ದೈಗೋಳಿ ಪ್ರತಿಷ್ಟಾನದಿಂದ ಉಪಹಾರ ವಿತರಣೆ
ಮಂಜೇಶ್ವರ: ದೈಗೋಳಿ ಶ್ರೀ ಸಾಯಿಸೇವಾ ಪ್ರತಿಷ್ಟಾನದ ವತಿಯಿಂದ ಶಾಲಾ ಮಕ್ಕಳಿಗೆ ಬೆಳಗಿನ ಉಪಾಹಾರವನ್ನು ಉಚಿತವಾಗಿ ನೀಡುವ ಯೋಜನೆಯ ಉದ್ಘಾಟನೆಯನ್ನು ಪಾತೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಚಾಲನೆ ನೀಡಲಾಯಿತು.
ಸಂಸ್ಥೆಯ ಹಿರಿಯ ಸದಸ್ಯ ನಿವೃತ್ತ ಮುಖ್ಯಶಿಕ್ಷಕ ಕಣಕ್ಕೂರು ತಿರಮಲೇಶ್ವರ ಭಟ್ ಉಚಿತ ಉಪಾಹಾರ ಯೋಜನೆ ಉದ್ಘಾಟಿಸಿ ಮಾತನಾಡಿ, ಉಚಿತ ವೈದ್ಯಕೀಯ ಸೌಲಭ್ಯ, ನೀರು, ಆಹಾರ, ವಿದ್ಯಾಭ್ಯಾಸ ಇತ್ಯಾದಿ ನೀಡಿ ಮಾನವ ಕುಲದ ಉದ್ಧಾರಕ್ಕಾಗಿಯೇ ಜೀವನ ನಡೆಸಿದ ಭಗವಾನ್ ಶ್ರೀ ಸತ್ಯಸಾಯಿ ಬಾಬ ಅವರ ಭಕ್ತರಾದ ನಾವು ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಡಾ. ಉದಯಕುಮಾರ್ ನೂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕರ್ಾಡಿ ಗ್ರಾ.ಪಂ.ಪಂಚಾಯತಿ ಅಧ್ಯಕ್ಷ ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿ, ಪಂಚಾಯತಿ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು. ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್, ಸರ್ವ ಶಿಕ್ಷಾ ಅಭಿಯಾನದ ಯೋಜನಾಧಿಕಾರಿ ವಿಜಯಕುಮಾರ್, ಗ್ರಾಮ ಪಂಚಾಯತಿ ಸದಸ್ಯರಾದ ವಸಂತ, ಗೀತಾ ಸಾಮಾನಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು, ಶ್ರೀಸಾಯಿ ಸೇವಾ ಪ್ರತಿಷ್ಠಾನದ ಸದಸ್ಯರು ಮತ್ತು ಸಿಬಂದಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕ ಸುರೇಶ ಬಂಗೇರ ಸ್ವಾಗತಿಸಿ, ವಂದಿಸಿದರು.