ಜಿಲ್ಲೆಯ ಕೃಷಿ ನಾಶನಷ್ಟಕ್ಕೆ ಪರಿಹಾರ ಯೋಜನೆ
ಕಾಸರಗೋಡು: ಕಾಸರಗೋಡು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ಬಾಬು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕೃಷಿ ಅಧಿಕಾರಿಗಳು ಮತ್ತು ಭಾರತೀಯ ಕಿಸಾನ್ ಸಂಘದ ಪ್ರತಿನಿಧಿಗಳ ವಿಶೇಷ ಸಭೆಯು ಜರಗಿತು.
ಅತಿವೃಷ್ಟಿಯಿಂದಾಗಿ ಸಂಭವಿಸಿದ ಕೃಷಿ ನಾಶ ನಷ್ಟ ಹಾಗೂ ಪರಿಹಾರ ಕ್ರಮಗಳ ಕುರಿತು ಸಭೆಯಲ್ಲಿ ಸಮಾಲೋಚಿಸಲಾಯಿತು. ಬೆಳೆ ನಾಶನಷ್ಟದ ಬಗ್ಗೆ ಕೃಷಿಕರಿಗೆ ಪ್ರತೀ ಹೆಕ್ಟೇರ್ಗೆ 5000ರೂ. ಮತ್ತು ಕೃಷಿ ಅಭಿವೃದ್ಧಿಗೆ 5000ರೂ. ಸೇರಿದಂತೆ ಒಂದು ಹೆಕ್ಟೇರ್ಗೆ ಒಟ್ಟು 10,000ರೂ. ಗಳನ್ನು ಎರಡು ಹೆಕ್ಟೇರ್ ತನಕ ನೀಡಲು ಜಿಲ್ಲಾ ಕಲೆಕ್ಟರ್ ಸಭೆಯಲ್ಲಿ ಒಪ್ಪಿಗೆ ಸೂಚಿಸಿದರು.
ರೈತರು ಸಹಕಾರಿ ಬ್ಯಾಂಕ್ಗಳಿಂದ ಮತ್ತು ಇತರ ಬ್ಯಾಂಕ್ಗಳಿಂದ ಪಡೆದ ಕೃಷಿ ಬೆಳೆ ಸಾಲವನ್ನು ಈ ವರ್ಷ ವಸೂಲು ಮಾಡದೇ ಮುಂದಿನ ವರ್ಷ ಅಂದರೆ 2019ರ ಆಗಸ್ಟ್ ನಂತರ ವಸೂಲಾತಿ ಮಾಡುವಂತೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬೆಳೆ ಸಾಲ ಮನ್ನಾ ಮಾಡುವ ಕುರಿತು ಕೇರಳ ಸರಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಯಿತು. ಈ ವರ್ಷ ಆಗಿರುವ ಕೃಷಿ ನಾಶದ ಬಗ್ಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಸಮೀಕ್ಷೆ ನಡೆಸಲು ತೀಮರ್ಾನಿಸಲಾಯಿತು. ಬಳಿಕ ಈ ಕುರಿತ ಸಮಗ್ರ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿ ಪರಿಹಾರಕ್ಕೆ ಆಗ್ರಹಿಸಲು ನಿರ್ಧರಿಸಲಾಯಿತು.
ಭಾರತೀಯ ಕಿಸಾನ್ ಸಂಘವು ಈ ಹಿಂದೆಯೇ ಜಿಲ್ಲಾಧಿಕಾರಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದ್ದು, ಅದರಲ್ಲಿ ಕೃಷಿಕರಿಗೆ ಆದ ಬೆಳೆ ನಾಶನಷ್ಟದ ಬಗ್ಗೆ ವಿವರಿಸಿ ಪರಿಹಾರಕ್ಕೆ ಒತ್ತಾಯಿಸಲಾಗಿತ್ತು. ಆದಷ್ಟು ಬೇಗನೆ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರದ ವ್ಯವಸ್ಥೆ ಮಾಡಬೇಕೆಂದು ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.
ಭಾರತೀಯ ಕಿಸಾನ್ ಸಂಘದ ಕಾಸರಗೋಡು ಜಿಲ್ಲಾ ಕಾರ್ಯದಶರ್ಿ ಸದಾನಂದ ಕೊಮ್ಮಂಡ, ಸಂಘಟನೆಯ ಪೈವಳಿಕೆ ಪಂಚಾಯತ್ ಸಮಿತಿಯ ಅಧ್ಯಕ್ಷ ಸುರೇಶ್ ಹೊಳ್ಳ ಕಯ್ಯಾರು ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.