ರಾಜ್ಯ ಸರಕಾರದಿಂದ ಹಿಂದುಗಳನ್ನು ವಿಘಟಿಸಿ ಗಲಭೆ ಸೃಷ್ಟಿಯ ಯತ್ನ- ಗಣೇಶನ್
ಕುಂಬಳೆ: ಎಡರಂಗ ಸರಕಾರ ಕೇರಳದಲ್ಲಿ ಹಿಂದುಗಳನ್ನು ಇಬ್ಬಾಗಿಸಿ ಜಾತಿಯ ಹೆಸರಲ್ಲಿ ಆಂತರಿಕ ಗಲಭೆಗೆ ಷಡ್ಯಂತ್ರ ನಡೆಸುತ್ತಿದೆ. ಪರಿಶಿಷ್ಟ ಜಾತಿ ,ಪಂಗಡಗಳ ನೇತಾರರನ್ನು ಶಬರಿಮಲೆ ವಿಚಾರದಲ್ಲಿ ಬಂಧಿಸುತ್ತಿದೆ ಎಂದು ಬಿಜೆಪಿ ಕೇರಳ ಘಟಕ ಸಂಘಟನಾ ಕಾರ್ಯದಶರ್ಿ ಗಣೇಶನ್ ಎಡರಂಗ ಸರಕಾರದ ಆಡಳಿತವನ್ನು ಖಂಡಿಸಿದರು.
ಕುಂಬಳೆ ವ್ಯಾಪಾರಿ ಭವನದಲ್ಲಿ ಬಿಜೆಪಿ ಮಂಡಲ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪೈವಳಿಕೆ ಬಾಯಾರಿನಲ್ಲಿ ಅಯ್ಯಪ್ಪ ನಾಮ ಜಪದಲ್ಲಿ ಭಾಗವಹಿಸಿದ ದಲಿತ ನೇತಾರ ಉಮೇಶ್ ರವರ ಅಂಗಡಿಯನ್ನು ದ್ವಂಸಗೊಳಿಸಿದ ಆರೋಪಿಗಳನ್ನು ಪೋಲಿಸ್ ಬೆಂಬಲದೊಂದಿಗೆ ಸರಕಾರ, ಸಿಪಿಎಂ ನೇತಾರರು ರಕ್ಷಿಸುತ್ತಿರುವುದು ಇದಕ್ಕೆ ಸ್ಪಷ್ಟ ನಿದರ್ಶನ ಎಂದು ಅವರು ಹೇಳಿದರು.
ದಲಿತರ ರಕ್ಷಣೆಗೆ ಬಿಜೆಪಿ ಬದ್ದವಾಗಿದೆ. ಎಡರಂಗ ನೇತಾರರು ಮುಸ್ಲಿಮರನ್ನು ಮುಂದಿಟ್ಟು ದಲಿತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆಯೆಂದು ಗಣೇಶನ್ ಆರೋಪಿಸಿದರು.
ಎಡರಂಗ, ಲೀಗ್, ಕಾಂಗ್ರೆಸ್ ಒಂದೇ ನಾಟ್ಯದ ವಿವಿಧ ಮುಖಗಳು. ಆಂತರಿಕ ಒಪ್ಪಂದದ ರಾಜಕೀಯ ಅವರ ದಂಧೆ ಎಂದ ಗಣೇಶನ್ ಪೈವಳಿಕೆ, ಎಣ್ಮಕಜೆ ಪಂಚಾಯತುಗಳಲ್ಲಿ ಈ ಪಕ್ಷಗಳು ಅನೈತಿಕತೆಯ ಸಂಬಂಧಗಳಿಂದ ರಾಜಕೀಯ ಬೆಳೆಸಿದೆ. ಅದು ಅವರ ರಾಜಕೀಯ ದಿವಾಳಿತನ ಎಂದು ಹೇಳಿದರು.
ಸತೀಶ್ಚಂದ್ರ ಭಂಡಾರಿ ಕೋಳಾರು ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಶ್ರೀಕಾಂತ್, ಪ್ರಮೀಳಾ ಸಿ.ನಾಯ್ಕ್, ಕುಂಟಾರು ರವೀಶ ತಂತ್ರಿ, ಎ.ಕೆ. ಕಯ್ಯಾರ್, ಬಾಬು ಮಾಸ್ಟರ್, ಸುರೇಶ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ಕಾರ್ಯದಶರ್ಿ ಮುರಳೀಧರ ಯಾದವ್ ಸ್ವಾಗತಿಸಿ, ಆದಶರ್್ ಬಿಎಂ ವಂದಿಸಿದರು.