ್ಲಿ ಮುಂದೆ ನಡೆಯಲಿರುವ ಉಪಚುನಾವಣೆಯೂ ಸಿಪಿಎಂ ಪಕ್ಷ ಪ್ರತಿಷ್ಠೆಯ ಸಂಕೇತವೂ ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries