ನಾಳೆ(ಅ.17) ಐತಿಹಾಸಿಕ ಮುಜುಂಗಾವು ಕಾವೇರಿ ತೀರ್ಥಸ್ನಾನ
ಕುಂಬಳೆ: ಕುಂಬಳೆ ಸೀಮೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಮುಜುಂಗಾವು ಶ್ರೀ ಪಾರ್ಥಸಾರಥೀಕೃಷ್ಣ ದೇವಸ್ಥಾನದ ಕೆರೆಯಲ್ಲಿ ಕಾವೇರಿ ತೀರ್ಥ ಸ್ನಾನ ನಾಳೆ ಅ. 17ರಂದು ಜರುಗಲಿದೆ. 50 ಸಹಸ್ರಕ್ಕೂ ಮಿಕ್ಕಿ ಭಕ್ತಾದಿಗಳು ತೀರ್ಥಸ್ನಾನದಲ್ಲಿ ಪಾಲ್ಗೊಳ್ಳುತ್ತಿರುವುದು ಇಲ್ಲಿಯ ವಿಶೇಷ .
ದೇವಸ್ಥಾನದ ಕೆರೆಯಲ್ಲಿ ಕಾವೇರಿ ಸಂಕ್ರಮಣದಂದು ಮಿಂದರೆ ಚರ್ಮರೋಗಗಳೆಲ್ಲವೂ ವಾಸಿಯಾಗುತ್ತದೆ ಎಂಬ ನಂಬಿಕೆ ಪ್ರಾಚೀನ ಪರಂಪರೆಯಲ್ಲಿ ನಡೆದುಕೊಂಡುಬರುತ್ತಿದೆ. ಮುಜುಂಗಾವು ತೀರ್ಥದ ಕೆರೆ ಹಾಗೂ ಮಡಿಕೇರಿ ಭಾಗಮಂಡಲದ ಕಾವೇರಿ ಉದ್ಭವ ಸ್ಥಾನದ ಕೆರೆಗೂ ನೇರ ಸಂಪರ್ಕವಿರುವ ಬಗ್ಗೆಯೂ ಐತಿಹ್ಯ ಕೇಳಿ ಬರುತ್ತಿದೆ. ಬೆಳಿಗ್ಗೆ 4ಗಂಟೆಗೆ ಆರಂಭಗೊಳ್ಳುವ ತೀರ್ಥ ಸ್ನಾನ ಮಧ್ಯಾಹ್ನ ಮಹಾಪೂಜೆಯ ವರೆಗೂ ನಡೆದುಬರುತ್ತದೆ. ಕೆಲವೊಂದು ಚರ್ಮರೋಗಗಳಲ್ಲಿ ಬಳಲುತ್ತಿರುವವರು ತೀರ್ಥ ಸ್ನಾನದಲ್ಲಿ ಪಾಲ್ಗೊಂಡು ಮುಕ್ತಿ ಹೊಂದಿದವರಿದ್ದಾರೆ. ವರ್ಷಪೂತರ್ಿ ಇಲ್ಲಿನ ಕೆರೆಯಲ್ಲಿ ನೀರು ತುಂಬಿಕೊಂಡಿರುವುದು ಇನ್ನೊಂದು ವಿಶೇಷ.
ನಾಳೆ ಬೆಳಿಗ್ಗೆ 4ಕ್ಕೆ ದೇವಸ್ಥಾನದ ಅರ್ಚಕರು ದೇವಸ್ಥಾನದ ಕೆರೆಯಿಂದ ಬೆಳ್ಳಿಕೊಡಪಾನದಲ್ಲಿ ತೀರ್ಥವನ್ನು ವಾದ್ಯಘೋಷಗಳೊಂದಿಗೆ ತಂದು ಶ್ರೀ ದೇವರಿಗೆ ಅಭಿಷೇಕ ಮಾಡಿದ ನಂತರ ತೀರ್ಥ ಸ್ನಾನ ಆರಂಭಗೊಳ್ಳುವುದು. ಬೆಳಿಗ್ಗೆ ಮಿಂದು ಶುಚಿಭರ್ೂತರಾಗಿ ಆಗಮಿಸುವ ಭಕ್ತಾದಿಗಳು ದೇವಸ್ಥಾನದ ಕೆರೆಯಲ್ಲಿ ಮುಳುಗೇಳುವ ಮೂಲಕ ತೀರ್ಥಸ್ನಾನ ಕೈಗೊಳ್ಳುತ್ತಾರೆ. ಬಳಿಕ ಬೆಳ್ತಿಗೆ ಅಕ್ಕಿ, ಹುರಳಿ ಸಹಿತ ಧಾನ್ಯಗಳ ಮಿಶ್ರಣವನ್ನು ಕೆರೆಯ ಸುತ್ತಲೂ ಪ್ರದಕ್ಷಿಣೆ ಬಂದು ಚೆಲ್ಲುತ್ತ ಬಂದು ಉಳಿದ ಧಾನ್ಯಗಳನ್ನು ದೇವಸ್ಥಾನದ ಎದುರಿನ ಪಾತ್ರೆಯಲ್ಲಿ ಸುರಿದು ಶ್ರೀ ದೇವರ ದರ್ಶನ ಪಡೆಯುವುದರೊಂದಿಗೆ ಹರಕೆ ಸಲ್ಲಿಕೆಯಾಗುತ್ತದೆ. ತೀರ್ಥ ಸ್ನಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಬೆಳಿಗ್ಗೆ 10ರಿಂದಲೇ ಭೋಜನ ಪ್ರಸಾದ ವಿತರಣೆ ಆರಂಭಗೊಳ್ಳುತ್ತದೆ. ತೀರ್ಥ ಸ್ನಾನದ ದಿನದಂದು ಪೆರ್ಲ, ಮುಳ್ಳೇರಿಯಾ ಭಾಗದಿಂದ ಕುಂಬಳೆಗೆ ತೆರಳುವ ಹಾಗೂ ವಾಪಸಾಗುವ ಎಲ್ಲ ಬಸ್ಗಳು ನಾಯ್ಕಾಪು ಹಾಗೂ ಸೂರಂಬೈಲು ಮುಖ್ಯರಸ್ತೆಯಿಂದ ಒಂದು ಕಿ.ಮೀ ದೂರದಲ್ಲಿರುವ ದೇವಸ್ಥಾನದ ಮೂಲಕವೇ ಹಾದು ಹೋಗುತ್ತದೆ.
ಪರಂಪರೆಯಲ್ಲಿ ದಾಖಲುಗೊಂಡ ರೋಗ ನಿವಾರಣೆ ನಂಬಿಕೆ:
ದೇವಸ್ಥಾನದ ತೀರ್ಥದ ಕೆರೆಯಲ್ಲಿಸ್ನಾನ ಮಾಡುವುದರಿಂದ ಚರ್ಮರೋಗ ವಾಸಿಯಾಗುತ್ತಿರುವ ಬಗೆಗಿನ ನಂಬಿಕೆ ಇಲ್ಲಿ ಶತಮಾನಗಳಿಂದ ಇರುವುದರಿಂದ ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುವಂತೆಮಾಡಿದೆ. ತೀರ್ಥ ಸ್ನಾನದ ಕೆರೆಯಲ್ಲಿ ಕೆಲವೊಂದು ವೈಜ್ಞಾನಿಕ ಅಂಶವೂ ಅಡಕವಾಗಿರುವ ಬಗ್ಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೆರೆಯ ಆಸು ಪಾಸು ಬೆಳೆದು ನಿಂತಿರುವ ಕೆಲವೊಂದು ಔಷಧೀಯಗುಣವುಳ್ಳ ಸಸ್ಯಗಳ ಬೇರುಗಳು ನೀರಿನ ಸಂಪರ್ಕ ಹೊಂದುವುದರಿಂದ ಆ ನೀರಿಗೆ ವಿಶೇಷ ಗುಣ ಪ್ರಾಪ್ತಿಯಾಗುತ್ತದೆ. ಅಲ್ಲದೆ, ನೀರಿಗೆ ಚೆಲ್ಲುವ ಧಾನ್ಯಗಳಿಂದಲೂ ನೀರಿನಲ್ಲಿ ಔಷಧೀಯ ಸತ್ವ ಬೆಳವಣಿಗೆ ಹೊಂದಲು ಕಾರಣವಾಗಬಲ್ಲದು. ಬಾವಿ ನೀರಿಗಿಂತ ಕಾಡಿನ ಮೂಲಕ ಹರಿದು ಬರುವ ನೀರು ಹೆಚ್ಚು ಸತ್ವಯುತ ಅಂಶಗಳನ್ನು ಒಳಗೊಂಡಿರುತ್ತದೆ ಎಂಬುದಾಗಿ ತಜ್ಞರು ಅಭಿಪ್ರಾಯಪಡುತ್ತಾರೆ.
ಅಭಿವೃದ್ದಿಯ ಹರಿಕಾರ-ಸಾಧಕ ಪುರುಷ ಮೂಡುಕೋಣಮ್ಮೆ ಸುಬ್ರಾಯಣ್ಣ:
ಒಂದು ಕಾಲಘಟ್ಟದಲ್ಲಿ ಎಲ್ಲೆಡೆಗಳಂತೆ ಮುಜುಂಗಾವು ಶ್ರೀಪಾರ್ಥಸಾರಥಿ ದೇವಾಲಯವೂ ಹಿನ್ನಡೆಗೆ ಸರಿದಿತ್ತು. ಆದರೆ ನಾಯ್ಕಾಪು ಪರಿಸರದ ಮೂಡುಕೋಣಮ್ಮೆ ಸುಬ್ರಾಯ ಭಟ್ ಎಂಬ ಸಾಧಕ ಪುರುಷನ ಎಡೆಬಿಡದ ದುಡಿಮೆಯ ಫಲವಾಗಿ ಹಂತಹಂತವಾಗಿ ಅಭಿವೃದ್ದಿಗೊಂಡ ಮುಜುಂಗಾವು ನಾಲ್ದೆಸೆಯಲ್ಲೂ ಗುರುತಿಸುವಂತಾಯಿತು. ಮಾಯಿಪ್ಪಾಡಿ ಅರಸರ ಸುಪಧರ್ಿಗೊಳಪಟ್ಟ ದೇವಾಲಯ ಸುಬ್ರಾಯ ಭಟ್ಟರ ಪರಿಶ್ರಮ, ಅಚಲ ಭಕ್ತಿ-ವಿಶ್ವಾಸಗಳಿಂದ ದಾನಿಗಳ ನೆರವಿನೊಂದಿಗೆ ಜೀಣರ್ೋದ್ದಾರಗೊಂಡು, ಆಗಮಿಸುವ ಭಕ್ತರಿಗೆ ಪೂಜಾದಿಗಳನ್ನು, ಕಾವೇರಿ ಸಂಕ್ರಾಂತಿಯಂದು ಹರಕೆ ಸೇವೆಗಳನ್ನು ಜೊತೆಗೆ ಇತರ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯುವಲ್ಲಿ ಯಶಸ್ವಿಯಾಗಿ ಶೀಘ್ರ ಫಲದಾಯಕ ಶಕ್ತಿಯಾಗಿ ಸೀಮೆಯ ಹಿರಿಮೆಯನ್ನು ಎತ್ತಿಹಿಡಿಯಿತು.
ಎರಡು ವರ್ಷಗಳ ಹಿಂದೆ ಸುಬ್ರಾಯ ಭಟ್ ಅವರು ನಮ್ಮನ್ನಗಲಿದ್ದು, ಪ್ರಸ್ತುತ ದೇವಾಲಯವನ್ನು ಆನುವಂಶಿಕ ಮೊಕ್ತೇಸರರಾಗಿರುವ ಮಾಯಿಪ್ಪಾಡಿ ಅರಮನೆಯ ಸಂಬಂಧಪಟ್ಟವರು ಮುನ್ನಡೆಸುತ್ತಿದ್ದಾರೆ.